culture: ಯವ ಸಮೂಹ ಭವ್ಯ ಭಾರತದ ಸಂಸ್ಕೃತಿ ಉಳಿಸಿ ಬೆಳೆಸಲಿ

culture: ಹೊಳೆಆಲೂರ ಸಮೀಪದ ಬಿ.ಎಸ್.ಬೇಲೇರಿ ಗ್ರಾಮದ ಸುಖಮುನೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಧರ್ಮಸಭೆಯಲ್ಲಿ 21 ಕರುಗಳಿಗೆ ಜನ್ಮ ನೀಡಿದ ಸುಖಮುನೇಶ್ವರ ಮಠದ ಗೋಮಾತಗೆ ತುಲಾಭಾರ ಸೇವೆ ಸಲ್ಲಿಸಲಾಯಿತು.
culture: ಹೊಳೆಆಲೂರ ಸಮೀಪದ ಬಿ.ಎಸ್.ಬೇಲೇರಿ ಗ್ರಾಮದ ಸುಖಮುನೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಧರ್ಮಸಭೆಯಲ್ಲಿ 21 ಕರುಗಳಿಗೆ ಜನ್ಮ ನೀಡಿದ ಸುಖಮುನೇಶ್ವರ ಮಠದ ಗೋಮಾತಗೆ ತುಲಾಭಾರ ಸೇವೆ ಸಲ್ಲಿಸಲಾಯಿತು.
Published on
ಹೊಳೆಆಲೂರ: ನಾವು ಮಾಡುವ ಕರ್ಮಕ್ಕೆ ಅನುಗುಣವಾಗಿ ಭಗವಂತ ನಮಗೆ ಫಲಗಳನ್ನು ನೀಡುತ್ತಾನೆ. ಕಾರಣ ಯುವಕರು ನಮ್ಮ ಭವ್ಯ ಪರಂಪರೆಯ (culture) ಧಾರ್ಮಿಕ ಆಚಾರ ವಿಚಾರಗಳನ್ನು ಗೌರವಿಸಿ ಸಮಾಜಮುಖಿ ಚಿಂತನೆಯನ್ನು ಮೈಗೊಡಿಸಿಕೊಂಡು ಧರ್ಮ, ಸಮಾಜದ ಏಳಿಗೆಗಾಗಿ ಪ್ರಾಮಾಣಿಕವಾಗಿ ತೊಡಗಿಸಿಕೊಳ್ಳಬೇಕು ಎಂದು ನವಲಗುಂದ ಗವಿಮಠದ ಬಸವಲಿಂಗ ಸ್ವಾಮೀಜಿ ಹೇಳಿದರು.
ಬಿ.ಎಸ್. ಬೇಲೇರಿ ಗ್ರಾಮದ ಪವಾಡ ಪುರುಷ ಸುಖಮುನೇಶ್ವರರ 65ನೇ ಜಾತ್ರಾ ಮಹೋತ್ಸವ, ಶರಣಬಸವೇಶ್ವರ ಪುರಾಣ ಮಂಗಲೋತ್ಸವ ಹಾಗೂ ಗೋಮಾತೆಯ ತುಲಾಭಾರದ ನಂತರ ಗುರುವಾರ ಜರುಗಿದ ಧರ್ಮ ಸಭೆಯಲ್ಲಿ ತುಲಾಭಾರ ಸ್ವೀಕರಿಸಿ ಅವರು ಮಾತನಾಡಿದರು. ‘ಆಧುನಿಕ ಜಗತ್ತು ತಂತ್ರಜ್ಞಾನದಲ್ಲಿ ಮುಂದುರಿದಿದ್ದರೂ ಯುವಕರು ಹಾಗೂ ಮಹಿಳೆಯರು ಶಾಂತಿ ಹಾಗೂ ನೆಮ್ಮದಿಯಿಂದ ಜೀವನ ನಡೆಸದಂತಾಗಿದೆ. ಭಾರತದ ಸನಾತನ ಸಂಸ್ಕೃತಿ ವಿಶ್ವವೇ ಮೆಚ್ಚುವಂಥದ್ದು. ಆದರೆ, ಇಂದು ಯುವಕರು ಹಲವು ದುಶ್ಚಟಗಳಿಗೆ ದಾಸರಾಗಿ ತಮ್ಮ ಜೀವನ ಹಾಳು ಮಾಡಿಕೊಳ್ಳುವುದರ ಜತೆಗೆ ಕುಟುಂಬ ಮತ್ತು ಸಮಾಜಕ್ಕೆ ಕಂಟಕಪ್ರಾಯವಾಗಿ ಪರಿಣಮಿಸುತ್ತಿದ್ದಾರೆ. ಅವರಿಗೆ ಹಿರಿಯರು, ಧಾರ್ಮಿಕ ಸಂತರು ಆಧ್ಯಾತ್ಮಿಕ ಜ್ಞಾನ ನೀಡಿ ಸಮಾಜದ ಆಸ್ತಿಯಾಗಿ ಬೆಳೆಸುವ ಅಗತ್ಯವಿದೆ ಎಂದರು. ಅಲ್ಲದೆ, ಗ್ರಾಮಸ್ಥರು ತಮಗೆ ಮಾಡಿದ 4 ತುಲಾಭಾರದ ಹಣವನ್ನು ಸುಖಮುನೇಶ್ವರ ಮಠದ ಅಭಿವೃದ್ಧಿಗೆ ಬಳಕೆಯಾಗಲಿ ಎಂದರು.
ಸಾನ್ನಿಧ್ಯ ವಹಿಸಿದ್ದ ಬೈರನಹಟ್ಟಿಯ ಶಾಂತಲಿಂಗ ಸ್ವಾಮೀಜಿ ಮಾತನಾಡಿ, ಮಹಿಳೆಯರು ಸ್ವಾವಲಂಬಿಗಳಾಗುವುದರ ಜೊತೆಗೆ ಧಾರ್ಮಿಕ ಪರಂಪರೆಗಳನ್ನು ಮಕ್ಕಳಿಗೆ ಬಾಲ್ಯದಲ್ಲಿಯೇ ಕಲಿಸಿಕೊಡಬೇಕು. ಪಾಲಕರು ಅಸಡ್ಡೆ ವಹಿಸಿದರೆ ಸಮಾಜ ಕೆಲವೆ ದಿನಗಳಲ್ಲಿ ಅಧೋಗತಿಗೆ ಹೋಗುವ ಸಂಭವವಿದೆ. ಶಿಕ್ಷಣದ ಜೊತೆಗೆ ಸಂಸ್ಕಾರ ನೀಡಿದರೆ ನಮ್ಮ ಗ್ರಾಮಗಳ ಸೊಗಡು ಉಳಿಯುತ್ತದೆ ಎಂದರು.
ಹಾವೇರಿ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ, ವಿಜಯಪುರ ಬೃಹನ್ಮಠದ ಜಯಶಾಂತಲಿಂಗೇಶ್ವರ ಶ್ರೀಗಳು, ಹುಬ್ಬಳ್ಳಿ ರುದ್ರಾಕ್ಷಿ ಮಠದ ಬಸವಲಿಂಗ ಸ್ವಾಮೀಜಿ, ರಾಮದುರ್ಗದ ಶಾಂತವೀರ ಶ್ರೀಗಳು, ಯಲಬುರ್ಗಾದ ಬಸವಲಿಂಗ ಶ್ರೀಗಳು, ಬೆನಹಾಳದ ಸದಾಶಿವ ಶ್ರೀಗಳು, ಗದಗಿನ ಚಂದ್ರಶೇಖರ ದೇವರು, ಹೊಳೆಆಲೂರ ಯಚ್ಚರಸ್ವಾಮೀಜಿ, ಕೊತಬಾಳದ ಗಂಗಾಧರ ಸ್ವಾಮೀಜಿ, ಅಕ್ಕಿ ಆಲೂರಿನ ಶಿವಬಸವ ಸ್ವಾಮೀಜಿ, ಬದಾಮಿಯ ಶಿವಪೂಜಾ ಶ್ರೀಗಳು ಹಾಗೂ ಜಿಗೇರಿಯ ಗುರುಸಿದ್ಧ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು.
ಸಣ್ಣಬಸಪ್ಪ ಕರಡಿ, ಶರಣಪ್ಪ ಹೊಸಮನಿ, ಹನಮಪ್ಪ ಮಾಡಲಗೇರಿ, ನೆಹರು ಹಡಪದ ಕುಟುಂಬದವರು ನವಲಗುಂದ ಬಸವಲಿಂಗ ಶ್ರೀಗಳಿಗೆ ತುಲಾಭಾರ ಸೇವೆ ಮಾಡಿದರು. ಪರಶುರಾಮ ಹಡಪದ ಕುಟುಂಬದವರು ಅಕ್ಕಿ ಆಲೂರಿನ ಶಿವ ಬಸವ ಶ್ರೀಗಳಿಗೆ ತುಲಾಭಾರ ಮಾಡಿದರೆ, 21 ಕರುಗಳಿಗೆ ಜನ್ಮ ನೀಡಿದ ಶ್ರೀಮಠದ ಗೋಮಾತೆಗೆ ಲಕ್ಷ್ಮವ್ವ ಸುಳ್ಳಿಕೇರಿ ಕುಟುಂಬದವರು ತುಲಾಭಾರ ಸೇವೆ ಸಲ್ಲಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net