LIBERARY: ಮನೆಯಲ್ಲಿ ದೇವರ ಕೋಣೆಯಂತೆ ‘ಪುಸ್ತಕಕ್ಕೂ ಆದ್ಯತೆ’ ನೀಡಲಿ

ನರೇಗಲ್ಲ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ಆಯೋಜಿಸಿದ್ದ ಮನೆಗೊಂದು ಗ್ರಂಥಾಲಯ ಕಾರ್ಯಕ್ರಮವನ್ನು ಡಾ. ಮಾನಸ ಅವರು ಪುಸ್ತಕ ಬಿಡುಗಡೆಗೊಳಿಸುವ ಮೂಲಕ ಉದ್ಘಾಟಿಸಿದರು. ಎಂ. ಎಸ್. ಧಡೇಸೂರಮಠ, ರವೀಂದ್ರನಾಥ ದೊಡ್ಡಮೇಟಿ, ಕು. ಸವಿತಕ್ಕ, ಕಾಶಿನಾಥ ಸಾಲಿಮಠ, ಶಿವಯೋಗಿ ಜಕ್ಕಲಿ ಇತರರು ಇದ್ದರು.
ನರೇಗಲ್ಲ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ಆಯೋಜಿಸಿದ್ದ ಮನೆಗೊಂದು ಗ್ರಂಥಾಲಯ ಕಾರ್ಯಕ್ರಮವನ್ನು ಡಾ. ಮಾನಸ ಅವರು ಪುಸ್ತಕ ಬಿಡುಗಡೆಗೊಳಿಸುವ ಮೂಲಕ ಉದ್ಘಾಟಿಸಿದರು. ಎಂ. ಎಸ್. ಧಡೇಸೂರಮಠ, ರವೀಂದ್ರನಾಥ ದೊಡ್ಡಮೇಟಿ, ಕು. ಸವಿತಕ್ಕ, ಕಾಶಿನಾಥ ಸಾಲಿಮಠ, ಶಿವಯೋಗಿ ಜಕ್ಕಲಿ ಇತರರು ಇದ್ದರು.
Published on
ನರೇಗಲ್ಲ : ಮನೆಯಲ್ಲಿ ದೇವರಮನೆ ಇರುವಂತೆ ‘ಪುಸ್ತಕದ ಮನೆ’ (LIBERARY) ನಿರ್ಮಿಸಿದರೆ ಮನೆಗೊಂದು ಗ್ರಂಥಾಲಯದ ಕನಸು ನನಸಾಗುತ್ತದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸ ಹೇಳಿದರು.
ಪಟ್ಟಣದ ಈಶ್ವರೀಯ ವಿವಿಯಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ, ಜಿಲ್ಲಾ ಜಾಗೃತಿ ಸಮಿತಿ, ಬೀಚಿ ಬಳಗ, ಶರಣ ಸಾಹಿತ್ಯ ಪರಿಷತ್ ಹಾಗೂ ತಾಲೂಕು ಜಾನಪದ ಪರಿಷತ್, ನಿರಂತರ ಪ್ರಕಾಶನ ಗದಗ ಇವರ ಸಹಯೋಗದಲ್ಲಿ ಆಯೋಜಿಸಿದ್ದ ‘ಮನೆಗೊಂದು ಗ್ರಂಥಾಲಯ’ ಅನುಷ್ಠಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಡಾ. ಬಿ.ಆರ್. ಅಂಬೇಡ್ಕರ್ ಅವರ ಜ್ಞಾನ ದಾಹದ ದಾರಿಯಲ್ಲಿ ಸಾಗಿರುವ ಪುಸ್ತಕ ಪ್ರಾಧಿಕಾರವು ಜನಸಾಮಾನ್ಯರಲ್ಲಿ ಜ್ಞಾನದ ಹಸಿವನ್ನು ಹೆಚ್ಚಿಸುವ ಕಾರ್ಯ ಮಾಡುತ್ತಿದೆ ಎಂದರು.
ಮನೆಗಳಲ್ಲಿ ಸ್ಥಾಪನೆಯಾದ ಗ್ರಂಥಾಲಯ ಹಾಗೂ ಅದರ ಬೆಳವಣಿಗೆಯನ್ನು ಇನ್ನಷ್ಟು ಪ್ರೋತ್ಸಾಹಿಸಲು ನಂಜನಗೂಡು ತಿರುಮಲಾಂಬ, ಡಾ. ಹಾ.ಮಾ. ನಾಯಕ, ಪಿ.ಆರ್. ತಿಪ್ಪೇಸ್ವಾಮಿ ಹಾಗೂ ಗಳಗನಾಥ ಎಂಬ ನಾಲ್ಕು ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುತ್ತಿದೆ. ಇದು ಇತರರಿಗೆ ಮನೆಗೊಂದು ಗ್ರಂಥಾಲಯ ಸ್ಥಾಪಿಸಲು ಪ್ರೇರಣೆಯಾದರೆ, ಈಗಾಗಲೆ ಸ್ಥಾಪಿಸಿದವರಿಗೆ ಹೆಮ್ಮೆ ಮತ್ತು ಅಭಿಮಾನ ಮೂಡಿಸುತ್ತದೆ ಎಂದರು.
ಚಿಂತಕ ರವೀಂದ್ರನಾಥ ದೊಡ್ಡಮೇಟಿ ಮಾತನಾಡಿ, ಪುಸ್ತಕ ಸಂಸ್ಕೃತಿಯನ್ನು ಬೆಳೆಸಲು ಶ್ರಮಿಸುತ್ತಿರುವ ಪ್ರಾಧಿಕಾರದ ಕಾರ್ಯ ಸ್ತುತ್ಯವಾದುದು ಎಂದರು.
ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಎಂ. ಎಸ್. ಧಡೇಸೂರಮಠ ಮಾತನಾಡಿ, ಪ್ರಾಧಿಕಾರದ ಕಾರ್ಯಗಳು ಕೇವಲ ಬೆಂಗಳೂರು- ಮೈಸೂರಿಗರಿಗೆ ಮಾತ್ರ ಸೀಮಿತವಾಗಬಾರದು. ಉತ್ತರ ಕರ್ನಾಟಕದಲ್ಲಿಯೂ ಬರೆಯುವ ಸಾಮರ್ಥ್ಯ ಇರುವ ಬೇಕಾದಷ್ಟು ಪ್ರತಿಭೆಗಳಿವೆ. ಪುಸ್ತಕ ಪ್ರಾಧಿಕಾರವು ಮುಂದಿನ ದಿನಗಳಲ್ಲಿ ಈ ಪ್ರತಿಭೆಗಳನ್ನು ಬಳಸಿಕೊಂಡು ಅವರಿಂದಲೂ ಪುಸ್ತಕ ಬರೆಸುವ ಕಾರ್ಯಕ್ಕೆ ಮುಂದಾಗಬೇಕು ಎಂದರು.
ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ಕು. ಸವಿತಕ್ಕ, ಕಾಶಿನಾಥ ಸಾಲಿಮಠ ಮಾತನಾಡಿದರು. ಬೀಚಿ ಬಳಗದ ಅಧ್ಯಕ್ಷ ಶಿವಯೋಗಿ ಜಕ್ಕಲಿ, ನಿರಂತರ ಪ್ರಕಾಶನದ ಎ.ಎಸ್. ಮಕಾನದಾರ, ದೊಡ್ಡಯ್ಯ ಅರವಟಗಿಮಠ, ಕಲ್ಲಯ್ಯ ಹಿರೇಮಠ, ಭರಮಪ್ಪ ತಾಳಿ, ಗುರುಪಾದಪ್ಪ ಬೆಲ್ಲದ, ಸುರೇಶ ಹಳ್ಳಿಕೇರಿ, ವಿರುಪಾಕ್ಷಯ್ಯ ಅಣ್ಣಿಗೇರಿ, ಮಲ್ಲಿಕಾರ್ಜುನ ವೀರಾಪೂರ, ಸಂಗಯ್ಯ ಪ್ರಭುಸ್ವಾಮಿಮಠ, ಬಸವರಾಜ ಕಲಾಲಬಂಡಿ, ವೀರಭದ್ರಪ್ಪ ಕೆರಿಯವರ ಇತರರಿದ್ದರು. ವೀರಭದ್ರಪ್ಪ ಕುಂಬಾರ ನಿರೂಪಿಸಿದರು. ಮಹಾದೇವಪ್ಪ ಬೇವಿನಕಟ್ಟಿ ಸ್ವಾಗತಿಸಿದರು. ರವಿ ದೇವರೆಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಳಕಪ್ಪ ಕಳಕಣ್ಣವರ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net