PANCHAMI ಆಶ್ರಯ ಕಾಲನಿ ಮಕ್ಕಳಿಗೆ ಪಂಚಮಿ ಹಾಲು

PANCHAMI ಬಸವ ಪಂಚಮಿ ನಿಮಿತ್ತ ಆಶ್ರಯ ಕಾಲೂನಿ ಮಕ್ಕಳಿಗೆ ಹಾಲು ವಿತರಿಸಲಾಯಿತು.
PANCHAMI ಬಸವ ಪಂಚಮಿ ನಿಮಿತ್ತ ಆಶ್ರಯ ಕಾಲೂನಿ ಮಕ್ಕಳಿಗೆ ಹಾಲು ವಿತರಿಸಲಾಯಿತು.
Published on

ನರೇಗಲ್ಲ: ಮಕ್ಕಳಿಗೆ ಹಾಲು ಕುಡಿಸುವುದರಿಂದ ಅವರ ಆರೋಗ್ಯ ಉತ್ತಮವಾಗಲು (

PANCHAMI

) ಸಹಕಾರಿಯಾಗುತ್ತದೆ. ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ನಿವೃತ್ತ ಶಿಕ್ಷಕ ಎಂ.ಎಸ್. ಧಡೇಸೂರಮಠ ಹೇಳಿದರು.

ಮಾನವ ಬಂಧುತ್ವ ವೇದಿಕೆ ರೋಣ ತಾಲೂಕು ಘಟಕದಿಂದ ಬಸವ ಪಂಚಮಿ ಅಂಗವಾಗಿ ಆಶ್ರಯ ಕಾಲನಿ ಮಕ್ಕಳಿಗೆ ಹಾಲು ವಿತರಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮನುಷ್ಯರಲ್ಲಿ ನಂಬಿಕೆ ಇರಬೇಕು, ಆದರೆ ಮೂಢನಂಬಿಕೆ ಇರಬಾರದು. ಜಗತ್ತಿಗೆ ಬುದ್ಧ, ಬಸವಣ್ಣ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರು ಮಹತ್ವದ ಕೊಡುಗೆ ನೀಡಿದ್ದಾರೆ. ಅವರ ವಿಚಾರಧಾರೆ ಹಾಗೂ ಮಾರ್ಗದರ್ಶನವನ್ನು ಜೀವನದಲ್ಲಿ ಅಳವಡಿಸಿಕೊಂಡು ಈ ಕಾಲನಿಯ ಮಕ್ಕಳು ಉತ್ತಮ ಶಿಕ್ಷಣ ಪಡೆಯಬೇಕು ಎಂದರು. ಪಪಂ ಮಾಜಿ ಸದಸ್ಯ ಸಂಜೀವಕುಮಾರ ಕುಲಕರ್ಣಿ ಮಾತನಾಡಿ, ಮಾಡುವ ಕಾಯಕದಲ್ಲಿ ಪ್ರಾಮಾಣಿಕತೆ ಇರಬೇಕು. ಅತಿಯಾದ ಮೂಢನಂಬಿಕೆಗೆ ಒಳಗಾಗಿ ಜೀವನವನ್ನು ಹಾಳು ಮಾಡಿಕೊಳ್ಳಬಾರದು ಎಂದರು. ಗವಿಸಿದ್ಧೇಶ್ವರ ಶಾಸ್ತ್ರಿಗಳು, ಯಲ್ಲಪ್ಪ ಮಣ್ಣೊಡ್ಡರ, ಅಬ್ದುಲ್ ಖಾದರ್ ಹುಡೇದ, ಹುಚ್ಚೀರಪ್ಪ ಈಟಿ ಉಪಸ್ಥಿತರಿದ್ದರು. ವೇದಿಕೆಯ ತಾಲೂಕು ಸಂಚಾಲಕ ಶಿವಾನಂದ ಗೋಗೇರಿ ನಿರ್ವಹಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net