ಯಾರೊಬ್ಬರೂ ಹಸಿವೆಯಿಂದ ಬಳಲಬಾರದು :  ಡಾ. ಎಚ್.ಕೃಷ್ಣ

ದೇಶದ ಪ್ರತಿಯೊಬ್ಬ ನಾಗರಿಕನಿಗೂ ಗುಣಮಟ್ಟದ ಆಹಾರ ಒದಗಿಸಬೇಕು.
Gadag Pressmeet
Published on: 



ಗದಗ :  ದೇಶದ ಪ್ರತಿಯೊಬ್ಬ ನಾಗರಿಕನಿಗೂ ಗೌರವಯುತವಾಗಿ ಬದುಕಲು ಗುಣಮಟ್ಟದ ಮತ್ತು ಪೌಷ್ಟಿಕಾಂಶಯುಕ್ತ ಆಹಾರ ಒದಗುವಂತೆ ನೋಡಿಕೊಳ್ಳುವುದು    ಕರ್ನಾಟಕ ರಾಜ್ಯ ಆಹಾರ ಆಯೋಗದ ಪ್ರಮುಖ ಉದ್ದೇಶವಾಗಿದೆ ಎಂದು ಕರ್ನಾಟಕ ರಾಜ್ಯ ಆಹಾರ ಆಯೋಗದ ಅಧ್ಯಕ್ಷರಾದ ಡಾ. ಎಚ್.ಕೃಷ್ಣ ಅವರು ತಿಳಿಸಿದರು.

ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ದಲ್ಲಿ  ಗುರುವಾರ  ರಾಷ್ಟಿçÃಯ ಆಹಾರ  ಆಯೋಗದಿಂದ ಏರ್ಪಡಿಸಲಾಗಿದ್ದ  ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು. ಕರ್ನಾಟಕ ರಾಜ್ಯ ಆಹಾರ ಆಯೋಗದಿಂದ   ನವೆಂಬರ್ 18 ರಿಂದ 20 ರವರೆಗೆ ಗದಗ ಜಿಲ್ಲಾ ಪ್ರವಾಸ ಹಮ್ಮಿಕೊಳ್ಳಲಾಗಿದೆ.  ನಿನ್ನೆ ( ನವೆಂಬರ್ 18 ರಂದು ) ಆಯೋಗದಿಂದ  ಜಿಲ್ಲೆಯ ವಿವಿಧ ತಾಲೂಕುಗಳ  ಅಂಗನವಾಡಿ ಕೇಂದ್ರ, ಆಸ್ಪತ್ರೆ, ಎಫ್.ಸಿ.ಐ ಗೋಡೌನ್ , ಸಮಾಜ ಕಲ್ಯಾಣ, ಅಲ್ಪಸಂಖ್ಯಾತರ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಹಾಸ್ಟೆಲ್, ನ್ಯಾಯ ಬೆಲೆ ಅಂಗಡಿ, ಆಹಾರ ಧಾನ್ಯ ಸಗಟು ಮಳಿಗೆ, ಕೃಷಿ ಉತ್ಪನ್ನ ಮಾರುಕಟ್ಟೆ ಗಳಿಗೆ  ಅನಿರೀಕ್ಷಿತ ಭೇಟಿ ನೀಡಿ  ತಪಾಸಣೆ ನಡೆಸಲಾಯಿತು.  ಪರಿಶೀಲನೆ ಮಾಡಿದ ಸಂದರ್ಭದಲ್ಲಿ  ಕೆಲವು ಗೋಡೌನ್‌ಗಳಲ್ಲಿ  ಅಕ್ಕಿ ದಾಸ್ತಾನಿನಲ್ಲಿ ವ್ಯತ್ಯಾಸ ಕಂಡು ಬಂದಿದೆ.  ಸಾರ್ವಜನಿಕ ವಿತರಣಾ ಪದ್ಧತಿಯಲ್ಲಿ ಇಲಾಖೆಯಿಂದ  ಗೋಡೌನ್‌ಗೆ ಬಂದಿರುವ / ದಾಸ್ತಾನಾದ  ಅಕ್ಕಿಯ ಪ್ರಮಾಣ   ಹಾಗೂ   ಫಲಾನುಭವಿಗಳಿಗೆ ವಿತರಣೆ ಮಾಡಿದ ಅಕ್ಕಿ ಪ್ರಮಾಣ  ನಂತರ ಬಾಕಿ ಉಳಿದ ಅಕ್ಕಿಯ ಪ್ರಮಾಣದಲ್ಲಿ ತಾಳೆ ಹೊಂದದೇ  ವ್ಯತ್ಯಾಸ ಬಂದಿತು.  ಕೆಲವು ಬಡತನ ರೇಖೆಗಿಂತ ಮೇಲಿರುವವರು ( ಎಪಿಎಲ್ ಕಾರ್ಡುದಾರರು)  ಅನಧಿಕೃತವಾಗಿ  ಬಿಪಿಎಲ್ ಕಾರ್ಡ ಹೊಂದಿರುವುದರಿAದ ಅಂತಹವರ  ಬಿಪಿಎಲ್ ಕಾರ್ಡರದ್ದು ಮಾಡುವ ಸಂದರ್ಭದಲ್ಲಿ ನಿಜವಾದ ಫಲಾನುಭವಿಗಳಾದ ಬಡತನ ರೇಖೆಗಿಂತ ಕೆಳಗಿರುವವರ  ಬಿಪಿಎಲ್ ಕಾರ್ಡುಗಳನ್ನೇ ರದ್ದು ಮಾಡಿರುವ ಪ್ರಕರಣಗಳು ಕಂಡು ಬಂದಿವೆ.    ಕೆಲವೊಂದು ಎಪಿಎಂಸಿ ಗೋಡೌನ್‌ಗಳಲ್ಲಿ ನಿಗದಿಪಡಿಸಿದ ಪ್ರಮಾಣಕ್ಕಿಂತ  ಹೆಚ್ಚಿನ ಪ್ರಮಾಣ ಅಕ್ಕಿ ದಾಸ್ತಾನು ಇದ್ದದ್ದು ಕಂಡು ಬಂದಿದೆ.  ಈ ನಿಟ್ಟಿನಲ್ಲಿ ಸಂಬAಧಿಸಿದ ತಪ್ಪಿತಸ್ಥರ ಮೇಲೆ ಕಾನೂನಿನ ಅಡಿಯಲ್ಲಿ  ಶಿಸ್ತು ಕ್ರಮ ಕೈಗೊಳ್ಳಲಾಗುವುದು.  

ಅನ್ನಭಾಗ್ಯ ಯೋಜನೆಯ ಸೌಲಭ್ಯ ಅರ್ಹ ಫಲಾನುಭವಿಗೆ ತಲುಪಬೇಕು.  ಅನ್ನಭಾಗ್ಯ ಅಕ್ಕಿಯು ಕಾಳಸಂತೆಯಲ್ಲಿ ಮಾರಾಟವಾಗದಂತೆ ನೋಡಿಕೊಳ್ಳಬೇಕು.  ಬಡತನದಿಂದ ಬಳಲುತ್ತಿರುವವರು ಹಸಿವಿನಿಂದ ನರಳಬಾರದು. ಗರ್ಭಿಣಿಯರು, ಬಾಣಂತಿಯರು, ಚಿಕ್ಕಮಕ್ಕಳು ಅಪೌಷ್ಟಿಕತೆಯಿಂದ ಬಳಲಬಾರದು. ಅವರು ಗುಣಮಟ್ಟದ ಹಾಗೂ  ಆರೋಗ್ಯಯುತ ಜೀವನ ನಡೆಸಬೇಕು  ಎನ್ನುವ ಉದ್ದೇಶದಿಂದ  ಸರ್ಕಾರವು ವಿವಿಧ ಯೋಜನೆಗಳನ್ನು  ಜಾರಿ ಮಾಡಿದೆ.  ಈ ನಿಟ್ಟಿನಲ್ಲಿ ಯೋಜನೆಯ ಸೌಲಭ್ಯದ ವಿತರಣೆಯಲ್ಲಿ ವಿಳಂಬ ಹಾಗೂ ದುರುಪಯೋಗವಾಗಿರುವುದು ಕಂಡು ಬಂದರೆ ಆಯೋಗವು ಶಿಸ್ತು ಕ್ರಮ ಕೈಗೊಳ್ಳುತ್ತದೆ. ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಕುಂದುಕೊರತೆ ಕೋಶ ಇದ್ದು ಜಿಲ್ಲಾಧಿಕಾರಿಗಳೇ ಆ ಕೋಶದ ಅಧ್ಯಕ್ಷರಾಗಿರುತ್ತಾರೆ ಎಂದು ತಿಳಿಸಿದರು.    

ಅನ್ನಭಾಗ್ಯ ಅಕ್ಕಿ ವಿತರಣೆ  ಯೋಜನೆಯಲ್ಲಿ  ಓರ್ವ ಅರ್ಹ ಫಲಾನುಭವಿಗೆ  ಕೇಂದ್ರ ಸರ್ಕಾರದಿಂದ 5 ಕೆಜಿ ಅಕ್ಕಿ ಹಾಗೂ ರಾಜ್ಯ ಸರ್ಕಾರದಿಂದ 5 ಕೆಜಿ ಹೀಗೆ ಒಟ್ಟು 10 ಕೆಜಿ ಅಕ್ಕಿಯನ್ನು  ವಿತರಣೆ ಮಾಡಲಾಗುತ್ತಿದೆ. ಸರಿಯಾದ ಪ್ರಮಾಣದಲ್ಲಿಯೇ ಫಲಾನುಭವಿಗೆ ಅಕ್ಕಿ ವಿತರಿಸಬೇಕು. ನಿಗದಿತ ಪ್ರಮಾಣಕ್ಕಿಂತ ಕಡಿಮೆ ಅಕ್ಕಿ ವಿತರಿಸಿದಲ್ಲಿ ಅಥವಾ ರೇಶನ್ ಅಂಗಡಿಯವರು ಫಲಾನುಭವಿಗೆ ಅಕ್ಕಿ ವಿತರಿಸುವಾಗ ಹಣ ಕೇಳುವುದು ಮಾಡಿದಲ್ಲಿ ಅಂತಹವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು.  ಪ್ರತಿ ತಿಂಗಳು 26 ದಿನ ಪಡಿತರ ಅಂಗಡಿ ತೆರೆದು ಫಲಾನುಭವಿಗಳಿಗೆ ಸಮರ್ಪಕವಾಗಿ ಸೇವೆ ಒದಗಿಸಬೇಕು.  ಯಾವುದೇ ರೀತಿಯ ಭೃಷ್ಟಾಚಾರವಾಗಬಾರದು. ವೃದ್ದಾಪ್ಯ ವೇತನ, ಅಂಗವಿಕಲರ ಮಾಸಾಶನ ಸೇರಿದಂತೆ ಸಾಮಾಜಿಕ ಬದ್ರತಾ ಯೋಜನೆಯ ಸೌಲಭ್ಯಗಳ ವಿತರಣೆಯಲ್ಲಿ  ಅವ್ಯವಹಾರವಾಗಬಾರದು ಎಂದು ತಿಳಿಸಿದರು.

ಮುಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಐಸಿಡಿಎಸ್ ಯೋಜನೆಯಡಿ 6 ತಿಂಗಳಿನಿAದ 3 ವರ್ಷದ ಮಕ್ಕಳಿಗೆ ಅಂಗನವಾಡಿ ಕೇಂದ್ರಗಳ ಮೂಲಕ  ಉಚಿತ ಪೌಷ್ಟಿಕ ಅಹಾರವನ್ನು ವಿತರಿಸಲಾಗುತ್ತಿದೆ.  ತೀವ್ರ ಅಥವಾ ಸಾಧಾರಣ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಹೆಚ್ಚಿನ ಪೋಷಣೆಯ ಅಗತ್ಯವಿರುವುದರಿಂದ ಹೆಚ್ಚಿನ ಆಹಾರ ನೀಡಲಾಗುತ್ತದೆ.  ಈ ನಿಟ್ಟಿನಲ್ಲಿ ಪೌಷ್ಟಿಕ ಆಹಾರ ವಿತರಣೆಯಲ್ಲಿ ಕಳಪೆ  ಗುಣಮಟ್ಟ ಹಾಗೂ ವಿತರಣೆಯಲ್ಲಿ ವಿನಾಕಾರಣ ವಿಳಂಬವಾದರೆ ಆಯೋಗಕ್ಕೆ ದೂರು ಸಲ್ಲಿಸಬಹುದಾಗಿದೆ.   ಕೃಷಿಗೆ ಸಂಬAಧಿತ ಕೃಷಿ ಉಪಕರಣಗಳನ್ನು  ಸಬ್ಸಿಡಿ ದರದಲ್ಲಿ ಒದಗಿಸುವುದು ಹಾಗೂ ರಿಯಾಯತಿ  ದರದಲ್ಲಿ  ಕೀಟನಾಶಕಗಳ ವಿತರಣೆ ಕಾರ್ಯದಲ್ಲಿ  ಏನಾದರೂ  ಸಮಸ್ಯೆಗಳು ಅಥವಾ ಕ್ರಮಗಳು ಕಂಡು ಬಂದಲ್ಲಿ ಆಯೋಗದ ಗಮನಕ್ಕೆ ತರಬಹುದಾಗಿದೆ. ರೆಸ್ಟೋರೆಂಟ್ , ಹೋಟೆಲ್ , ಹಾಸ್ಟೆಲ್ ಗಳಲ್ಲಿ ಆಹಾರ  ಪೂರೈಕೆಯಲ್ಲಿ  ದೋಷ ಕಂಡು ಬಂದರೆ , ಕಳಪೆ ಗುಣಮಟ್ಟದ ಆಹಾರ ವಿತರಿಸುತ್ತಿದ್ದರೆ   ಆಯೋಗಕ್ಕೆ ದೂರು ನೀಡಬಹುದಾಗಿದೆ ಎಂದರು.

ಪತ್ರಿಕಾಗೋಷ್ಟಿಯಲ್ಲಿ ರಾಜ್ಯ ಆಹಾರ ಆಯೋಗದ ಸದಸ್ಯರುಗಳಾದ ಲಿಂಗರಾಜ ಕೋಟೆ, ಸುಮಂತರಾವ್, ಮಾರುತಿ ಎಂ. ದೊಡ್ಡಲಿಂಗಣ್ಣವರ, ಶ್ರೀಮತಿ ಎ. ರೋಹಿಣಿ ಪ್ರಿಯ, ಆಹಾರ ಇಲಾಖೆಯ  (ಪ್ರಭಾರ)  ಸಹಾಯಕ ನಿರ್ದೇಶಕರಾದ ದೊಡ್ಡಮನಿ ಹಾಜರಿದ್ದರು.