ಯುಪಿಐ, ರೂಪೇ, ಕ್ರೆಡಿಟ್ ಕಾರ್ಡ್ ಮೂಲಕ ತುರ್ತು ವ್ಯಾಪಾರ ಹಾಗೂ ವೈಯಕ್ತಿಕ ಅಗತ್ಯಗಳಿಗೆ ಸುಲಭ ಸಾಲ ಸೌಲಭ್ಯ ದೊರೆಯಲಿದೆ. ಡಿಜಿಟಲ್ ವಹಿವಾಟು ಅಳವಡಿಸಿಕೊಂಡ ವ್ಯಾಪಾರಿಗಳಿಗೆ ರೂ. 1,600ರ ವರೆಗೆ ಕ್ಯಾಶ್‌ಬ್ಯಾಕ್ ಪ್ರೋತ್ಸಾಹ ನೀಡಲಾಗುತ್ತಿದೆ. ಜತೆಗೆ ಉದ್ಯಮಶೀಲತೆ, ಆರ್ಥಿಕ ಸಾಕ್ಷರತೆ, ಡಿಜಿಟಲ್ ಕೌಶಲ ಮತ್ತು ಮಾರುಕಟ್ಟೆ ಅರಿವು ಹೆಚ್ಚಿಸುವ ಉದ್ದೇಶದಿಂದ ವಿವಿಧ ತರಬೇತಿಗಳನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.