NSS: ಸದೃಢ ದೇಶ ನಿರ್ಮಾಣಕ್ಕೆ ಸೇವಾಗುಣ ಅಗತ್ಯ

ನರಗುಂದ ತಾಲೂಕಿನ ಮೂಗನೂರಿನಲ್ಲಿ ಶ್ರೀಯಡೆಯೂರ ಸಿದ್ಧಲಿಂಗೇಶ್ವರ ಕಾಲೇಜಿನ (NSS) ಎನ್ನೆಸ್ಸೆಸ್ ವಾರ್ಷಿಕ ಶಿಬಿರದ ಉದ್ಘಾಟನೆ ಸಮಾರಂಭ ಮಂಗಳವಾರ ಜರುಗಿತು. ವಿ.ಬಿ. ಪಾಟೀಲ, ಗುರಪ್ಪ ಆದೆಪ್ಪನವರ, ಬಿ.ಬಿ. ಕುಂಬಾರ, ಜಿ.ಎ. ಹಿರೇಗೌಡ್ರ ಇತರರಿದ್ದರು.

Published on
ನರಗುಂದ: ತಾಲೂಕಿನ ಮೂಗನೂರ ಗ್ರಾಮದಲ್ಲಿ ಪಟ್ಟಣದ ಶ್ರೀ ಯಡೆಯೂರ ಸಿದ್ಧಲಿಂಗೇಶ್ವರ ಕಾಲೇಜಿನ (NSS) ಎನ್ನೆಸ್ಸೆಸ್ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನೆ ಸಮಾರಂಭ ಜರುಗಿತು.
ಬಿಜೆಪಿ ನರಗುಂದ ಮಂಡಲ ಮಾಜಿ ಅಧ್ಯಕ್ಷ ಗುರಪ್ಪ ಆದೆಪ್ಪನವರ ಮಾತನಾಡಿ, ಮೂಗನೂರ ಗ್ರಾಮದಲ್ಲಿ ಎನ್ನೆಸ್ಸೆಸ್ ಶಿಬಿರ ಆಯೋಜಿಸಿರುವುದು ಶ್ಲಾಘನೀಯ. ಸಮಾಜದಲ್ಲಿರುವ ಪ್ರತಿಯೊಬ್ಬರೂ ಸೇವಾ ಮನೋಭಾವನೆ ಬೆಳೆಸಿಕೊಂಡಿದರೆ ಸ್ವಚ್ಛತೆಯ ಜತೆಗೆ ಹಳ್ಳಿಗಳ ಸರ್ವಾಂಗಿಣ ಅಭಿವೃದ್ಧಿಗೆ ಪೂರಕ ವಾತಾವರಣ ಸೃಷ್ಟಿಸಿದಂತಾಗುತ್ತದೆ. ಸದೃಢ ದೇಶ ನಿರ್ಮಾಣವಾಗಬೇಕಾದರೆ ಯುವಕರು ಸೇವಾಗುಣ ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಸಂಸ್ಥೆಯ ಸಂಸ್ಥಾಪಕ ವಿ.ಬಿ. ಪಾಟೀಲ, ನಿವೃತ್ತ ಮುಖ್ಯೋಪಾಧ್ಯಾಯ ಬಿ.ಬಿ. ಕುಂಬಾರ, ನಿವೃತ್ತ ಶಿಕ್ಷಕ ಜಿ.ಎ. ಹೀರೆಗೌಡ್ರ, ಕಾರ್ಯಕ್ರಮದ ಯೋಜನಾಧಿಕಾರಿ ಶಿವರಾಜ ಬೆಳ್ಳೇರಿ, ರಮೇಶ ನಾಯ್ಕರ, ಉಪನ್ಯಾಸಕ ರಮೇಶ ಐನಾಪೂರ ಮಾತನಾಡಿದರು. ಜಿ.ಎಂ. ಕುರಿ, ಸುದೀಪ ಪಾಟೀಲ, ರೇಷ್ಮಾ ಸವದತ್ತಿ, ಲಕ್ಷ್ಮೀ, ಅಕ್ಷತಾ ನಿಲೋಗಲ್, ರೆಹಮಾನ ಹವಾಲ್ದಾರ್ ಉಪಸ್ಥಿತರಿದ್ದರು. ಸುಕನ್ಯಾ ಪಾಟೀಲ್, ರಮೇಶ ನಾಯ್ಕರ ನಿರ್ವಹಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net