ಸಿನಿಮಾದಲ್ಲಿ ಉತ್ತರ ಕರ್ನಾಟಕ ಕಲಾವಿದರಿಗೆ ಅನ್ಯಾಯ cinima

ನರಗುಂದ ತಾಲೂಕು ಕೊಣ್ಣೂರ ವಿರಕ್ತ ಮಠದಿಂದ ಹಾಸ್ಯನಟ ವೈಜನಾಥ ಬಿರಾದಾರ ಅವರಿಗೆ ಶ್ರೀ ಚನ್ನವೀರೇಶ್ವರ ಪ್ರಶಸ್ತಿ ನೀಡಿ ಮಂಗಳವಾರ ಸನ್ಮಾನಿಸಲಾಯಿತು. ಶ್ರೀ ದಿಂಗಾಲೇಶ್ವರ ಸ್ವಾಮೀಜಿ, ಡಾ. ಚನ್ನವೀರ ಸ್ವಾಮಿಗಳು, ಕಲ್ಮಠದ ಸಿದ್ಧಲಿಂಗ ಶಿವಾಚಾರ್ಯರು, ಹರ್ಲಾಪೂರದ ಶ್ರೀಕೊಟ್ಟೂರೇಶ್ವರ ಮಹಾಸ್ವಾಮೀಜಿಗಳು, ಇತರರಿದ್ದರು.
ನರಗುಂದ ತಾಲೂಕು ಕೊಣ್ಣೂರ ವಿರಕ್ತ ಮಠದಿಂದ ಹಾಸ್ಯನಟ ವೈಜನಾಥ ಬಿರಾದಾರ ಅವರಿಗೆ ಶ್ರೀ ಚನ್ನವೀರೇಶ್ವರ ಪ್ರಶಸ್ತಿ ನೀಡಿ ಮಂಗಳವಾರ ಸನ್ಮಾನಿಸಲಾಯಿತು. ಶ್ರೀ ದಿಂಗಾಲೇಶ್ವರ ಸ್ವಾಮೀಜಿ, ಡಾ. ಚನ್ನವೀರ ಸ್ವಾಮಿಗಳು, ಕಲ್ಮಠದ ಸಿದ್ಧಲಿಂಗ ಶಿವಾಚಾರ್ಯರು, ಹರ್ಲಾಪೂರದ ಶ್ರೀಕೊಟ್ಟೂರೇಶ್ವರ ಮಹಾಸ್ವಾಮೀಜಿಗಳು, ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ದಿಂಗಾಲೇಶ್ವರ ಸ್ವಾಮೀಜಿಗಳು ಅಸಮಾಧಾನ
  • ವೈಜನಾಥ ಬಿರಾದಾರಗೆ ಶ್ರೀ ಚನ್ನವೀರೇಶ್ವರ ಪ್ರಶಸ್ತಿ ಪ್ರದಾನ
ನರಗುಂದ: ವೃತ್ತಿ ರಂಗಭೂಮಿ, ಸಿನಿಮಾ ನಟರಾಗಿಯೂ ಗುರುತಿಸಿಕೊಂಡಿದ್ದ ಯಲಿವಾಳ ಸಿದ್ದಯ್ಯ ಅವರು ಬದುಕಿರುವ ತನಕವೂ ವರನಟ ಡಾ. ರಾಜಕುಮಾರ ಅವರು ಕನ್ನಡ ಚಿತ್ರರಂಗದಲ್ಲಿ ಪ್ರವರ್ಧಮಾನಕ್ಕೆ ಬಂದಿರಲಿಲ್ಲ. ಆದರೆ, ಈಗ ಉತ್ತರ ಕರ್ನಾಟಕದ ಕಲಾವಿದರಿಗೆ ಸಾಕಷ್ಟು ಅನ್ಯಾಯವಾಗುತ್ತಿದೆ ಎಂದು ಶಿರಹಟ್ಟಿ ದಿಂಗಾಲೇಶ್ವರ ಸ್ವಾಮೀಜಿಗಳು ಅಸಮಾಧಾನ ವ್ಯಕ್ತಪಡಿಸಿದರು. 
ತಾಲೂಕಿನ ಕೊಣ್ಣೂರ ಗ್ರಾಮದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿರಕ್ತಮಠದ ಲಿಂ. ಶ್ರೀಚನ್ನವೀರ ಮಹಾಸ್ವಾಮಿಗಳ 20ನೇ ಪುಣ್ಯಸ್ಮರಣೋತ್ಸವ, ಶ್ರೀಶೈಲ ಮಲ್ಲಿಕಾರ್ಜುನ ಪುರಾಣ ಮುಕ್ತಾಯ, ಸಾಮೂಹಿಕ ವಿವಾಹ ಹಾಗೂ ಶ್ರೀ ಚನ್ನವೀರೇಶ್ವರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಇಲ್ಲಿನ ಯುವಕ, ಯುವತಿಯರು ವಿದ್ಯಾವಂತ, ಸೂರದ್ರೂಪಿಗಳಾಗಿದ್ದರೂ  ನಟ-ನಟಿಯರಾಗಿ ಬೆಳೆಯಲು ಬಿಡುತ್ತಿಲ್ಲ. ಮಠಾೀಶರು, ರಾಜಕೀಯ ಪಕ್ಷಗಳು ಸೇರಿದಂತೆ ಉತ್ತರ ಕರ್ನಾಟಕದ ಪ್ರತಿಯೊಂದು ವಿಚಾರಗಳಲ್ಲಿ ಅನ್ಯಾಯವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕೇವಲ 3ನೇ ತರಗತಿ ವಿದ್ಯಾಭ್ಯಾಸ ಮಾಡಿರುವ ಹಾಸ್ಯನಟ ವೈಜನಾಥ ಬಿರಾದಾರ ಅವರು 350ಕ್ಕೂ ಅಕ ಕನ್ನಡ ಚಲನಚಿತ್ರಗಳಲ್ಲಿ ನಟಿಸಿ ಅಂತರಾಷ್ಟ್ರೀಯ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಆದರೆ, ಉತ್ತರ ಕರ್ನಾಟಕದವರನ್ನು ಚಲನ ಚಿತ್ರಗಳಲ್ಲಿ ಕೇವಲ ಪೊಲೀಸ್, ಭಿಕ್ಷೆ ಬೇಡುವುದು, ಹಾಸ್ಯ ನಟರನ್ನಾಗಿ ಮಾತ್ರ ಬಳಸಿಕೊಳ್ಳಲಾಗುತ್ತಿದೆ. 
ದಕ್ಷಿಣ ಕರ್ನಾಟಕಕ್ಕೆ ಹೋಲಿಸಿದರೆ ಉತ್ತರ ಕರ್ನಾಟಕದ ಅಭಿವೃದ್ಧಿಯಲ್ಲಿ ಸಾಕಷ್ಟು ತಾರತಮ್ಯವಾಗುತ್ತಿದೆ ಎಂದು ಆಪಾದಿಸಿದರು.    
ಮನುಷ್ಯನಿಗೆ ಶಿಕ್ಷಣಕ್ಕಿಂತ ಸಂಸ್ಕಾರಯುತ ಜೀವನವೇ ಮುಖ್ಯ. ಸಮಾಜದ ಪ್ರತಿಯೊಬ್ಬರೂ ಮಾತಾ, ಮಹಾತ್ಮ, ಪರಮಾತ್ಮನನ್ನು ಸ್ಮರಿಸಬೇಕು. ಮನದಲ್ಲಿ ಕಲ್ಮಶವಿಟ್ಟುಕೊಳ್ಳದೆ ಸ್ವಾಮೀಜಿಗಳ ಆಶೀರ್ವಾದವನ್ನು ಅನುಷ್ಠಾನಕ್ಕೆ ತಂದರೆ ಸುಂದರಮಯ ಜೀವನ ರೂಪುಗೊಳ್ಳುತ್ತದೆ. 
ಮನುಷ್ಯನಲ್ಲಿ ಸಂಪತ್ತಿಗಿಂತ ಸಮಾಧಾನ ಹೆಚ್ಚಿರಬೇಕು. ಮದುವೆಗಳು ಆಡಂಬರಕ್ಕಿಂತ ಇತರರಿಗೆ ಆದರ್ಶವಾಗಿರಬೇಕು ಎಂದು ತಿಳಿಸಿದರು. 
ಹಾಸ್ಯನಟ ವೈಜನಾಥ ಬಿರಾದಾರ ಅವರಿಗೆ ಶ್ರೀಮಠದಿಂದ ನೀಡಲಾದ ಶ್ರೀಚನ್ನವಿರೇಶ್ವರ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಕೊಣ್ಣೂರ ವಿರಕ್ತಮಠದ ಡಾ. ಚನ್ನವೀರ ಮಹಾಸ್ವಾಮೀಜಿಗಳು, ಕಲ್ಮಠದ ಸಿದ್ಧಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, ಹರ್ಲಾಪೂರದ ಶ್ರೀ ಕೊಟ್ಟೂರೇಶ್ವರ ಮಹಾಸ್ವಾಮಿಗಳು, ನರಗುಂದ ವಿರಕ್ತಮಠದ ಶಿವಕುಮಾರ ಮಹಾಸ್ವಾಮಿಗಳು, ಕೆ.ಎಂ. ಮಾಕನ್ನವರ ಮಾತನಾಡಿದರು.
 ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆದ ಪ್ರತಿಭಾನ್ವಿತರಾದ ರಮೇಶ ಬಡಿಗೇರ, ಮಹಾಂತೇಶ ಶಾಸೀಗಳು, ಬಸಯ್ಯ ಚಿಕ್ಕಮಠ, ಚನ್ನವೀರಯ್ಯ ಹಿರೇಮಠ, ಮಲ್ಲಿಕಾರ್ಜುನ ಶಾಸೀಗಳು, ಭಜನಾ ಮಂಡಳ, ಕರಡಿ ಮಜಲು, ಡೊಳ್ಳು ಹಾಗೂ ಇತರ ಸಾಧಕರನ್ನು ಸನ್ಮಾನಿಸಲಾಯಿತು.
ರೈತಸಂಘದ ತಾಲೂಕಾಧ್ಯಕ್ಷ ಉಮೇಶ ಮರ್ಚಪ್ಪನವರ, ಶರಣಯ್ಯ ಕಂಬಿಮಠ, ಬಿ.ಎಂ. ಬೆಳಹಾರ, ರಾಜೂಗೌಡ ಕೆಂಚನಗೌಡ್ರ, ಇಸಾಕ ಮಸೂತಿಮನಿ, ಶಂಕರಗೌಡ ಯಲ್ಲಪ್ಪಗೌಡ್ರ, ಅಶೋಕ ಕಾಮಣ್ಣವರ, ಅಪ್ಪಣಗೌಡ ಅರ್ಭಣದ, ಪರಶುರಾಮ ಬಾರಾಟಕ್ಕೆ, ಕೆ.ಬಿ. ಕೆಂಚನಗೌಡ್ರ, ಇತರರಿದ್ದರು. ಆರ್.ಬಿ. ಚಿನಿವಾಲರ, ಹೇಮಂತ ಗಣಾಚಾರಿ, ಉಮೇಶ ಮರ್ಚಪ್ಪನವರ ನಿರ್ವಹಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net