ರಾಂಪುರ ಗ್ರಾಪಂಗೆ ಲೋಕಾಯಕ್ತರ ಭೇಟಿ

ಗಜೇಂದ್ರಗಡ ತಾಲೂಕಿನ ರಾಂಪುರ ಗ್ರಾಮ ಪಂಚಾಯಿತಿಗೆ ಲೋಕಾಯುಕ್ತ ಅಧಿಕಾರಿಗಳು ಭೇಟಿ ನೀಡಿ ಕಡತ ಪರಿಶೀಲಿಸಿದರು.
ಗಜೇಂದ್ರಗಡ ತಾಲೂಕಿನ ರಾಂಪುರ ಗ್ರಾಮ ಪಂಚಾಯಿತಿಗೆ ಲೋಕಾಯುಕ್ತ ಅಧಿಕಾರಿಗಳು ಭೇಟಿ ನೀಡಿ ಕಡತ ಪರಿಶೀಲಿಸಿದರು.
Published on
ಗಜೇಂದ್ರಗಡ: ಸಾರ್ವಜನಿಕ ದೂರು ಆಧರಿಸಿ ರಾಂಪುರ ಗ್ರಾಮ ಪಂಚಾಯಿತಿಗೆ ಲೋಕಾಯುಕ್ತ ಅಧಿಕಾರಿಗಳು ಸೋಮವಾರ ಭೇಟಿ ನೀಡಿ ಕಡತ ಪರಿಶೀಲಿಸಿದರು.
ಪಿಡಿಒ ಬಿ.ಎನ್. ಇಟಗಿಮಠ ಅವರು ಕಚೇರಿಯಲ್ಲಿ ಹಾಜರಿರಲಿಲ್ಲ. ಕಚೇರಿಯಲ್ಲಿದ್ದ ಠರಾವು ಪುಸ್ತಕ, ಆಸ್ತಿ ದಾಖಲೆ ಮತ್ತಿತರ  ವಶಕ್ಕೆ ಪಡೆದಿದ್ದಾರೆ. 
ತನಿಖೆ ವೇಳೆ ಹಲವು ಬಿಲ್ ಹಾಗೂ ಕೊಟೇಶನ್ ಪ್ರಕ್ರಿಯೆಗಳಲ್ಲಿ ಅಕ್ರಮ ಕಂಡುಬಂದಿರುವ ಶಂಕೆ ವ್ಯಕ್ತವಾಗಿದೆ. ಪಂಚಾಯಿತಿ ವ್ಯಾಪ್ತಿಯ ತ್ಯಾಜ್ಯ ವಿಲೇವಾರಿ ಘಟಕ ಹಾಗೂ ಕಸದ ವಾಹನ ದೀರ್ಘಕಾಲದಿಂದ ಕೆಟ್ಟು ನಿಂತಿದ್ದು, ಒಂದು ವರ್ಷ ಕಳೆದರೂ ದುರಸ್ತಿ ಆಗಿಲ್ಲ ಎಂಬ ಮಾಹಿತಿ ಅಧಿಕಾರಿಗಳ ಗಮನಕ್ಕೆ ಬಂದಿದೆ.
ಕುಡಿಯುವ ನೀರಿನ ವ್ಯವಸ್ಥೆ, ಮಹಿಳೆಯರ ಶೌಚಗೃಹ ಹಾಗೂ ಸಿಸಿ ಕ್ಯಾಮೆರಾ ದುರಸ್ತಿ ಕಾಮಗಾರಿಗಳು ಪೂರ್ಣಗೊಂಡಿಲ್ಲ ಎನ್ನಲಾಗಿದೆ. 2023-24ನೇ ಸಾಲಿನ ಕಾಮಗಾರಿಗಳು ಮುಕ್ತಾಯಗೊಂಡಿದ್ದರೂ 2025-26ನೇ ಸಾಲಿನಲ್ಲಿ ಬಿಲ್ ಪ್ರಕ್ರಿಯೆ ನಡೆದಿರುವುದರ ಕುರಿತು ಅಧಿಕಾರಿಗಳು ಮಾಹಿತಿ ಸಂಗ್ರಹಿಸಿದ್ದಾರೆ.
ಇನ್ನು ಸರ್ಕಾರ ನಿಗದಿಪಡಿಸಿರುವ ಕೊಟೇಶನ್ ದರವನ್ನು ಶೇ. 1ರಿಂದ ಶೇ.3ಕ್ಕೆ ಹೆಚ್ಚಿಸಿ ಜನರ ಮೇಲೆ ಹೆಚ್ಚುವರಿ ಭಾರ ಹೇರಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ.
ಪರಿಶೀಲನೆ ಕುರಿತ ಸಂಪೂರ್ಣ ವರದಿಯನ್ನು ಮೇಲಧಿಕಾರಿಗಳಿಗೆ ಸಲ್ಲಿಸಲಾಗುವುದು ಅಧಿಕಾರಿಗಳು ತಿಳಿಸಿದ್ದಾರೆ. ಲೋಕಾಯುಕ್ತ ಅಧಿಕಾರಿಗಳಾದ ಪರಮೇಶ್ವರ ಕವಟಗಿ, ಎಸ್.ಎಸ್. ತೇಲಿ, ಸಿಬ್ಬಂದಿ ಎನ್.ಪಿ. ಅಬಿಂಗೇರ, ಮಂಜು ಗಾರಗಿ, ಹಸನ ದೇಂಪೂರವಾಲ, ಎಂ.ಆರ್ ಹಿರೇಮಠ, ಎಸ್.ವಿ. ನೈನಾಪೂರ, ಸಿ.ಡಿ. ದೊಡಮನಿ, ಅಜ್ಜಪ್ಪ ನೀಲಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net