YOUTH: ಯುವಜನತೆ ಉತ್ತಮ ಸಂಸ್ಕಾರ ಪಡೆಯಲಿ

ಗಜೇಂದ್ರಗಡದ ಸೂಡಿ ಗ್ರಾಮದಲ್ಲಿ ಪಂಚ ಪೀಠಾಧೀಶರ ಅಡ್ಡ ಪಲ್ಲಕ್ಕಿ ಪ್ರಯುಕ್ತ ಹಮ್ಮಿಕೊಂಡಿದ್ದ ಯುವ ಜಾಗೃತಿ ಮತ್ತು ನಾಗರಿಕ ಸಂರಕ್ಷಣಾ ಸಮಾವೇಶ ಕಾರ್ಯಕ್ರಮವನ್ನು ಶ್ರೀ ಕೊಟ್ಟೂರು ಬಸವೇಶ್ವರ ಶಿವಾಚಾರ್ಯ ಮಹಾಸ್ವಾಮೀಜಿ ಉದ್ಘಾಟಿಸಿದರು. ಬಿ. ಎ. ಪಾಟೀಲ, ಆರ್.ಕೆ. ಮಠದ, ಟಿ.ಪಿ. ಮನಗೂಳಿ ಇತರರಿದ್ದರು.
ಗಜೇಂದ್ರಗಡದ ಸೂಡಿ ಗ್ರಾಮದಲ್ಲಿ ಪಂಚ ಪೀಠಾಧೀಶರ ಅಡ್ಡ ಪಲ್ಲಕ್ಕಿ ಪ್ರಯುಕ್ತ ಹಮ್ಮಿಕೊಂಡಿದ್ದ ಯುವ ಜಾಗೃತಿ ಮತ್ತು ನಾಗರಿಕ ಸಂರಕ್ಷಣಾ ಸಮಾವೇಶ ಕಾರ್ಯಕ್ರಮವನ್ನು ಶ್ರೀ ಕೊಟ್ಟೂರು ಬಸವೇಶ್ವರ ಶಿವಾಚಾರ್ಯ ಮಹಾಸ್ವಾಮೀಜಿ ಉದ್ಘಾಟಿಸಿದರು. ಬಿ. ಎ. ಪಾಟೀಲ, ಆರ್.ಕೆ. ಮಠದ, ಟಿ.ಪಿ. ಮನಗೂಳಿ ಇತರರಿದ್ದರು.
Published on
ಗಜೇಂದ್ರಗಡ: ಯುವಜನರು (YOUTH) ಜಾಗೃತರಾದರೆ ಮಾತ್ರ ನಮ್ಮ ಸಮಾಜ ಮತ್ತು ದೇಶ ಉನ್ನತಿಯ ಹಾದಿಯಲ್ಲಿ ಸಾಗುತ್ತದೆ ಎಂದು ಜುಕ್ತಿ ಹಿರೇಮಠದ ಡಾ. ಕೊಟ್ಟೂರು ಬಸವೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಸೂಡಿ ಗ್ರಾಮದ ಮಾನವ ಧರ್ಮ ಮಂಟಪದಲ್ಲಿ ಹಮ್ಮಿಕೊಂಡಿದ್ದ 50ನೇ ವರ್ಷದ ರಥೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನಿಡಿದರು. ಯುವಜನರ ಮಾತು ಭಾಷೆ, ಆಹಾರ, ವಿಹಾರ ಮತ್ತು ವ್ಯಕ್ತಿತ್ವಗಳು ಭಾರತೀಯ ಸನಾತನ ಸಂಸ್ಕೃತಿಗಳ ಪ್ರತೀಕವಾಗಿರಬೇಕು. ಹಾಗಿದ್ದಾಗ ಮಾತ್ರ ಭಾರತ ಮತ್ತೆ ವಿಶ್ವಗುರುವಾಗಲು ಸಾಧ್ಯ ಎಂದರು.
ಧರ್ಮದ ಮಾರ್ಗವನ್ನು ಎಂದಿಗೂ ಬಿಡಬಾರದು. ನಮ್ಮ ವ್ಯಕ್ತಿತ್ವವನ್ನು ಇತರರಿಗೆ ಮಾರಿಕೊಳ್ಳಬಾರದು. ಮಠ ಮತ್ತು ಪೀಠಗಳು ನೂರಾರು ವರ್ಷಗಳಿಂದ ಯುವ ಜನರನ್ನು ಸನ್ಮಾರ್ಗಕ್ಕೆ ತರುವ ಕಾರ್ಯಗಳನ್ನು ಮಾಡುತ್ತಿವೆ. ಇದನ್ನು ಅರ್ಥ ಮಾಡಿಕೊಂಡು ಸಂಸ್ಕೃತಿಯ ಮಾರ್ಗದಲ್ಲಿ ಸಾಗಬೇಕು ಎಂದರು.
ಪ್ರವಚನಕಾರ ಜಿ.ಎಸ್. ನಟೇಶ ಮಾತನಾಡಿ, ಯಾವುದೇ ಸರ್ಕಾರ ಮಾಡದ ಪರಿವರ್ತನಾ ಕಾರ್ಯಗಳನ್ನು ಸನ್ನಿಧಿಗಳು, ಮಠ ಮತ್ತು ಪೀಠಗಳು ಸಾವಿರಾರು ವರ್ಷಗಳಿಂದ ಮಾಡಿಕೊಂಡು ಬರುತ್ತಿವೆ. ಮಕ್ಕಳಿಗೆ ಸಂಸ್ಕಾರ ಕೊಡುವುದು ಶಾಲೆಯಿಂದ ಅಲ್ಲ, ತಾಯಿಯ ಗರ್ಭದಿಂದಲೇ ಈ ಪ್ರಕ್ರಿಯೆ ಆರಂಭವಾಗಬೇಕು. ಅದಕ್ಕಾಗಿ ವೇದ ಪುರಾಣಗಳು ಮಾತೃ ದೇವೋಭವ ಎಂದು ಹೇಳಿವೆ. ಹಿರಿಯರ ಸೇವೆಯಿಂದ ಯುವಜನರಲ್ಲಿ ಸಂಸ್ಕೃತಿ ಮತ್ತು ಸಂಸ್ಕಾರಗಳು ಮೂಡುತ್ತವೆ. ಈ ನಿಟ್ಟಿನಲ್ಲಿ ಯುವಜನರು ಮತ್ತು ಹಿರಿಯ ನಾಗರಿಕರು ಸಮಾಜದ ಬಹುದೊಡ್ಡ ಆಸ್ತಿ ಎಂದರು.
ತೆಕ್ಕಲಗೂಡು ಬೃಹನ್ಮಠದ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿ, ಗುರುವಿನ ಶಕ್ತಿ ಬಹಳ ದೊಡ್ಡದು. ಗುರುವಿನಿಂದ ಸಂಸ್ಕಾರ ಪಡೆಯಬೇಕು ಎಂದರು.
ಯಲಬುರ್ಗಾ ಶ್ರೀಧರ ಮುರುಡಿ, ಹಿರೇಮಠದ ಬಸವಲಿಂಗೇಶ್ವರ ಶಿವಾಚಾರ್ಯ ಸ್ವಾಮೀಜಿ, ಬದಾಮಿಯ ನವಗ್ರಹ ಹಿರೇಮಠದ ಶಿವ ಪೂಜಾ ಶಿವಾಚಾರ್ಯ ಸ್ವಾಮೀಜಿ, ಉದ್ಯಮಿ ಗೌರವದೇವಿ ಶಾಬಾದಿಮಠ, ಶ್ರೀ ಶಾಂತಲಿಂಗ ಸ್ವಾಮೀಜಿ, ರಘುರಾಮ, ಟಿ.ಪಿ. ಮುನೊಳಿ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net