AYUSHMAN: ಸದ್ಬಳಕೆಯಾಗಲಿ ಆಯುಷ್ಮಾನ್ ಆರೋಗ್ಯ ಕೇಂದ್ರ

ನರಗುಂದ ತಾಲೂಕಿನ ಸುರಕೋಡದಲ್ಲಿ ನಿರ್ಮಾಣಗೊಳ್ಳಲಿರುವ ಆಯಷ್ಮಾನ್ ಆರೋಗ್ಯ ಕೇಂದ್ರದ ನೂತನ ಕಟ್ಟದ ಕಾಮಗಾರಿಗೆ ಶಾಸಕ ಸಿ.ಸಿ. ಪಾಟೀಲ ಭೂಮಿ ಪೂಜೆ ನೆರವೇರಿಸಿದರು. ಜಿನ್ನಾ ಮುಲ್ಲಾನವರ, ಶೇಖರಗೌಡ ಪಾಟೀಲ, ಹಸನ್ ನವದಿ, ತಾಪಂ ಇಒ ಶ್ರೀಧರ ಚಿನಗುಂಡಿ ಇತರರಿದ್ದರು.
ನರಗುಂದ ತಾಲೂಕಿನ ಸುರಕೋಡದಲ್ಲಿ ನಿರ್ಮಾಣಗೊಳ್ಳಲಿರುವ ಆಯಷ್ಮಾನ್ ಆರೋಗ್ಯ ಕೇಂದ್ರದ ನೂತನ ಕಟ್ಟದ ಕಾಮಗಾರಿಗೆ ಶಾಸಕ ಸಿ.ಸಿ. ಪಾಟೀಲ ಭೂಮಿ ಪೂಜೆ ನೆರವೇರಿಸಿದರು. ಜಿನ್ನಾ ಮುಲ್ಲಾನವರ, ಶೇಖರಗೌಡ ಪಾಟೀಲ, ಹಸನ್ ನವದಿ, ತಾಪಂ ಇಒ ಶ್ರೀಧರ ಚಿನಗುಂಡಿ ಇತರರಿದ್ದರು.
Published on
ನರಗುಂದ: ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯಡಿ ಭಾರತ ಸರ್ಕಾರದ ಪ್ರಮುಖ ಆರೋಗ್ಯ ವಿಮಾ ಯೋಜನೆಗೆ ಆಯುಷ್ಮಾನ್ ಎಂದು ಹೆಸರಿಸಲಾಗಿದ್ದು ಪ್ರತಿವರ್ಷ ಅರ್ಹ ಕುಟುಂಬಕ್ಕೆ ವರ್ಷಕ್ಕೆ 5 ಲಕ್ಷ ರೂ.ವರೆಗೆ ಉಚಿತ ಮತ್ತು ನಗದು ರಹಿತ ಚಿಕಿತ್ಸೆ ನೀಡಲಾಗುತ್ತದೆ. ಇದರ ಪ್ರಯೋಜನ ಪಡೆದುಕೊಳ್ಳಲು ಆಯಾ ಗ್ರಾಮದಲ್ಲಿ ಅಗತ್ಯದ ಆಯುಷ್ಮಾನ ಆರೋಗ್ಯ ಕೇಂದ್ರ ತೆರೆಯಲಾಗುತ್ತಿದೆ ಎಂದು ಶಾಸಕ ಸಿ.ಸಿ. ಪಾಟೀಲ ಹೇಳಿದರು.
ತಾಲೂಕಿನ ಸುರಕೋಡದಲ್ಲಿ 65 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಆಯಷ್ಮಾನ್ ಆರೋಗ್ಯ ಕೇಂದ್ರದ ನೂತನ ಕಟ್ಟದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ‘70 ವರ್ಷ ಮೇಲ್ಪಟ್ಟವರು ಎಲ್ಲ ಹಿರಿಯ ನಾಗರಿಕರಿಗೆ ಆದಾಯದ ಮಿತಿಯಿಲ್ಲದೇ ಉಚಿತ ಆರೋಗ್ಯ ಸೌಲಭ್ಯ ನೀಡಲಾಗುತ್ತದೆ. ಅರ್ಥಿವಾಗಿ ಹಿಂದುಳಿದ ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬಗಳಿಗೆ ರಾಜ್ಯದಲ್ಲಿ ಹೆಚ್ಚಿನ ಸೌಲಭ್ಯ ದೊರೆಯಲಿದೆ. ಆಯುಷ್ಮಾನ್ ಆರೋಗ್ಯ ಯೋಜನೆಯನ್ನು 2018ರಲ್ಲಿ ಕೇಂದ್ರ ಸರ್ಕಾರ ಆರಂಭಗೊಳಿಸಿದೆ. ರಸ್ತೆ ಅಪಘಾತ ಸೇರಿದಂತೆ 169 ತುರ್ತು ಚಿಕಿತ್ಸೆಗಳನ್ನು ಯಾವುದೇ ರೆಫರಲ್ ಇಲ್ಲದೆ ನೇರವಾಗಿ ನೋಂದಾಯಿತ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಳ್ಳಬಹುದು ಎಂದರು.
ಜಿನ್ನಾ ಮುಲ್ಲಾನವರ, ಶೇಖರಗೌಡ ಪಾಟೀಲ, ಹಸನ್ ನವದಿ, ತಾಪಂ ಇಒ ಶ್ರೀಧರ ಚಿನಗುಂಡಿ, ಆರೋಗ್ಯ ಇಲಾಖೆ ತಾಲೂಕು ಅಧಿಕಾರಿ ರೇಣುಕಾ ಕೊರವನವರ, ಗ್ರಾಪಂ ಕಾರ್ಯದರ್ಶಿ ಮೋಹನ ಉಪಾಸಿ, ಮುತ್ತು ಪಿಡ್ನಾಯ್ಕರ್, ಬಸ್ಸು ಬಾರಿಕೇರ, ಸಾಗರ ಪಾಟೀಲ, ಶಿವನಗೌಡ ರಾಯನಗೌಡ್ರ, ಜಗದೀಶ ನಂದಿ, ಎನ್.ಬಿ. ಬಳಗಾನೂರ, ಪಿಡಿಒ ಎಸ್.ಎಸ್. ಚಟ್ರಿ, ರೇವಣಸಿದ್ದಯ್ಯ ಹಿರೇಮಠ, ರುದ್ರಗೌಡ ಆಡೂರ, ವಿ.ಡಿ. ಚಿಕ್ಕಮಠ, ಎಸ್.ಕೆ. ಪಾಟೀಲ, ಬಸನಗೌಡ ಲಿಂಗದಾಳ, ಬಸ್ಸು ಪಿಡ್ಡನ್ನವರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net