ಭಕ್ತರ ಮನೆಗಳಿಗೆ ಭೇಟಿ ನೀಡಿ, ಕಾಣಿಕೆ, ಧವಸ, ಧಾನ್ಯಗಳನ್ನು ಸ್ವೀಕರಿಸಿದರು. ಈ ವೇಳೆ ಆಶೀರ್ವಚನ ನೀಡಿದ ಜ.ಫಕೀರ ಸಿದ್ಧರಾಮ ಮಹಾಸ್ವಾಮೀಜಿ, ಜಾತ್ರೆಯ ಮುನ್ನಾದಿನ ಪಟ್ಟಣದಲ್ಲಿ ವರ್ಷಸನೆ ಮಾಡುವುದು ಸಂಪ್ರದಾಯ ಮತ್ತು ಭಾವೈಕ್ಯತೆ ಸಂಕೇತದ ಮೆರವಣಿಗೆಯಾಗಿದೆ. ಮಠದ ಸಂಪ್ರದಾಯದಂತೆ ಜಾತ್ರೆಯ ಮುನ್ನಾ ದಿನ ಸಮಾಜದಲ್ಲಿನ ಬಡವ, ಸಿರಿವಂತ ಹಾಗೂ ಜಾತಿ, ಮತ, ಪಂಥ ನೋಡದೆ ಎಲ್ಲರಿಂದ ಭಿಕ್ಷೆ ಸ್ವೀಕರಿಸಲಾಗುತ್ತದೆ. ಜಾತ್ರೆ, ಉತ್ಸವಗಳು ಸಮಾಜದಲ್ಲಿ ಸಾಮರಸ್ಯ, ಸ್ನೇಹ, ಪ್ರೀತಿ ಮೂಡಿಸುವಲ್ಲಿ ಸಹಕಾರಿ ಆಗಿವೆ. ಈ ವರ್ಷವೂ ನಾಡಿನಲ್ಲಿ ಸುಖ, ಶಾಂತಿ, ನೆಮ್ಮದಿ ನೆಲೆಸಲಿ. ಉತ್ತಮ ಮಳೆ ಬೆಳೆಯಾಗಿ ರೈತರು ಸೇರಿ ಸಕಲ ಜೀವರಾಶಿಗಳು ಸಂತೃಪ್ತ ಜೀವನ ಸಾಗಿಸಲಿ. ದ್ವೇಷ-ಅಸೂಯೆ ಅಳಿದು ಪ್ರೀತಿ-ಸ್ನೇಹ ವೃದ್ಧಿಸಲಿ ಎನ್ನುವ ಭಿನ್ನಹವನ್ನು ದೇವರಲ್ಲಿ ಸಮರ್ಪಿಸಿ ಜಾತ್ರೆ ನೆರವೇರಿಸೋಣ. ಶ್ರೀಮಠದ ಜಾತ್ರೆಯಲ್ಲಿ ಎಲ್ಲರೂ ಪಾಲ್ಗೊಂಡು ಫಕೀರೇಶ್ವರರ ಕೃಪೆಗೆ ಪಾತ್ರರಾಗಬೇಕು’ ಎಂದರು.