ಗಣರಾಜ್ಯೋತ್ಸವದ ಆರ್‌ಡಿಸಿ ಪಥಸಂಚಲನಕ್ಕೆ ಆಯ್ಕೆಗೊಂಡ ಎನ್‌ಸಿಸಿ ವಿದ್ಯಾರ್ಥಿಗಳಾದ ಯಲ್ಲಮ್ಮ ಜಾಧವ, ಅಕ್ಷತಾ ಹುಚ್ಚಪ್ಪಯ್ಯನಮಠ, ಕಬಡ್ಡಿ ಸ್ಪರ್ಧೆಯಲ್ಲಿ ಧಾರವಾಡದ ಕವಿವಿ ಬ್ಲೂ ಆಗಿ ಹೊರಹೊಮ್ಮಿದ ನಿರ್ಮಲಾ ಪರಮೇಶ್ವರ, ರಾಜೇಶ್ವರಿ ಅಂಕಲಿ, ಭವಾನಿ ಮಣಕವಾಡ, ಖೋಖೋ ಸ್ಪರ್ಧೆಯಲ್ಲಿ ಸಾಧನೆಗೈದ ಸಂಜಯ ಜಂಗಿನ್, ಡಾಕ್ಟರೇಟ್ ಪ್ರಶಸ್ತಿ ಪುರಸ್ಕೃತ ದಿವ್ಯಾನಂದ ಜಿ.ಆರ್., ಎನ್ನೆಸ್ಸೆಸ್ಸ್‌ನಲ್ಲಿ ಅತ್ಯುತ್ತಮ ಸೇವೆಗೈದ ಎಂ.ಎಂ. ವಡೇಕಾರ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು. ಜಿ.ಟಿ. ಗುಡಿಸಾಗರ, ಶ್ರೀಶೈಲಪ್ಪ ಬ್ಯಾಹಟ್ಟಿ, ಪ್ರೊ. ಜಗದೀಶ ತಳವಾರ, ಪ್ರೊ. ಚಿತ್ತಯ್ಯ, ಶಂಕರ ಲಮಾಣಿ, ಪ್ರೊ. ಭೀಮನಗೌಡ ಕೊಣ್ಣೂರ, ಯಶೋಧಾ ಅಂಗಡಿ, ಡಾ.ರಾಮು ಎಂ.ಎಸ್., ಡಾ.ಪವಿತ್ರಾ ಎಸ್., ಡಾ.ಸಿದ್ದಲಿಂಗಪ್ಪ, ಡಾ.ದುಂಡಪ್ಪ ದೊಡಮನಿ, ಎ.ಎಸ್. ಸೊಪ್ಪಿಮಠ ಇತರರು ಉಪಸ್ಥಿತರಿದ್ದರು. ಪ್ರೊ. ಆರ್.ಎಚ್. ತಿಗಡಿ, ರಮೇಶ ಗಂಗೂರ, ಎಸ್.ವಿ. ಮನಗುಂಡಿ, ಪ್ರೊ. ಗಂಗಾಧರಯ್ಯ ಕಾರ್ಯಕ್ರಮ ನಿರ್ವಹಿಸಿದರು.