ಘಟನೆಯ ವಿವರ: ಅ. 29ರಂದು ನಡೆದಿದ್ದ ಕಳ್ಳತನ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ತನಿಖೆ ಕೈಗೊಂಡು ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ ದ್ಯಾಮಣ್ಣ ಗಂಗಪ್ಪ ಕಂಬಳಿ ಎಂಬಾತನನ್ನು ಬಂಧಿಸಿ ಆತನಿಂದ ಚಿನ್ನಾಭರಣಗಳನ್ನು ಜಪ್ತಿ ಮಾಡಿದ್ದಾರೆ. ಪ್ರಕರಣ ಭೇದಿಸುವಲ್ಲಿ ಎಸ್ಪಿ ರೋಹನ್ ಜಗದೀಶ, ಡಿಎಸ್ಪಿ ಮುರ್ತುಜಾ ಖಾದ್ರಿ ಅವರ ಮಾರ್ಗದರ್ಶನದಲ್ಲಿ ಸಿಪಿಐ ಬಿ.ವಿ. ನ್ಯಾಮಗೌಡ ನೇತೃತ್ವದಲ್ಲಿ ಪಿಎಸ್‌ಐ ನಾಗರಾಜ ಗಡಾದ, ಟಿ.ಕೆ. ರಾಠೋಡ ಹಾಗೂ ಸಿಬ್ಬಂದಿ ಎಂ.ಎ. ಶೇಖ್, ಆರ್.ಎಸ್. ಯರಗಟ್ಟಿ, ಎಂ.ಎಸ್. ಬಳ್ಳಾರಿ, ಎ.ಆರ್. ಕಮ್ಮಾರ, ಎಚ್.ಬಿ. ಗುಡ್ಡಣ್ಣವರ, ಸಿ.ಎಸ್. ಮಠಪತಿ, ಡಿ.ಎಸ್. ನಧಾಫ್, ಪಾಂಡುರಂಗ ರಾವ್, ಎಚ್.ಐ. ಕಲ್ಲನ್ನವರ್, ಎಂ.ಆರ್. ಧಾರವಾಡ, ಎಂ.ಎಸ್. ಅಂಗಡಿ, ಎನ್.ಎಚ್. ಮಠಪತಿ, ಗುರು ಬೂದಿಹಾಳ, ಸಂಜೀವ ಕೊರಡೂರ, ಅಪ್ಪಣ್ಣ ರಾಠೋಡ ಒಳಗೊಂಡ ತಂಡ ರಚಿಸಲಾಗಿತ್ತು. ಪ್ರಕರಣ ಭೇದಿಸಿದ ತಂಡವನ್ನು ಎಸ್ಪಿ ರೋಹನ್ ಜಗದೀಶ, ಡಿಎಸ್ಪಿ ಮುರ್ತುಜಾ ಖಾದ್ರಿ ಅಭಿನಂದಿಸಿದ್ದಾರೆ.