ಮದುವೆ, ಗೃಹ ಪ್ರವೇಶ, ಸೀಮಂತ ಸೇರಿ ಇತರೇ ವಿಶೇಷ ಕಾರ್ಯಕ್ರಮ, ಬೀಗರೂಟಕ್ಕೆ ಮಾವಿನ ಹಣ್ಣಿನ ಸೀಕರಣೆ ಮಾಡಲಾಗುತ್ತದೆ. ಆದರೆ, ಶೂನ್ಯ/ಅಧಿಕ ಮಾಸ ಪ್ರಾರಂಭವಾಗಿದ್ದರಿಂದ ಯಾವುದೇ ಶುಭ ಸಮಾರಂಭ, ಜಾತ್ರೆ, ಹಬ್ಬ, ಧಾರ್ಮಿಕ ಕಾರ್ಯಕ್ರಮಗಳೂ ಅಷ್ಟಕ್ಕಷ್ಟೇ. ಹೀಗಾಗಿ, ಹಣ್ಣಿಗೆ ಬೇಡಿಕೆ ಕಡಿಮೆಯಾಗಿದೆ. ಮಾವಿನ ಹಣ್ಣಿನ ಸೀಜನ್ ಪ್ರಾರಂಭಕ್ಕೆ ಮೊದಲೇ ಬೆಳೆಗಾರರು ಮತ್ತು ಹೋಲ್‌ಸೇಲ್ ವ್ಯಾಪಾರಸ್ಥರೊಂದಿಗೆ ಒಡಂಬಡಿಕೆ ಮಾಡಿಕೊಂಡು ಬಂಡವಾಳ ಹಾಕಿರುತ್ತೇವೆ. ಬೇಡಿಕೆ ಇಲ್ಲದ್ದರಿಂದ ನೈಸರ್ಗಿಕವಾಗಿಯೇ ಹಣ್ಣುಗಳನ್ನು ಮಾಗಿಸಲಾಗುತ್ತಿದೆ. ಸುಗ್ಗಿ ಮುಗಿಯುವುದರೊಳಗೆ ಹಾಕಿದ ಬಂಡವಾಳ ಸಿಕ್ಕರೆ ಸಾಕು ಎನ್ನುತ್ತಾರೆ ಮಾವಿನ ವ್ಯಾಪಾರಸ್ಥ ಮಲೀಕ ಮುಂಡರಗಿ.