youth: ಯುವಕರಲ್ಲಿ ದೇಶಾಭಿಮಾನ ಜಾಗೃತಿ ಮೊಳಗಲಿ

ನರಗುಂದ ತಾಲೂಕಿನ ಚಿಕ್ಕನರಗುಂದ ಗ್ರಾಮದಲ್ಲಿ ಆಯೋಜಿಸಿದ್ದ ಹರ್ ಘರ್ ತಿರಂಗಾ ಅಭಿಯಾನಕ್ಕೆ ಶಾಸಕ ಸಿ.ಸಿ.ಪಾಟೀಲ ಮಂಗಳವಾರ ಚಾಲನೆ ನೀಡಿದರು. ಮುತ್ತು ರಾಯರಡ್ಡಿ, ಮಹೇಶ್ವರಯ್ಯ ಸುರೇಬಾನ,ಕುರ್ತಕೋಟಿ, ಉಮೇಶಗೌಡ ಪಾಟೀಲ, ಇತರರಿದ್ದರು.
ನರಗುಂದ ತಾಲೂಕಿನ ಚಿಕ್ಕನರಗುಂದ ಗ್ರಾಮದಲ್ಲಿ ಆಯೋಜಿಸಿದ್ದ ಹರ್ ಘರ್ ತಿರಂಗಾ ಅಭಿಯಾನಕ್ಕೆ ಶಾಸಕ ಸಿ.ಸಿ.ಪಾಟೀಲ ಮಂಗಳವಾರ ಚಾಲನೆ ನೀಡಿದರು. ಮುತ್ತು ರಾಯರಡ್ಡಿ, ಮಹೇಶ್ವರಯ್ಯ ಸುರೇಬಾನ,ಕುರ್ತಕೋಟಿ, ಉಮೇಶಗೌಡ ಪಾಟೀಲ, ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ತ್ರಿವರ್ಣ ಧ್ವಜ ನಮ್ಮ ದೇಶದ ಹೆಮ್ಮೆ
  • ಶಾಸಕ ಸಿ.ಸಿ.ಪಾಟೀಲ ಹೇಳಿಕೆ
  • ‘ಹರ್ ಘರ್ ತಿರಂಗಾ’ ಅಭಿಯಾನಕ್ಕೆ ಚಾಲನೆ
ನರಗುಂದ: ದೇಶದ ಪ್ರತಿಯೊಬ್ಬ ನಾಗರಿಕರಲ್ಲಿ ಆಳವಾದ ದೇಶ ಭಕ್ತಿಯ ಪ್ರಜ್ಞೆ ಹುಟ್ಟು ಹಾಕುವುದು. ಸ್ವಾತಂತ್ರ್ಯ ಹೋರಾಟಗಾರರು, ರಾಷ್ಟ್ರ ಧ್ವಜದ ಮಹತ್ವ, ದೇಶಾಭಿಮಾನದ ಬಗ್ಗೆ ಯುವಕರು (youth) ಸದಾಕಾಲ ಚಿಂತನೆ, ಜಾಗೃತಿ ಹೊಂದಿದವರಾಗಿರಬೇಕು ಎಂದು ಶಾಸಕ ಸಿ.ಸಿ.ಪಾಟೀಲ ಹೇಳಿದರು.
ಸ್ವಾತಂತ್ರ್ಯೋತ್ಸವ ಅಂಗವಾಗಿ ತಾಲೂಕಿನ ಚಿಕ್ಕನರಗುಂದ ಗ್ರಾಮದಲ್ಲಿ ಆಯೋಜಿಸಿದ್ದ ‘ಹರ್ ಘರ್ ತಿರಂಗಾ’ ಅಭಿಯಾನಕ್ಕೆ ಮಂಗಳವಾರ ಚಾಲನೆ ನೀಡಿ ಅವರು ಮಾತನಾಡಿದರು. ‘2022ರಲ್ಲಿ ‘ಆಜಾದಿ ಕಾ ಅಮೃತ ಮಹೋತ್ಸವ’ದ ಅಡಿಯಲ್ಲಿ ಪ್ರಾರಂಭವಾದ ’ಹರ್ ಘರ್ ತಿರಂಗಾ’ ಅಭಿಯಾನವು ನಂತರದ ವರ್ಷಗಳ ಸ್ವಾತಂತ್ರ್ಯ ದಿನಾಚರಣೆಯಂದು ಮುಂದುವರಿದಿದೆ. ತ್ರಿವರ್ಣ ಧ್ವಜವು ನಮ್ಮ ದೇಶದ ಹೆಮ್ಮೆ. ದೇಶಕ್ಕಾಗಿ ಕೊಡುಗೆ ನೀಡಲು ಇದು ನಿರಂತರ ಪ್ರೇರಣೆಯಾಗಿದೆ. ದೇಶಾಭಿಮಾನ ಕೇವಲ ಶಾಲಾ-ಕಾಲೇಜ್ ವಿದ್ಯಾರ್ಥಿಗಳಿಗೆ ಸೀಮಿತವಲ್ಲ. ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯಂದು ತಾಲೂಕಿನ ಪ್ರತಿಯೊಬ್ಬ ಪ್ರಜೆಗಳು ’ಹರ್ ಘರ್ ತಿರಂಗಾ’ ಅಭಿಯಾನದಲ್ಲಿ ಉತ್ಸಾಹದಿಂದ ಪಾಲ್ಗೊಳ್ಳಬೇಕು. ಆಗಸ್ಟ್ 13ರಿಂದ 15ರವರೆಗೆ ತಾಲೂಕಿನಾದ್ಯಂತ ಅತ್ಯಂತ ಹೆಮ್ಮೆ, ಗೌರವದಿಂದ ನಾಗರಿಕರು ತಮ್ಮ ಮನೆಗಳ ಮೇಲೆ ರಾಷ್ಟ್ರ ಧ್ವಜವನ್ನು ಹಾರಿಸಬೇಕು ಎಂದರು.
ಮಹಾತ್ಮ ಗಾಂಧೀಜಿ, ಸುಭಾಸಚಂದ್ರ ಬೋಸ್ ಮುಂತಾದವರು ದೇಶದ ಸ್ವಾತಂತ್ರ್ಯಕ್ಕಾಗಿ ಶ್ರಮಿಸಿದ್ದಾರೆ. ಪ್ರತಿಯೊಬ್ಬರ ಹೋರಾಟದ ಫಲವಾಗಿ ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರೆತಿದೆ. ಸಮಾಜದ ಪ್ರತಿಯೊಬ್ಬರೂ ದೇಶಾಭಿಮಾನದಿಂದ ಧ್ವಜಗಳನ್ನು ಖರೀದಿಸಿ ತಮ್ಮ ಮನೆಗಳ ಮೇಲೆ ರಾರಾಜಿಸುವಂತೆ ನೋಡಿಕೊಳ್ಳಬೇಕು ಎಂದರು.
ಮಾಜಿ ಸೈನಿಕ ಮಹೇಶ್ವರಯ್ಯ ಸುರೇಬಾನ, ಗ್ರಾಪಂ ಮಾಜಿ ಅಧ್ಯಕ್ಷ ಮುತ್ತು ರಾಯರಡ್ಡಿ, ಶಿಕ್ಷಕಿ ಅನ್ನಪೂರ್ಣ ತೇಲಿ ಮಾತನಾಡಿದರು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಡಿ.ಎಸ್. ೆಂಚನಗೌಡ್ರ ಸರ್ಕಾರಿ ಪ್ರೌಢ ಶಾಲೆ ವಿದ್ಯಾರ್ಥಿಗಳಿಂದ ಹರ್ ಘರ್ ತಿರಂಗಾ ಜಾಗೃತಿ ಮೆರವಣಿಗೆ ನಡೆಸಲಾಯಿತು. ನಾಗನಗೌಡ ತಿಮ್ಮನಗೌಡ್ರ, ಉಮೇಶಗೌಡ ಪಾಟೀಲ, ರುದ್ರಗೌಡ ರಾಚನಗೌಡ್ರ, ಮಲ್ಲಪ್ಪ ತೋರಗಲ್, ವೀರಣ್ಣ ಹೊಂಗಲ, ಸೋಮು ಹೊಂಗಲ, ಬಿ.ಬಿ. ಬ್ಯಾಳಿ, ಅನಿಲ ಧರೆಯಣ್ಣವರ, ಗೌಸ ತಾಲೀಮನವರ, ಹಸನ ನವದಿ, ಬಿ.ಐ. ಯರಗಟ್ಟಿ, ಗುರಪ್ಪ ಆದೆಪ್ಪನವರ, ಶಿವಪ್ಪ ಬೋಳಶೆಟ್ಟಿ, ಆರ್.ಬಿ. ಅಳಗವಾಡಿ, ಬಸ್ಸು ಪಾಟೀಲ, ಮಲ್ಲಪ್ಪ ಪೂಜಾರ, ನಿಂಗಪ್ಪ ಗಾಣಿಗೇರ, ಮಂಜು ಬಾಚಿ, ಶಿವಾನಂದ ಕುಲಕರ್ಣಿ, ಪವಾಡೆಪ್ಪ ವಡ್ಡಿಗೇರಿ, ಮಾರುತಿ ಬೆಳವಣಿಕಿ, ಸಿದ್ದೇಶ ಹೂಗಾರ, ಎಂ.ಎಸ್. ಪಾಟೀಲ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net