ಹೊಟ್ಟೆ ನೋವು, ಬಾಯಿಯಲ್ಲಿ ವಿಷ ವಿಷ ಅನಿಸುವುದು, ವಾಂತಿ ಬಂದ ಹಿನ್ನೆಲೆಯಲ್ಲಿ ಊಟ ಸೇವಿಸಿದ ಎಲ್ಲ ಮಕ್ಕಳನ್ನು ಗ್ರಾಮಸ್ಥರು ಬೈಕ್, ಟಾಟಾಏಸ್‌ನಲ್ಲಿ ತಾಲೂಕು ಆಸ್ಪತ್ರೆಗೆ ಕರೆತಂದು ಚಿಕಿತ್ಸೆಗೆ ದಾಖಲಿಸಿದವರು. ಇದಕ್ಕೂ ಪೂರ್ಣದಲ್ಲಿಯೇ ಹಲ್ಲಿ ಪತ್ತೆಯಾದ ಪ್ಲೇಟ್‌ನಲ್ಲಿದ್ದ ಉಪ್ಪಿಟ್ಟು ಸೇವಿಸಿ ಅಸ್ವಸ್ಥವಾಗಿದ್ದ ಬಾಲಕಿಯನ್ನು ಶಾಲಾ ಸಿಬ್ಬಂದಿ ತಾಲೂಕು ಆಸ್ಪತ್ರೆಗೆ ಕರೆತಂದು ಚಿಕಿತ್ಸೆಗೆ ದಾಖಲಿಸಿದರು. ಮಕ್ಕಳ ಸಂಖ್ಯೆ ಹೆಚ್ಚಾಗಿದ್ದರಿಂದ ಹಾಗೂ ಅವರೊಂದಿಗೆ ಪಾಲಕರು, ಗ್ರಾಮಸ್ಥರು ಆಗಮಿಸಿದ್ದರಿಂದ ಕೆಲ ಸಮಯ ಗೊಂದಲದ ವಾತಾವರಣ ನಿರ್ಮಾಣವಾಯಿತು. ತಾಯಂದಿರು ತಮ್ಮ ಮಕ್ಕಳು ಆಸ್ಪತ್ರೆಗೆ ದಾಖಲಾದ ಸುದ್ದಿ ಕೇಳಿ ಕಣ್ಣೀರು ಹಾಕುತ್ತಾ ಆತಂಕದಿಂದ ಆಸ್ಪತ್ರೆಗೆ ಆಗಮಿಸಿದರು. ಬಿಇಒ, ಸಿಪಿಐ ಸೇರಿ ಅನೇಕರು ಆಸ್ಪತ್ರೆಗೆ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಣೆ ನಡೆಸಿದರು.