nature ಮನುಷ್ಯ ನಿಸರ್ಗಕ್ಕೆ ಹೊಂದಿಕೊಂಡು ಬದುಕಲಿ

ಮುಂಡರಗಿ ತಾಲೂಕಿನ ಪೇಠಾಲೂರ ಗ್ರಾಮದ ಶ್ರೀ ಹಾಲೇಶ್ವರ ಕೃಪಾ ಪೋಷಿತ ಶಿವಯೋಗಾಶ್ರಮದ ಜಾತ್ರಾ ಮಹೋತ್ಸವ ನಿಮಿತ್ತ ಗುರುವಾರ ಆಯೋಜಿಸಿದ್ದ ಧರ್ಮಸಭೆಯಲ್ಲಿ Council ಕೊಪ್ಪಳದ ಶ್ರೀ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿದರು
ಮುಂಡರಗಿ ತಾಲೂಕಿನ ಪೇಠಾಲೂರ ಗ್ರಾಮದ ಶ್ರೀ ಹಾಲೇಶ್ವರ ಕೃಪಾ ಪೋಷಿತ ಶಿವಯೋಗಾಶ್ರಮದ ಜಾತ್ರಾ ಮಹೋತ್ಸವ ನಿಮಿತ್ತ ಗುರುವಾರ ಆಯೋಜಿಸಿದ್ದ ಧರ್ಮಸಭೆಯಲ್ಲಿ Council ಕೊಪ್ಪಳದ ಶ್ರೀ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿದರು
Published on
ಮುಂಡರಗಿ: ಜೀವನದಲ್ಲಿ ನಮ್ಮ ಇಚ್ಛೆಯಂತೆ ನಡೆಯುದಿಲ್ಲ. ನಿಸರ್ಗಕ್ಕೆ ನಾವು ಹೊಂದಿಕೊಂಡು ಬದುಕಬೇಕು. ಜೀವನದಲ್ಲಿ ಬಯಸಿದ್ದು ಸಿಗಬೇಕು ಅಂದುಕೊಳ್ಳುತ್ತಾರೆ. ಆದರೆ, ನಿಸರ್ಗವು nature ತೋಚಿದಂತೆ ಅದನ್ನು ಸ್ವೀಕಾರ ಮಾಡಿಕೊಂಡು ಮುನ್ನಡೆಯಬೇಕು ಎಂದು ಕೊಪ್ಪಳದ ಶ್ರೀ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಹೇಳಿದರು.
ತಾಲೂಕಿನ ಪೇಠಾಲೂರ ಗ್ರಾಮದ ಆರಾಧ್ಯ ದೇವ ಶ್ರೀ ಹಾಲೇಶ್ವರ ಕೃಪಾ ಪೋಷಿತ ಶಿವಯೋಗಾಶ್ರಮದ 48ನೇ ಜಾತ್ರಾ ಮಹೋತ್ಸವದ ನಿಮಿತ್ತ ಗುರುವಾರ ಆಯೋಜಿಸಿದ್ದ ಧರ್ಮಸಭೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಮನುಷ್ಯ ಜೀವನದಲ್ಲಿ ಉತ್ಸಾಹದಿಂದ ಬದುಕುವುದನ್ನು ಮರೆತಿದ್ದಾನೆ. ಹೀಗಾಗಿ ದುಃಖ ಆವರಿಸುತ್ತದೆ. ಮನುಷ್ಯನ ಮನಸಿನೊಳಗೆ ವೈರತ್ವ ಇದೆ. ಆದರೆ, ನಿಸರ್ಗದೊಳಗೆ ಎಲ್ಲಿ ಕೂಡ ವೈರತ್ವ ಇಲ್ಲ.
ನಾವೆಲ್ಲ ಬಯಸಿದಂಗೆ ಅಪೇಕ್ಷೆ ಪಡುತ್ತೇವೆ. ಇದೇ ದುಃಖಕ್ಕೆ ಕಾರಣವಾಗಿದೆ. ಯುವಕನಿಗೆ ಆತನ ತಂದೆ-ತಾಯಿಯ ಪ್ರೀತಿಯ ಜೊತೆಗೆ ಸುಂದರ ಬದುಕಿಗೆ ಬೈದು ತಿಳಿವಳಿಕೆ ಹೇಳುವುದು ಮುಖ್ಯ. ಅಂದಾಗ ಮಾತ್ರ ಯುವಕನ ಜೀವನ ಪರಿಪೂರ್ಣವಾಗಲಿದೆ ಎಂದರು.
ಜೀವನದಲ್ಲಿ ಮತ್ತೊಬ್ಬರ ನೋಡಿ ಅವರಂತೆ ನಾವು ಇರಬೇಕು ಅನ್ನಬಾರದು. ಮನುಷ್ಯ ಸಂತೋಷವಾಗಿ ಇರಬೇಕೆಂದರೆ ಮತ್ತೊಬ್ಬರ ತುತ್ತಿಗೆ ಕೈಹಾಕುವ ಆಸೆ ಬಿಡಬೇಕು. ದೇವರು ಏನು ನೀಡಿದ್ದಾನೋ ಅದನ್ನು ಸ್ವೀಕರಿಸಿ ಬಾಳಬೇಕು ಎಂದರು.
ನೆಗಳೂರಿನ ಶ್ರೀ ಗುರುಶಾಂತೇಶ್ವರ ಸ್ವಾಮೀಜಿ ಮಾತನಾಡಿ, ಶ್ರೀ ಹಾಲೇಶ್ವರ ಜಾತ್ರೆ ಪ್ರಸಾದ ಮಾಡಿ ಹೋಗುವ ಜಾತ್ರೆಯಾಗದೆ ದೇವರ ಮುಂದೆ ಮತ್ತು ಗುರುವಿನ ಮುಂದೆ ಜೀವನ ಖಾತ್ರಿ ಮಾಡಿಕೊಂಡು ಹೋಗುವುದು ಆಗಬೇಕು.
ತಂದೆ-ತಾಯಿ ಮಕ್ಕಳಲ್ಲಿ ಸಂಸ್ಕಾರದ ಜೀವನ ನೀಡಬೇಕಾದರೆ ಜಾತ್ರೆ, ಧರ್ಮಸಭೆಗಳಲ್ಲಿ ಧರ್ಮ ಗುರುಗಳು ನೀಡುವ ಧಾರ್ಮಿಕ ಆಚಾರ ವಿಚಾರಗಳನ್ನು ಮಕ್ಕಳಲ್ಲಿ ಮೂಡಿಸಬೇಕು ಎಂದರು.
ಪೇಠಾಲೂರಿನ ಶ್ರೀ ಹಾಲೇಶ್ವರ ಶರಣರು ಮಾತನಾಡಿ, ಮಣ್ಣು, ನೀರು, ಗಾಳಿಯಷ್ಟೇ ಗುರುವಿನ ಆಶೀರ್ವಾದ ಮುಖ್ಯ. ದಾನ-ಧರ್ಮದ ಮನಸ್ಥಿತಿಯುಳ್ಳ ಕೆಲವು ಜನರಿಂದ ಮಾತ್ರ ಧರ್ಮದ ಉಳಿವು ನಿಂತಿದೆ ಎಂದರು.
ಕಾರ್ಯಕ್ರಮದಲ್ಲಿ ಜಾತ್ರಾ ಸಮಿತಿಯ ಅಧ್ಯಕ್ಷ ಮಲ್ಲಯ್ಯ ಹಿರೇಮಠ, ಜನಪದ ಕಲಾವಿದ ಗವಿಸಿದ್ದಯ್ಯ ಹಳ್ಳಿಕೇರಿಮಠ, ಹಾಲಪ್ಪ ಕಬ್ಬೆರಳ್ಳಿ, ಹಾಲೇಶ ಸೂಡಿ, ಹಾಲಪ್ಪ ಹರ್ತಿ, ರವಿ ಸಂಶಿ, ಜಾತ್ರಾ ಸಮಿತಿ ಪದಾಧಿಕಾರಿಗಳು, ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net