ಶಿಕ್ಷಕರ ನೇಮಕಕ್ಕೆ ಸರ್ಕಾರ ಮುಂದಾಗಲಿ

ಮುಂಡರಗಿ ಪಟ್ಟಣದಲ್ಲಿ ಗುರುವಾರ ಏರ್ಪಡಿಸಿದ್ದ ಚುಟುಕು ಸಾಹಿತ್ಯ ಲೇಖಕಿಯರ 10ನೇ ಸಮ್ಮೇಳನದಲ್ಲಿ ವಿವಿಧ ಗ್ರಂಥ ಬಿಡುಗಡೆಗೊಳಿಸಲಾಯಿತು. ಡಾ. ಅನ್ನದಾನೀಶ್ವರ ಶಿವಯೋಗಿಗಳವರು, ಡಾ. ಸುಜ್ಞಾನದೇವ ಶಿವಾಚಾರ್ಯರು, ಕೃಷ್ಣಮೂರ್ತಿ ಕುಲಕರ್ಣಿ ಇತರರಿದ್ದರು.
ಮುಂಡರಗಿ ಪಟ್ಟಣದಲ್ಲಿ ಗುರುವಾರ ಏರ್ಪಡಿಸಿದ್ದ ಚುಟುಕು ಸಾಹಿತ್ಯ ಲೇಖಕಿಯರ 10ನೇ ಸಮ್ಮೇಳನದಲ್ಲಿ ವಿವಿಧ ಗ್ರಂಥ ಬಿಡುಗಡೆಗೊಳಿಸಲಾಯಿತು. ಡಾ. ಅನ್ನದಾನೀಶ್ವರ ಶಿವಯೋಗಿಗಳವರು, ಡಾ. ಸುಜ್ಞಾನದೇವ ಶಿವಾಚಾರ್ಯರು, ಕೃಷ್ಣಮೂರ್ತಿ ಕುಲಕರ್ಣಿ ಇತರರಿದ್ದರು.
Published on

ಮುಂಡರಗಿ: 

ಸಾಹಿತ್ಯದ ಮೂಲಕ ನಮ್ಮನ್ನು ನಾವು ಪರಿವರ್ತನೆ ಮಾಡಿಕೊಳ್ಳಬೇಕು. ಯುವಕರು ನಿರಂತರ ಅಧ್ಯಯನದಲ್ಲಿ ತೊಡಗಬೇಕು. ಸರ್ಕಾರವು ಜನತೆಗೆ ಉಚಿತ ಸೌಲಭ್ಯಗಳನ್ನು ವಿತರಿಸುವ ಬದಲಾಗಿ ಶಾಲಾ ಶಿಕ್ಷಕರ ನೇಮಕಾತಿಗೆ ಮುಂದಾಗಬೇಕು ಎಂದು ಮೈಸೂರು ಜಪದಕಟ್ಟೆ ಡಾ. ಸುಜ್ಞಾನದೇವ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಪಟ್ಟಣದ ಕೆ.ಆರ್. ಬೆಲ್ಲದ ಮಹಾವಿದ್ಯಾಲಯ ಸಭಾಭವನದಲ್ಲಿ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ಹುಬ್ಬಳ್ಳಿ ಕೇಂದ್ರ ಸಮಿತಿ, ಗದಗ ಜಿಲ್ಲಾ ಹಾಗೂ ತಾಲೂಕು ಘಟಕಗಳ ಆಶ್ರಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಚುಟುಕು ಸಾಹಿತ್ಯ ಲೇಖಕಿಯರ 10ನೇ ಸಮ್ಮೇಳನ ಹಾಗೂ ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾರಂಭದ ಸಾನ್ನಿಧ್ಯ ವಹಿಸಿದ್ದ ನಾಡೋಜ ಡಾ.ಅನ್ನದಾನೀಶ್ವರ ಶಿವಯೋಗಿಗಳವರು ಮಾತನಾಡಿ, ಕಡಿಮೆ ಅಕ್ಷರಗಳಲ್ಲಿ ಅರ್ಥಗರ್ಭಿತ ಸಂದೇಶ ಸಾರುವ ಶಕ್ತಿ ಚುಟುಕು ಸಾಹಿತ್ಯಕ್ಕಿದೆ. ಸಾಹಿತ್ಯ ಕ್ಷೇತ್ರದಲ್ಲಿ ಚುಟುಕು ಸಾಹಿತ್ಯಕ್ಕೆ ವಿಶೇಷ ಸ್ಥಾನವಿದೆ. ಯುವಕರು ಚುಟುಕು ರಚನೆಯತ್ತ ಗಮನ ಹರಿಸಬೇಕು. ಕನ್ನಡ ಭಾಷೆ ಉಳಿಸಿ ಅಭಿವೃದ್ಧಿಗೊಳಿಸಬೇಕು. ಯುವಕರು ದೇಶದ ಸಂಪದ್ಭರಿತ ಶಕ್ತಿಯಾಗಿದ್ದು, ಯುವಕರನ್ನು ಸದ್ಭಳಕೆ ಮಾಡಿಕೊಳ್ಳಬೇಕು. ಮನುಷ್ಯ ನಿರಂತರ ಪ್ರಯತ್ನಶೀಲನಾಗಬೇಕು ಎಂದರು.
ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದ್ದ ಸುಧಾ ಶೀಲವಂತರ ಮಾತನಾಡಿ, ಕನ್ನಡ ಭಾಷೆ ಹಾಗೂ ಸಂಸ್ಕೃತಿಗಳ ಇತಿಹಾಸ ಸುದೀರ್ಘವಾಗಿದೆ. ಕನ್ನಡ ಭಾಷೆಯ ಎಂಟು ಸಾಹಿತಿಗಳು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ. ಇಂದಿನ ತಲೆಮಾರಿನವರು ನಮ್ಮ ಭಾಷೆಯ ಇತಿಹಾಸವನ್ನು ತಿಳಿದುಕೊಳ್ಳಬೇಕು ಎಂದರು.
ಚುಟುಕು ಲೇಖಕಿಯರ ಸಮ್ಮೇಳನದ ನಿಕಟಪೂರ್ವ ಅಧ್ಯಕ್ಷೆ ಹನುಮಾಕ್ಷಿ ಗೋಗಿ ಮಾತನಾಡಿ, ಸಾವಿರಾರು ವರ್ಷಗಳ ಸಮೃದ್ಧ ಇತಿಹಾಸವನ್ನು ಹೊಂದಿದ್ದು, ಕನ್ನಡವು ದೇಶದ ಒಂದು ಸಶಕ್ತ ಭಾಷೆಯಾಗಿದೆ. ಸಾಹಿತ್ಯ ರಚನೆ ಗುಣ ಕನ್ನಡಿಗರ ರಕ್ತದಲ್ಲಿ ಕರಗತವಾಗಿದೆ ಎಂದರು.
ಡಾ.ಶರಣಪ್ಪ ಕೊಟಗಿ ಅವರು ವಿವಿಧ ಕೃತಿಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಚುಸಾಪ ತಾಲೂಕಾಧ್ಯಕ್ಷ ಸಿ.ಎಸ್.ಅರಸನಾಳ ಅಭಿನಂದನಾ ನುಡಿಗಳನ್ನಾಡಿದರು. ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್‌ನಿಂದ ಡಾ.ಅನ್ನದಾನೀಶ್ವರ ಶಿವಯೋಗಿಗಳಿಗೆ ಚುಟುಕು ಭೂಷಣ, ಮಾಜಿ ಸಚಿವ ಎಸ್.ಎಸ್.ಪಾಟೀಲ ಅವರಿಗೆ ಚುಟುಕು ದಾಸೋಹಿ ಹಾಗೂ ವಿಜಯಕುಮಾರ ಬಣಕಾರ ಅವರಿಗೆ ಸಾಧನಶ್ರೀ ಪುರಸ್ಕಾರ ನೀಡಿ ಗೌರವಿಸಲಾಯಿತು. ಚನ್ನಬಸಪ್ಪ ಧಾರವಾಡಶಟ್ರು, ಡಾ.ಬಿ.ಜಿ. ಜವಳಿ, ವಂದನಾ ರಮೇಶ ಉಪಸ್ಥಿತರಿದ್ದರು.
ಹುಬ್ಬಳ್ಳಿ ಕೇಂದ್ರ ಸಮಿತಿ ಸಂಚಾಲಕ ಕೃಷ್ಣಮೂರ್ತಿ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಚುಸಾಪ ಜಿಲ್ಲಾಧ್ಯಕ್ಷೆ ಶೋಭಾ ಮೇಟಿ ಸ್ವಾಗತಿಸಿದರು. ಕಾಶೀನಾಥ ಬಿಳಿಮಗ್ಗದ, ಸಿ.ಕೆ. ಗಣಪ್ಪನವರ ನಿರೂಪಿಸಿದರು. ಕೊಟ್ರೇಶ ಜವಳಿ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net