Peanut: ನರೇಗಲ್ಲ ಹೋಬಳಿಯಾದ್ಯಂತ ಶೇಂಗಾ ಇಳುವರಿ ಕುಂಠಿತ

ನರೇಗಲ್ಲ ಜಮೀನೊಂದರಲ್ಲಿ ಅತಿಯಾದ ಮಳೆಯಿಂದಾಗಿ ಬಳ್ಳಿಯೊಂದರಲ್ಲಿ Peanut 4-5 ಕಾಯಿಗಳು ಬೆಳೆದಿರುವುದು.
ನರೇಗಲ್ಲ ಜಮೀನೊಂದರಲ್ಲಿ ಅತಿಯಾದ ಮಳೆಯಿಂದಾಗಿ ಬಳ್ಳಿಯೊಂದರಲ್ಲಿ Peanut 4-5 ಕಾಯಿಗಳು ಬೆಳೆದಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಮತ್ತೆ ಸಂಕಷ್ಟಕ್ಕೀಡಾದ ರೈತ
  • ಗಿಡವೊಂದರಲ್ಲಿ 4-5 ಕಾಯಿ
  • ಮಾಡಿದ ಖರ್ಚೂ ವಾಪಸ್ ಬಾರದ ಸ್ಥಿತಿ
ನರೇಗಲ್ಲ: ಪಟ್ಟಣ ಸೇರಿದಂತೆ ಹೋಬಳಿಯಾದ್ಯಂತ ಮಸಾರಿ ಭೂಮಿಯಲ್ಲಿ ಬೆಳೆಯಲಾದ ಶೇಂಗಾ Peanut ಇಳುವರಿ ಕುಂಠಿತಗೊಂಡಿದ್ದು, ರೈತರನ್ನು ಸಂಕಷ್ಟಕ್ಕೆ ತಳ್ಳಿದೆ. ಉತ್ತಮ ಆದಾಯದ ನಿರೀಕ್ಷೆಯಲ್ಲಿದ್ದ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. 
ಮುಂಗಾರಿನಲ್ಲಿ ಅತಿಯಾದ ಮಳೆಯಿಂದ ಹೆಸರು ಬೆಳೆ ಸಂಪೂರ್ಣ ನಾಶವಾಗಿ ತೊಂದರೆ ಅನುಭವಿಸಿದ್ದ ರೈತರು ಶೇಂಗಾ ಬೆಳೆ ಕೈಹಿಡಿಯಬಹುದು ಎಂಬ ನಿರೀಕ್ಷೆಯಲ್ಲಿದ್ದರು. ಆದರೆ, ಶೇಂಗಾ ಇಳುವರಿ ಕುಂಠಿತವಾಗಿದ್ದು ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ನರೇಗಲ್ಲ. ಕೋಡಿಕೊಪ್ಪ, ಕೋಚಲಾಪೂರ, ಮಲ್ಲಾಪೂರ, ದ್ಯಾಂಪೂರ, ತೋಟಗಂಟಿ, ಅಬ್ಬಿಗೇರಿ, ಜಕ್ಕಲಿ, ಬೂದಿಹಾಳ ಸೇರಿದಂತೆ ಹೋಬಳಿಯಾದ್ಯಂತ ಮಸಾರಿ ಭೂಮಿಯಲ್ಲಿ ಪ್ರಮುಖ ಮುಂಗಾರಿನ ವಾಣಿಜ್ಯ ಬೆಳೆಯಾದ ಶೇಂಗಾವನ್ನು ಮಳೆಯಾಶ್ರಿತ ಜಮೀನಿನಲ್ಲಿ 8000 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿತ್ತು. ಕಾಯಿ ಕಟ್ಟುವ ಸಂದರ್ಭದಲ್ಲಿ ಹೆಚ್ಚು ಮಳೆಯಾದ ಕಾರಣ ಗಿಡ ಹುಲಾಸಾಗಿ ಬೆಳೆದರೂ ಕಾಯಿ ಕಟ್ಟುವು ಪ್ರಮಾಣ ಇಳಿಕೆಯಾಗಿದೆ. ಗಿಡವೊಂದರಲ್ಲಿ 4-5 ಕಾಯಿಗಳು ಬೆಳೆದಿವೆ. 

ಕಾಯಿ ಇಲ್ಲ ಬರಿ ಹೊಟ್ಟು

ಶೇಂಗಾ Peanut ಬೆಳೆಯನ್ನು ದನಕರುಗಳಿಗೆ ಹೊಟ್ಟು ಆಗುತ್ತದೆ ಎಂಬ ಉದ್ಧೇಶದಿಂದ ಬಿತ್ತನೆ ಮಾಡಲಾಗುತ್ತದೆ. ಶೇಂಗಾ ಹೊಟ್ಟನ್ನು ಜಾನುವಾರುಗಳು ಇಷ್ಟಪಟ್ಟು ತಿನ್ನುತ್ತವೆ ಹಾಗೂ ಶೇಂಗಾ ಹೊಟ್ಟಿನಲ್ಲಿ ಹೆಚ್ಚಿನ ಪೊಷಕಾಂಶ ಇರುವುದರಿಂದ ಜಾನುವಾರುಗಳ ಆರೋಗ್ಯಕ್ಕೂ ಉತ್ತಮವಾದ ಆಹಾರವಾಗಿದೆ. ಈ ಕಾರಣಕ್ಕಾಗಿಯೂ ರೈತರು ತಮಗೆ ಶೇಂಗಾ ಬಂದರೆ ಜಾನುವಾರುಗಳಿಗೆ ಹೊಟ್ಟು ಬರುತ್ತದೆ ಎಂದು ಶೇಂಗಾ ಬಿತ್ತನೆ ಮಾಡುತ್ತಾರೆ. ಪ್ರಸಕ್ತ ವರ್ಷ ಉತ್ತಮ ಹೊಟ್ಟು ಮಾತ್ರ ಬಂದಿದ್ದು ಶೇಂಗಾ ಬರದೇ ಇರುವುದು ಬೆಳೆಗಾರರನ್ನು ಚಿಂತೆಗೀಡು ಮಾಡಿದೆ.

ಶೇಂಗಾ ಬೆಳೆಯನ್ನು ಪ್ರತಿವರ್ಷ ಒಂದೇ ಜಮೀನಿನಲ್ಲಿ ಬೆಳೆದರೆ ಭೂಮಿಯ ಫಲವತ್ತತೆ ಕಡಿಮೆಯಾಗಿ ಇಳುವರಿ ಕುಂಠಿತಗೊಳ್ಳುತ್ತದೆ. ಆದರೂ, ಪ್ರಸಕ್ತ ವರ್ಷದಲ್ಲಿ ಮಳೆಯ ಕೊರತೆಯಿಂದಾಗಿ ಇಳುವರಿ ಸಾಕಷ್ಟು ಕುಂಠಿತಗೊಂಡಿದೆ. ಪ್ರತಿ ವರ್ಷ ಬೇರೆ ಬೇರೆ ಬೆಳೆಗಳನ್ನು ಆವರ್ತನ ಮಾಡುವುದರಿಂದ ಮತ್ತು ಅಂತರ ಬೆಳೆ ಬೆಳೆಯುವುದರಿಂದ ಭೂಮಿಯ ಫಲವತ್ತತೆ ಸುಧಾರಿಸುತ್ತದೆ.

— ಬಸವರಾಜ ಗದುಗಿನ, ಕೃಷಿ ಅಧಿಕಾರಿಗಳು, ರೈತ ಸಂಪರ್ಕ ಕೇಂದ್ರ ನರೇಗಲ್ಲ

ಒಂದು ಎಕರೆ ಮಸಾರಿ ಭೂಮಿಯಲ್ಲಿ ಶೇಂಗಾ ಬಿತ್ತನೆಗೆ 10 ಸಾವಿರ ರೂ. ಖರ್ಚು ಬರುತ್ತದೆ. ರಾಶಿ ಮಾಡಿ ಫಸಲು ಪಡೆಯಲು ಏನಿಲ್ಲವೆಂದರೂ 18-20 ಸಾವಿರ ರೂ. ಖರ್ಚಾಗುತ್ತದೆ. ಆದರೆ, ಈ ವರ್ಷ ಒಂದು ಎಕರೆಗೆ 2-3 ಚೀಲ ಇಳುವರಿ ಬರುವುದು ಕಷ್ಟ ಸಾಧ್ಯವಾಗಿದೆ. ಆದ್ದರಿಂದ ಸರ್ಕಾರ ಬರ ಪರಿಹಾರ ಘೋಷಣೆ ಮಾಡುವ ಮೂಲಕ ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕು.

— ಅಶೋಕ ಗುರುವಡೇಯರ, ರೈತರು, ಕೋಡಿಕೊಪ್ಪ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net