Hindu ಹಿಂದೂ ಸಮಾಜ ಒಡೆಯಲು ಯಾರಿಂದಲೂ ಆಗಲ್ಲ

ನರಗುಂದ ಬಾಬಾಸಾಹೇಬರ ಅರಮನೆ ಆವರಣದಲ್ಲಿ ಹಮ್ಮಿಕೊಂಡಿದ್ದ ಹಿಂದೂ (Hindu) ಸಮ್ಮೇಳನವನ್ನು ಮಠಾಧೀಶರು ಪುಷ್ಪಾರ್ಚನೆಗೈದು ಭಾನುವಾರ ಉದ್ಘಾಟಿಸಿದರು.
ನರಗುಂದ ಬಾಬಾಸಾಹೇಬರ ಅರಮನೆ ಆವರಣದಲ್ಲಿ ಹಮ್ಮಿಕೊಂಡಿದ್ದ ಹಿಂದೂ (Hindu) ಸಮ್ಮೇಳನವನ್ನು ಮಠಾಧೀಶರು ಪುಷ್ಪಾರ್ಚನೆಗೈದು ಭಾನುವಾರ ಉದ್ಘಾಟಿಸಿದರು.
Published on
ನರಗುಂದ: ಇಡೀ ಜಗತ್ತಿಗೆ ಶಾಂತಿ, ಧಾರ್ಮಿಕ ಭಕ್ತಿ, ಸಹಬಾಳ್ವೆ, ಸಾಮರಸ್ಯದ ಬದುಕು ಕಲಿಸಿಕೊಟ್ಟಿರುವ ಸನಾತನ ಹಿಂದೂ Hindu ಸಮಾಜ ಒಡೆಯಲು ನಿರಂತರ ಪ್ರಯತ್ನ ನಡೆದಿದೆ. ಆದರೆ, ಅದು ಯಾರಿಂದಲೂ ಸಾಧ್ಯವಾಗಿಲ್ಲ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಉತ್ತರ ಪ್ರಾಂತ ಕಾರ್ಯಕಾರಿಣಿ ಸದಸ್ಯ ಗೋಪಿ ಬಳ್ಳಾರಿ ಹೇಳಿದರು. 
ಸಂಘ ಶತಾಬ್ದಿ ಹಿನ್ನೆಲೆಯಲ್ಲಿ ಹಿಂದೂ ಸಮ್ಮೇಳನ ಸಮಿತಿ ವತಿಯಿಂದ ಪಟ್ಟಣದಲ್ಲಿ ಭಾನುವಾರ ಆಯೋಜಿಸಿದ್ದ ಹಿಂದೂ ಸಮ್ಮೇಳನ, ಬೃಹತ್ ಶೋಭಾಯಾತ್ರೆ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದರು. 
ಹಿಂದೂ ಎಂಬುದು ಯಾವುದೇ ಒಂದು ಜಾತಿ, ಮತ, ಪಂಥ, ಧರ್ಮಕ್ಕೆ ಸೇರಿದ್ದಲ್ಲ. ಅದು ಪ್ರಕೃತಿದತ್ತವಾಗಿ ಬೆಳೆದು ಬಂದಿದೆ. ಸನಾತನ ಹಿಂದೂ ಧರ್ಮಿಯರು ಉಪಕಾರ, ತ್ಯಾಗ ಮತ್ತು ಸೇವಾ ಮನೋಭಾವ ಹೊಂದಿದವರಾಗಿದ್ದಾರೆ. 
ಹೀಗಾಗಿ ಭಾರತದಲ್ಲಿರುವ ಬಂಧುತ್ವ, ವೈವಿಧ್ಯತೆ, ಶಾಂತಿಯುತ ಜೀವನ ಬೇರೆಡೆ ಎಲ್ಲಿಯೂ ಸಿಗುವುದಿಲ್ಲ. ಇಲ್ಲಿರುವ ಶಿಕ್ಷಣ, ಸಂಸ್ಕೃತಿ, ಸಂಸ್ಕಾರ ಪಡೆದುಕೊಳ್ಳಲು ಜಗತ್ತಿನ ಏಲ್ಲೆಡೆಯಿಂದ ಆಗಮಿಸುತ್ತಾರೆ. ಆದರೆ, ನಮ್ಮದೇ ದೇಶದಲ್ಲಿದ್ದುಕೊಂಡು  ಇಲ್ಲಿನ ಅನ್ನ, ಗಾಳಿ, ನೀರು ಸೇವಿಸುತ್ತಿರುವ ಕೆಲವರು ದೇಶಭಕ್ತಿ, ಹಿಂದೂ ಧರ್ಮವನ್ನೇ ಮರೆತು ಜಾತಿಯತೆಯಲ್ಲಿ ಮುಳುಗಿರುವುದು ಶೋಚನೀಯ ಸಂಗತಿ ಎಂದರು. 
500 ವರ್ಷಗಳ ನಿರಂತರ ಸಂಘರ್ಷ, 80 ಬಗೆಯ ಯುದ್ಧ, ಹಲವಾರು ಜನ ಕರ ಸೇವಕರ ತ್ಯಾಗ, ಬಲಿದಾನದ ಫಲವಾಗಿ ಅಯೋಧ್ಯೆಯಲ್ಲಿ ಭವ್ಯ ಶ್ರೀರಾಮ ಮಂದಿರ ನಿರ್ಮಾಣಗೊಂಡಿದೆ. 
ವಿದೇಶಿ ಸಂಸ್ಕೃತಿಯಿಂದ ಭಾರತೀಯರ ಕೌಟುಂಬಿಕ ಜೀವನ, ಗಂಡು-ಹೆಣ್ಣಿನ ಸಂಬಂಧ, ಹಬ್ಬ- ಹರಿದಿನಗಳ ಆಚರಣೆ, ಅವುಗಳ ಮಹತ್ವವನ್ನು ಮರೆತ್ತಿದ್ದೇವೆ.
ನಾವೆಲ್ಲರೂ ಒಂದಾಗಿ ಬಾಳಬೇಕಾದರೆ ಸ್ವದೇಶಿ ಪ್ರೇಮ, ಧಾರ್ಮಿಕ ನಂಬಿಕೆ, ಸಾಮಾಜಿಕ ಜವಾಬ್ದಾರಿ, ಪರಿಸರ ಕಾಳಜಿಯ ಜತೆಗೆ ಪಕ್ಷಿ ಸಂಕುಲಗಳ ಉಳಿವಿಗೆ ನಿರಂತರ ಪ್ರಯತ್ನಿಸಬೇಕು ಎಂದರು. 
ಪಂಚಗ್ರಹಗುಡ್ಡದ ಹಿರೇಮಠದ ಸಿದ್ಧಲಿಂಗ ಶಿವಾಚಾರ್ಯರು ಮಾತನಾಡಿ, ಭಾರತೀಯರ ಸಂಸ್ಕೃತಿ. ಆಚಾರ-ವಿಚಾರ ಇಡೀ ಜಗತ್ತಿಗೆ ಮಾದರಿಯಾಗಿ ನಿಲ್ಲುತ್ತದೆ. ಭಾರತ ವಿಶ್ವ ಗುರುವಾಗಬೇಕಾದರೆ ಇಲ್ಲಿನ ಪ್ರಕೃತಿಯ ಜತೆಗೆ ಸಂಸ್ಕೃತಿಯ ಪುನರುತ್ಥಾನ ಮಾಡಬೇಕಿದೆ ಎಂದರು. 
ಡಾ. ಗುರುಸಿದ್ಧವೀರ ಶಿವಾಚಾರ್ಯರು. ಶಿವಕುಮಾರ ಸ್ವಾಮಿಗಳು, ಹಿಂದು ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ವಾಸುದೇವ ಬೋನಗೇರಿ, ಶಾಸಕ ಸಿ.ಸಿ. ಪಾಟೀಲ, ಪರಪ್ಪ ವಾಳದ, ಮಲ್ಲೇಶಪ್ಪ ಪಿಡ್ನಾಯ್ಕರ, ದೇವೇಂದ್ರಪ್ಪ ಚಲವಾದಿ, ನಿಜಗುಣಿ ಶಹಪೂರ, ಉಮೇಶಗೌಡ ಪಾಟೀಲ, ಸರಸ್ವತಿ ಕುಂದಾಪೂರ, ಮಂಜುನಾಥ ಮೆಣಸಗಿ, ಶ್ರೀನಿವಾಸಪ್ರಸಾದ ಗುಜಮಾಗಡಿ, ಸಂಭಾಜಿ ಕಾಶೀದ, ಶಶಿಕುಮಾರ ಸಂಕನೂರ, ನಾಗೇಶ ಅಪ್ರೋಜಿ ಉಪಸ್ಥಿತರಿದ್ದರು. ಎಸ್.ವೈ. ಪಾಟೀಲ, ಮಂಜು ಬೆಳಗಾವಿ, ಸುಷ್ಮಾ ಗುಜಮಾಗಡಿ ನಿರ್ವಹಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net