ಎರಡನೇಯದು ನಿರ್ಬಂಧಿತ ಅನುದಾನ (ಶೇ. 60), ಈ ಹಣವನ್ನು ಕಡ್ಡಾಯವಾಗಿ ಕುಡಿಯುವ ನೀರು ಸರಬರಾಜು, ನೈರ್ಮಲ್ಯ ಕಾಮಗಾರಿ, ಮಳೆ ನೀರು ಕೊಯ್ಲು ಮತ್ತು ಬಯಲು ಬಹಿರ್ದೆಸೆ ಮುಕ್ತ ಗ್ರಾಮಗಳ ನಿರ್ಮಾಣಕ್ಕೆ ಬಳಸಬೇಕಿತ್ತು. ಅಲ್ಲದೆ, ಒಟ್ಟು ಮೊತ್ತದಲ್ಲಿ ಶೇ. 5ರಷ್ಟು ಹಣವನ್ನು ವಿಶೇಷ ಚೇತನರ ಅಭಿವೃದ್ಧಿಗೆ ಮೀಸಲಿಡಲು ಅವಕಾಶವಿತ್ತು. ಆದರೆ ಈಗ ಈ ಎಲ್ಲ ಸೌಲಭ್ಯಗಳು ಜನಸಾಮಾನ್ಯರಿಗೆ ಎಟುಕದಂತಾಗಿವೆ.