ಲಕ್ಷ್ಮೇಶ್ವರದಲ್ಲಿ ಮಳೆ, ಗಾಳಿ ಅಬ್ಬರಕ್ಕೆ ಜನಜೀವನ ತತ್ತರ RAIN DAMAGE

ಲಕ್ಷ್ಮೇಶ್ವರದ ಇಟ್ಟಿಗೆಕೆರೆ ಅಭಿವೃದ್ದಿಗಾಗಿ ಹಾಕಿದ್ದ ಬಂಡು ಮಳೆಯ ಹೊಡೆತಕ್ಕೆ ಬಿರುಕು ಬಿಟ್ಟಿರುವುದು.
ಲಕ್ಷ್ಮೇಶ್ವರದ ಇಟ್ಟಿಗೆಕೆರೆ ಅಭಿವೃದ್ದಿಗಾಗಿ ಹಾಕಿದ್ದ ಬಂಡು ಮಳೆಯ ಹೊಡೆತಕ್ಕೆ ಬಿರುಕು ಬಿಟ್ಟಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ತ್ಯಾಜ್ಯ ತುಂಬಿದ ಗಟಾರ
  • ಮನೆ ಮೇಲೆ ಬಿದ್ದ ಮರ
  • ರಸ್ತೆಯಲ್ಲಿ ಹರಿದ ಕೊಳಚೆ ನೀರು

ಲಕ್ಷ್ಮೇಶ್ವರ:ಪಟ್ಟಣದಲ್ಲಿಗುರುವಾರ ರಾತ್ರಿಯೂ ಜೋರಾದಗಾಳಿಯೊಂದಿಗೆ ಸುರಿದ ಮಳೆಯಅಬ್ಬರಕ್ಕೆ ಜನಜೀವನ ಅಸ್ತವ್ಯಸ್ತಗೊಂಡಿದೆ.ಮುಂಗಾರಿನಮೊದಲ ಮಳೆಗೆ ತ್ಯಾಜ್ಯದಿಂದತುಂಬಿಕೊಂಡಿದ್ದ ಚರಂಡಿಗಳ ಕೊಳಚೆನೀರು ರಸ್ತೆ ಮೇಲೆ ಹರಿಯಿತು.ಅಲ್ಲಲ್ಲಿವಿದ್ಯುತ್ ಕಂಬಗಳು,ಮರ,ಗಿಡಗಳುಮಳೆ, ಗಾಳಿಯಅಬ್ಬರಕ್ಕೆ ನೆಲಕಚ್ಚಿದ್ದವು.ವಿದ್ಯುತ್ಸಂಪರ್ಕ,ಕೆಲವೆಡೆರಸ್ತೆ ಸಂಪರ್ಕ ಕಡಿತಗೊಂಡು ಜನರುರಾತ್ರಿಯಿಡಿ ಪರದಾಡಿದರು.ಸಮಸ್ಯೆಸರಿದೂಗಿಸಲು ಹೆಸ್ಕಾಂ ಮತ್ತುಪುರಸಭೆ ಸಿಬ್ಬಂದಿ,ಪೊಲೀಸರುನಿರಂತರವಾಗಿ ಶ್ರಮಿಸಿದರು.ಇವರಕಾರ್ಯಕ್ಕೆ ಸಾರ್ವಜನಿಕರುಮೆಚ್ಚುಗೆ ವ್ಯಕ್ತಪಡಿಸಿದರು.

ಪಟ್ಟಣದಶಿಗ್ಲಿ ಕ್ರಾಸ್,ಗ್ರಂಥಾಲಯದಬಳಿ ಅಪಾರ ಪ್ರಮಾಣದಲ್ಲಿ ನೀರುಹರಿದು ಬಂದು ರಸ್ತೆಗಳಲ್ಲಿ ಕೊಳಚೆನೀರು ಸಮೇತ ನೀರು ತುಂಬಿಕೊಂಡಿತ್ತು.ಬಹುತೇಕರಸ್ತೆಗಳಲ್ಲಿ ತಗ್ಗು-ಗುಂಡಿಗಳುತುಂಬಿಕೊಂಡಿದ್ದರಿಂದ ರಸ್ತೆಯಲ್ಲಿಬರುವ ಸವಾರರು ಸಮಸ್ಯೆ ಎದುರಿಸುವಂತಾಯಿತು.ಅಂಬೇಡ್ಕರ್ನಗರ,ಮುಕ್ತಿನಗರ,ಬಸವೇಶ್ವರನಗರ ಸೇರಿ ಕೆಲ ತಗ್ಗು ಪ್ರದೇಶಗಳಲ್ಲಿನಮನೆಗಳಿಗೆ ನೀರು ನುಗ್ಗಿ ಜನರುಪರದಾಡಿದರು.

ಪಟ್ಟಣದಸವಣೂರ ರಸ್ತೆಯ ಹೂವಮ್ಮ ಮಲ್ಲಪ್ಪಗದ್ದಿ ಅವರ ಮನೆಯ ಮೇಲೆ ಬೃಹತ್ಮರ ಬಿದ್ದಿದೆ.ಅದೃಷ್ಟವಶಾತ್ವೃದ್ಧೆ ಮತ್ತು ಮಕ್ಕಳು ಪ್ರಾಣಾಪಾಯದಿಂದಪಾರಾಗಿದ್ದಾರೆ.

ಇಟ್ಟಿಗೆರೆಅಂಚಿನ ಪ್ರದೇಶದ ನಿವಾಸಿಗರುಮಳೆಗಾಲದಲ್ಲಿ ಅನುಭವಿಸುತ್ತಿರುವಹಿನ್ನೀರಿನ ಸಮಸ್ಯೆ ಪರಿಹಾರಕ್ಕಾಗಿಪುರಸಭೆಯ ಕೆರೆ ಅಭಿವೃದ್ದಿಯನಿಧಿ 56ಲಕ್ಷರೂ. ವೆಚ್ಚದಲ್ಲಿಕೈಗೊಂಡಿರುವ ಅಭಿವೃದ್ದಿ ಕಾಮಗಾರಿಗಳುಮೊದಲ ಮಳೆಯ ಹೊಡೆತಕ್ಕೆ ಕಿತ್ತುಹೋಗಿವೆ.ನೀರುಕೆರೆಗೆ ಹರಿದು ಹೋಗಲು ಗುತ್ತಿಗೆದಾರರುರಾತ್ರಿಯಿಡಿ ಹರಸಾಹಸ ಪಟ್ಟರು.ಆದರೂಈ ಭಾಗದ ಜನರು ಸಮಸ್ಯೆಯಿಂದಹೊರಬಾರದಂತಾಗಿದೆ.ಹಾಕಿದ್ದಬಂಡು ಒಡೆದರೂ ಉಪಯೋಗವಾಗಲಿಲ್ಲ.ಕೆರೆಗೆಕೊಳಚೆ,ಚರಂಡಿನೀರು ಹರಿದು ಬರುವುದು ತಪ್ಪದಂತಾಗಿದೆ.ಅವೈಜ್ಞಾನಿಕ,ಕಳಪೆಕಾಮಗಾರಿಯಿಂದ ಪುರಸಭೆಯ ಲಕ್ಷಾಂತರರೂ. ಪೋಲಾಗಿದೆಮತ್ತು ಇದರಿಂದ ಜನರ ಸಮಸ್ಯೆಯೂಪರಿಹಾರವಾಗಿಲ್ಲ.ಕಾರಣಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕುಎಂದು ಕರವೇ ಸ್ವಾಭಿಮಾನಿ ಸೇನೆಜಿಲ್ಲಾಧ್ಯಕ್ಷ ಶರಣು ಗೋಡಿ,ಮತ್ತಿತರರುಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net