kidnap ಹಿಂದು ಬಾಲಕನ ಅಪಹರಣ ‘ಮತಾಂತರ ಯತ್ನ ಆರೋಪ’

ಲಕ್ಷ್ಮೇಶ್ವರದ ಹಿಂದು ಬಾಲಕನನ್ನು ಮತಾಂತರಗೊಳಿಸುವ ಉದ್ದೇಶದಿಂದ ಅಪಹರಣ ಮಾಡಿದ ವ್ಯಕ್ತಿಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಶ್ರೀರಾಮ ಸೇನೆ ಕಾರ್ಯಕರ್ತರು ತಹಸೀಲ್ದಾರ್ ಧನಂಜಯ ಎಂ. ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.
ಲಕ್ಷ್ಮೇಶ್ವರದ ಹಿಂದು ಬಾಲಕನನ್ನು ಮತಾಂತರಗೊಳಿಸುವ ಉದ್ದೇಶದಿಂದ ಅಪಹರಣ ಮಾಡಿದ ವ್ಯಕ್ತಿಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಶ್ರೀರಾಮ ಸೇನೆ ಕಾರ್ಯಕರ್ತರು ತಹಸೀಲ್ದಾರ್ ಧನಂಜಯ ಎಂ. ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.
Published on
ಲಕ್ಷ್ಮೇಶ್ವರ: ಪಟ್ಟಣದ ಅಲ್ಪವಯಿ ಹಿಂದು ಬಾಲಕನನ್ನು (boy) ಮತಾಂತರಗೊಳಿಸುವ ಉದ್ದೇಶದಿಂದ ಅಪಹರಿಸಿ ಜೀತಕ್ಕೆ ಇಟ್ಟುಕೊಂಡ ಮುಸ್ಲಿಂ ಸಮಾಜದ ಯುವಕನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಶ್ರೀರಾಮ ಸೇನೆ ಕಾರ್ಯಕರ್ತರು ತಹಸೀಲ್ದಾರ್ ಧನಂಜಯ ಎಂ. ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು. 
ಶ್ರೀರಾಮ ಸೇನೆ ತಾಲೂಕಾಧ್ಯಕ್ಷ ಈರಣ್ಣ ಪೂಜಾರ ಮಾತನಾಡಿ, ಜಿಲ್ಲಾದ್ಯಂತ ಮುಗ್ಧ ಹಿಂದುಗಳನ್ನು ಬಲವಂತದಿಂದ ಮುಸ್ಲಿಮರು, ಕ್ರಿಶ್ಚಿಯನ್ನರು ಪುಸಲಾಯಿಸಿ ಮತಾಂತರಗೊಳಿಸುವ ಜಾಲ ಅತ್ಯಂತ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ಆದರೆ, ಇದಕ್ಕೆ ಕಡಿವಾಣ ಹಾಕುವ ಕಾರ್ಯಗಳು ನಡೆಯುತ್ತಿಲ್ಲ ಎಂದರು.
ಹಿಂದೆ ಹಿಂದು ಯುವತಿಯರನ್ನು ಪ್ರೀತಿಯ ಬಲೆಗೆ ಬೀಳಿಸಿ ಮದುವೆಯಾಗಿ ಮತಾಂತರ ಮಾಡಿರುವ ಘಟನೆಗಳು ನಡೆದಿವೆ. ಇದೀಗ ಪಟ್ಟಣದ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ಅಪ್ರಾಪ್ತ ಗವಿಸಿದ್ದಪ್ಪ ಶರಣಪ್ಪ ಗಣದಿನ್ನಿ (17) ಬಾಲಕನನ್ನು ಪಟ್ಟಣದ ಸುಹೇಲ್ ಅಬ್ದುಲ್ ಅಜೀ ರಿತ್ತಿ ಎಂಬ ಮುಸ್ಲಿಂ ಯುವಕ ಅಪಹರಿಸಿ ತನ್ನ ಚಹಾ ಅಂಗಡಿಯಲ್ಲಿ ಕೆಲಸಕ್ಕಿರಿಸಿಕೊಂಡು ಕಳೆದ 45 ದಿನಗಳಿಂದ ಈ ಬಾಲಕನನ್ನು ಅಪಹರಿಸಿ ಹುಬ್ಬಳ್ಳಿಯಲ್ಲಿ ಒತ್ತಾಯದಿಂದ ಹೋಟೆಲ್ ಒಂದರಲ್ಲಿ ಜೀತಕ್ಕಿಟ್ಟಿರುವದು ಬೆಳಕಿಗೆ ಬಂದಿದೆ ಎಂದರು.
ಗವಿಸಿದ್ದಪ್ಪ ನಾಪತ್ತೆಯಾಗಿರುವ ಕುರಿತು ಆತನ ಪಾಲಕರು ಸುಹೇಲ್ ರಿತ್ತಿ ಬಳಿ ವಿಚಾರಿಸಿದಾಗ ಸುಹೇಲ್ ಹಾರಿಕೆ ಉತ್ತರ ನೀಡಿದ್ದಾನೆ. ಅಲ್ಲದೆ, ‘ದೇಶದಾಗ ಚಹಾ ಮಾರಿದವನೇ ದೇಶದ ಪ್ರಧಾನಿಯಾಗಿದ್ದಾನೆ. ನಿಮ್ಮ ಮಗನೂ ದೇಶದ ಪ್ರಧಾನಿಯಾಗಲು ಹೋಗಿರಬಹುದು’ ಎಂದು ಉಡಾಫೆ ಉತ್ತರ ನೀಡಿದ್ದಾನೆ. ಈ ಕೃತ್ಯವೆಸಗಿದ ಸುಹೇಲ್ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿ ಕಠಿಣ ಶಿಕ್ಷೆ ನೀಡಬೇಕು ಎಂದು ಮನವಿ ಮಾಡಿರುವುದಾಗಿ ಹೇಳಿದರು.
ತಹಸೀಲ್ದಾರ್ ಧನಂಜಯ ಎಂ., ಮನವಿ ಸ್ವೀಕರಿಸಿ, ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಶ್ರೀರಾಮ ಸೇನೆ ಕಾರ್ಯಕರ್ತರಾದ ಬಾಲಕನ ತಂದೆ ಶರಣಪ್ಪ ಗಣದಿನ್ನಿ, ತಾಯಿ ರೂಪಾ ಗಣದಿನ್ನಿ, ಗಂಗಾಧರ ಮೆಣಸಿನಕಾಯಿ, ಮಂಜುನಾಥ ಹೊಗೆಸೊಪ್ಪಿನ, ವಿಜಯ ಕುಂಬಾರ, ಪ್ರವೀಣ ಬೋಮಲೆ, ಹರೀಶ ಗೋಸಾವಿ, ಬಸವರಾಜ ಕಲ್ಲೂರ, ಕುಮಾರ ಕಣವಿ, ಆದೇಶ ಸವಣೂರ, ಪ್ರಾಣೇಶ ವ್ಯಾಪಾರಿ, ಸೋಮು ಗೌರಿ, ವಿನಾಯಕ ಸಪ್ಲಡ್ಲ್, ಕಿರಣ ಮಹಾಂತಶೆಟ್ಟರ, ವಿಶಾಲ ಬಟಗುರ್ಕಿ, ಯಶವಂತ ಬಳ್ಳಾರಿ, ಸಂತೋಷ ಬೋಮಲೆ ಮೊದಲಾದವರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net