National Science Day: ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಲಿ

ಮುಂಡರಗಿ ತಾಲೂಕಿನ ಕೊರ್ಲಹಳ್ಳಿ ಸಮೀಪದ ಜವಾಹರ ನವೋದಯ ವಿದ್ಯಾಲಯದಲ್ಲಿ ಶನಿವಾರ ರಾಷ್ಟ್ರೀಯ ವಿಜ್ಞಾನ ದಿನದ ನಿಮಿತ್ತ ವಿಜ್ಞಾನ ಮಾದರಿ ವಸ್ತುಗಳ ಪ್ರದರ್ಶನ ನಡೆಯಿತು. ಜಿ.ಎಸ್.ಬಸವರಾಜು, ಮಂಜುನಾಥ ನಾಯಕ, ಇತರರಿದ್ದರು.
ಮುಂಡರಗಿ ತಾಲೂಕಿನ ಕೊರ್ಲಹಳ್ಳಿ ಸಮೀಪದ ಜವಾಹರ ನವೋದಯ ವಿದ್ಯಾಲಯದಲ್ಲಿ ಶನಿವಾರ ರಾಷ್ಟ್ರೀಯ ವಿಜ್ಞಾನ ದಿನದ ನಿಮಿತ್ತ ವಿಜ್ಞಾನ ಮಾದರಿ ವಸ್ತುಗಳ ಪ್ರದರ್ಶನ ನಡೆಯಿತು. ಜಿ.ಎಸ್.ಬಸವರಾಜು, ಮಂಜುನಾಥ ನಾಯಕ, ಇತರರಿದ್ದರು.
Published on
ಮುಂಡರಗಿ: ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಪ್ರಾಚಾರ್ಯ ಜಿ.ಎಸ್. ಬಸವರಾಜು ಹೇಳಿದರು.
ತಾಲೂಕಿನ ಕೊರ್ಲಹಳ್ಳಿ ಸಮೀಪದ ಜವಾಹರ ನವೋದಯ ವಿದ್ಯಾಲಯದಲ್ಲಿ ಶನಿವಾರ ಜರುಗಿದ ರಾಷ್ಟ್ರೀಯ ವಿಜ್ಞಾನ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜೀವವೈವಿಧ್ಯ ಸಂಶೋಧಕ ಮಂಜುನಾಥ ನಾಯಕ ಮಾತನಾಡಿ, ಕಪ್ಪತಗುಡ್ಡವು 33 ಸಾವಿರ ಹೆಕ್ಟೇರ್ ಪ್ರದೇಶ ವ್ಯಾಪ್ತಿ ಹೊಂದಿದ್ದು, ಗದಗ ಜಿಲ್ಲೆಗೆ ಹೆಮ್ಮೆ. ಅತೀ ಹೆಚ್ಚು ಪರಿಶುದ್ಧ ಗಾಳಿ ಬೀಸುವು ಪ್ರದೇಶವಾಗಿದೆ. ಅಪರೂಪದ ಗುಗ್ಗಳ ಧೂಪದ ಮರ, ಮುತ್ತುಗ, ಸುಮೆಡಾ, ಅಕೇಶಿಯಾ ಕುಲಕ್ಕೆ ಸೇರಿದ ಸ್ಥಳೀಯವಾಗಿ ಬೆಳೆಯುವ ಮರಗಳು, ಅರ್ಜುನ, ಕವಳಿ, ಗುಲಗಂಜಿ, ಮುಂತಾದ ಔಷಧ ಮರಗಳ ಕಾಣಬಹುದು. ಅನೇಕ ವನ್ಯಜೀವಿಗಳಿವೆ ಎಂದು ತಿಳಿಸಿ ಮಕ್ಕಳಿಗೆ ಮಾನವ ವನ್ಯಜೀವಿಗಳ ಸಂಘರ್ಷ ನಿಯಂತ್ರಣ ಕುರಿತು ತಿಳಿವಳಿಕೆ ಮೂಡಿಸಿದರು.
ಕಾರ್ಯಕ್ರಮದಲ್ಲಿ ಪ್ರಶಾಂತ ಸಾಗರ ನಿರ್ದೇಶಿಸಿದ ಕೌತುಕ ಮಂಗಟ್ಟೆ ಜೀವನ ಕ್ರಮ ಮತ್ತು ಅವುಗಳ ರಕ್ಷಣೆಯ ಮಹತ್ವ ಕುರಿತು ಜಾಗೃತಿ ಮೂಡಿಸುವ ಕಿರುಚಿತ್ರ ಪ್ರದರ್ಶಿಸಲಾಯಿತು. ವಿದ್ಯಾರ್ಥಿಗಳಿಂದ ವಿಜ್ಞಾನ ಮಾದರಿ ವಸ್ತುಗಳ ಪ್ರದರ್ಶನ ನಡೆಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net