DRAIN ಚರಂಡಿಗೆ ಸಮರ್ಪಕ ಸಿಡಿ ನಿರ್ಮಿಸಿ ಕೊಡಲಿ

DRAIN ನರಗುಂದ ತಾಲೂಕು ಕೊಣ್ಣೂರಿನ ರಾಷ್ಟ್ರೀಯ ಹೆದ್ದಾರಿ ಬಳಿಯ ಚರಂಡಿಗೆ ಸಮರ್ಪಕ ಸಿಡಿ ನಿರ್ಮಿಸಬೇಕು ಎಂದು  ಹೆದ್ದಾರಿ ನಿಗಮದ ಅಧಿಕಾರಿಗಳಿಗೆ ಗುರುವಾರ ಮನವಿ ಸಲ್ಲಿಸಲಾಯಿತು.
DRAIN ನರಗುಂದ ತಾಲೂಕು ಕೊಣ್ಣೂರಿನ ರಾಷ್ಟ್ರೀಯ ಹೆದ್ದಾರಿ ಬಳಿಯ ಚರಂಡಿಗೆ ಸಮರ್ಪಕ ಸಿಡಿ ನಿರ್ಮಿಸಬೇಕು ಎಂದು ಹೆದ್ದಾರಿ ನಿಗಮದ ಅಧಿಕಾರಿಗಳಿಗೆ ಗುರುವಾರ ಮನವಿ ಸಲ್ಲಿಸಲಾಯಿತು.
Published on
ನರಗುಂದ: ತಾಲೂಕಿನ ಕೊಣ್ಣೂರಿನ ರಾಮದುರ್ಗ ಕ್ರಾಸ್ ಬಳಿಯ ರಾಷ್ಟ್ರೀಯ ಹೆದ್ದಾರಿ ಚರಂಡಿಗೆ (DRAIN) ಸಮರ್ಪಕ ಸಿಡಿ ನಿರ್ಮಿಸಬೇಕು ಎಂದು ಕರ್ನಾಟಕ ರೈತಸಂಘ, ಹಸಿರು ಸೇನೆ ಪದಾಧಿಕಾರಿಗಳು ರಾಷ್ಟ್ರೀಯ ಹೆದ್ದಾರಿ ನಿಗಮದ ಅಧಿಕಾರಿಗಳಿಗೆ ಗುರುವಾರ ಮನವಿ ಸಲ್ಲಿಸಿದರು.
ಕೊಣ್ಣೂರ ಬಸ್ ನಿಲ್ದಾಣ ಬಳಿಯ ರಾಷ್ಟ್ರೀಯ ಹೆದ್ದಾರಿ ಅಕ್ಕ-ಪಕ್ಕದಲ್ಲಿ ವೈಜ್ಞಾನಿಕವಾಗಿ ಚರಂಡಿ ನಿರ್ಮಿಸದೆ ಸ್ಥಳೀಯ ಗ್ರಾಮ ಪಂಚಾಯಿತಿ ಅಧಿಕಾರಿಗಳು ಮತ್ತು ಗುತ್ತಿಗೆದಾರರು ನಿರ್ಲಕ್ಷ್ಯ ವಹಿಸಿದ್ದಾರೆ. ಅವೈಜ್ಞಾನಿಕ ರಸ್ತೆ ನಿರ್ಮಾಣದಿಂದ ಕೊಣ್ಣೂರಿನ ವಿವಿಧ ಬಡಾವಣೆಗಳ ಸಾರ್ವಜನಿಕರು, ಅಂಗಡಿ- ಮುಗ್ಗಟ್ಟುಗಳ ಮಳೆ, ಹೊಲಗಾಲುವೆ ಹಾಗೂ ನಿತ್ಯ ಬಳಕೆಯ ಅಪಾರ ಪ್ರಮಾಣದ ಮಲಿನ ನೀರು ರೈತರ ಜಮೀನಿನಲ್ಲಿ ಸಂಗ್ರಹಗೊಳ್ಳುತ್ತಿದೆ. ಪರಿಣಾಮ ಈ ಭಾಗದ ರೈತರು ತಮ್ಮ ಜಮೀನಿನಲ್ಲಿ ಬೆಳೆದ ಫಸಲು ಹಾಳಾಗುತ್ತಿದೆ. ಅಳಿದುಳಿದ ಬೆಳೆಗಳ ಕಟಾವು ಮಾಡಿಕೊಂಡು ಬರಲು ಸಮಸ್ಯೆ ಉಂಟಾಗುತ್ತಿದೆ. ಅಶೋಕ ಪಾಟೀಲ ಅವರ 3 ಎಕರೆ ಕಬ್ಬು, ನಿಂಗಪ್ಪ ಪತ್ತಾರ ಅವರ 3 ಎಕರೆ ಸೂರ್ಯಕಾಂತಿ, ಪಾಂಡಪ್ಪ ಮಳಲಿ 2 ಎಕರೆಯಲ್ಲಿ ಬೆಳೆದಿದ್ದ ಹಿಂಗಾರು ಹಂಗಾಮಿನ ಬೆಳೆಗಳು ಸಂಪೂರ್ಣ ಹಾನಿಗೀಡಾಗಿವೆ. ಚರಂಡಿ ನೀರಿನಿಂದ ಗಬ್ಬು ವಾಸನೆ ಹರಡುವುದರೊಂದಿಗೆ ರೋಗ-ರುಜಿನಗಳಿಗೆ ಕಾರಣವಾಗಿದೆ. ಕಾಲಕಾಲಕ್ಕೆ ತ್ಯಾಜ್ಯ ಸ್ವಚ್ಛಗೊಳಿಸಿ ಚರಂಡಿ ನೀರು ಸರಾಗವಾಗಿ ಹರಿದು ಹೋಗಲು ರಾಷ್ಟ್ರೀಯ ಹೆದ್ದಾರಿ ನಿಗಮದಿಂದ ತಕ್ಷಣವೇ ವೈಜ್ಞಾನಿಕವಾಗಿ ದೊಡ್ಡ ಪೈಪ್‌ಲೈನ್ ಸಿಡಿ ನಿರ್ಮಿಸಿ ಬಹುದಿನಗಳ ಸಮಸ್ಯೆಗೆ ಶಾಶ್ವತ ಮುಕ್ತಿ ದೊರಕಿಸಿಕೊಡಬೇಕು. ಇಲ್ಲದಿದ್ದರೆ ಕೊಣ್ಣೂರಿನ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟಿಸಲಾಗುವುದು ಎಂದು ಎಚ್ಚರಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net