

ಪ್ರಮುಖ ಮುಖ್ಯಾಂಶಗಳು
ಲಕ್ಷ್ಮೇಶ್ವರ:ಜೀವನದಭವಸಾಗರ ದಾಟಿಸುವವನೇ ಗುರು.ಉಸಿರುಇರುವವರೆಗೆ ಗುರುವಿನ ಸ್ಮರಣೆಮಾಡಬೇಕು.ದೇವರು,ಹೆತ್ತವರುಹಾಗೂ ಗುರುವನ್ನು ಸದಾ ನೆನೆಯಬೇಕುಎಂದು ಮುಕ್ತಿಮಂದಿರದ ಶ್ರೀವಿಮಲರೇಣುಕ ವೀರಮುಕ್ತಿಮುನಿಶಿವಾಚಾರ್ಯರು ಹೇಳಿದರು.
ಭಾನುವಾರಶ್ರೀ ಬಾಳೇಹಳ್ಳಿಮಠ ಕಲ್ಯಾಣಮಂಟಪದಲ್ಲಿ ಹಮ್ಮಿಕೊಂಡಿದ್ದಗುರುವಂದನೆ,ಸಾಧಕರಿಕೆಸನ್ಮಾನ,ಪ್ರತಿಭಾಪುರಸ್ಕಾರ,ಶೈಕ್ಷಣಿಕಕಾರ್ಯಚಟುವಟಿಕೆ ಮತ್ತು ಚಿತ್ರಕಲಾಪ್ರದರ್ಶನ ಹಾಗೂ ಶಿಕ್ಷಣಾಧಿಕಾರಿಜಿ.ಎಂ.ಮುಂದಿನಮನಿಅವರ ನಿವೃತ್ತಿ ಕಾರ್ಯಕ್ರಮದಸಾನ್ನಿಧ್ಯ ವಹಿಸಿ ಅವರು ಆಶೀರ್ವಚನನೀಡಿದರು.
ಸುಖದುಃಖ,ಸಂಕಷ್ಟಗಳನಡುವೆಯೂ ಗುರುನಾಮ ಸ್ಮರಣೆಜೀವನಕ್ಕೆ ಸರಿದಾರಿ ತೋರಿಸಿಆತ್ಮಬಲ ನೀಡುತ್ತದೆ.ತಂದೆ-ತಾಯಿನಮಗೆ ಜನ್ಮ ನೀಡಿದರೆ,ಗುರುಬದುಕಿಗೆ ದಿಕ್ಕು,ಗುರಿಮತ್ತು ಅರ್ಥ ಕಲ್ಪಿಸಿ ಬದುಕನ್ನುರೂಪಿಸುತ್ತಾರೆ.ಅವರಆದರ್ಶಗಳನ್ನು ಜೀವನದಲ್ಲಿಅಳವಡಿಸಿಕೊಂಡು ಸಮಾಜಮುಖಿಕಾರ್ಯಗಳಲ್ಲಿ ತೊಡಗಬೇಕು ಎಂದುತಿಳಿಸಿದರು.
ಜನನಅನಿಶ್ಚಿತ,ಸಾವುನಿಶ್ಚಿತ.ಆದರೆ,ಈಎರಡರ ನಡುವೆ ನಾವು ಸಮಾಜಕ್ಕೆಸಲ್ಲಿಸುವ ನಿಸ್ವಾರ್ಥ ಸೇವೆ,ಮಾನವೀಯಮೌಲ್ಯಗಳು ಮತ್ತು ಶಿಕ್ಷಣದ ಮೂಲಕಮೂಡಿಸುವ ಸಂಸ್ಕಾರಗಳು ಮಾತ್ರಶಾಶ್ವತವಾಗಿ ಉಳಿಯುತ್ತವೆ.ಮನುಷ್ಯಜನ್ಮವನ್ನು ಪರೋಪಕಾರ,ಸಮಾಜಸೇವೆಹಾಗೂ ಧರ್ಮಮಾರ್ಗಕ್ಕೆ ಮೀಸಲಿಟ್ಟುಬದುಕಿದಾಗಲೇ ಬದುಕಿಗೆ ನಿಜವಾದಅರ್ಥ ಮತ್ತು ಯಶಸ್ಸು ದೊರೆಯುತ್ತದೆ. ಎಂದುತಿಳಿಸಿದರು.
ಟಿಬೆಟಿಯನ್ಕ್ಯಾಂಪ್‌ನ ಜಂಪಾ ಲೋಬ್ಸಂಗ್ಗುರೂಜಿ ಮಾತನಾಡಿ,ಶಿಕ್ಷಣದಮೂಲಕ ಸಮಾಜ ಕಟ್ಟುವ ಕಾರ್ಯದಲ್ಲಿತೊಡಗಿದವರ ಕೊಡುಗೆ ಸದಾಸ್ಮರಣೀಯವಾಗಿರುತ್ತದೆ.ಅವರಬದುಕು ಶಿಕ್ಷಕನು ಎಂದಿಗೂನಿವೃತ್ತನಾಗುವುದಿಲ್ಲ.ಜಿ.ಎಂ.ಮುಂದಿನಮನಿಅವರು ಗುಣಮಟ್ಟದ ಶಿಕ್ಷಣದವಿಸ್ತರಣೆ,ವಿದ್ಯಾರ್ಥಿಗಳವ್ಯಕ್ತಿತ್ವ ವಿಕಸನ ಮತ್ತುಶಿಕ್ಷಣದ ಮೂಲಕ ಸಮಾಜ ಪರಿವರ್ತನೆಗೆಅಪಾರ ಕೊಡುಗೆ ನೀಡಿದ್ದಾರೆ ಎಂದುತಿಳಿಸಿದರು.
ಮಾಜಿಶಾಸಕರಾದ ಜಿ.ಎಸ್.ಗಡ್ಡದೇವರಮಠ,ರಾಮಕೃಷ್ಣದೊಡ್ಡಮನಿ ಮಾತನಾಡಿ,ಉತ್ತಮನಾಗರಿಕರನ್ನು ರೂಪಿಸುವ ದೇವಾಲಯಎಂಬ ಧ್ಯೇಯದೊಂದಿಗೆ ಮುಂದಿನಮನಿಅವರು ಸೇವೆ ಸಲ್ಲಿಸಿದ್ದಾರೆ.ಅವರಶ್ರಮ,ನಿಷ್ಠೆ,ಪ್ರಾಮಾಣಿಕತೆಮತ್ತು ವಿದ್ಯಾರ್ಥಿಗಳ ಮೇಲಿನಕಾಳಜಿ ಅಸಂಖ್ಯಾತ ವಿದ್ಯಾರ್ಥಿಗಳಭವಿಷ್ಯವನ್ನು ಉಜ್ವಲಗೊಳಿಸಿದೆಎಂದರು.
ಸಣ್ಣೀರಪ್ಪಹಳೆಪ್ಪನವರ ಮಾತನಾಡಿದರು.ಅಧ್ಯಕ್ಷತೆಯನ್ನುಎನ್.ಎಸ್.ಪಟ್ಟಣಶೆಟ್ಟಿವಹಿಸಿದ್ದರು.ಬೆಂಗಳೂರಿನಬಿಎಸ್‌ಎಸ್ ಸಂಸ್ಥೆಯ ಡಾ.ಎಂ.ರಾಮಚಂದ್ರ,ಐ.ಬಿ.ಬೆನಕೊಪ್ಪ,ಸುಲೇಮಾನಕಣಕೆ,ಮಂಜುನಾಥಮಾಗಡಿ,ತಿಮ್ಮರಡ್ಡಿಮರಡ್ಡಿ,ಸೋಮಣ್ಣಡಾಣಗಲ್,ಪ್ರವೀಣಬಾಳಿಕಾಯಿ,ಮಹೇಂದ್ರಉಡಚಪ್ಪನವರ,ಅಬ್ದುಲ್ಸತ್ತೂರ,ಶರಣಪ್ರಕಾಶಪಾಟೀಲ,ಎಂ.ಕೆ.ಲಮಾಣಿ,ವಿ.ಎ.ಹುಡೇದ,ಜಿ.ಎನ್.ಉಪ್ಪಿನ,ಹರೀಶಲಕ್ಷ್ಮೇಶ್ವರ,ಬಸವರಾಜಹಿರೇಮನಿ,ಡಾ.ಸಂಗಮೇಶತಮ್ಮನಗೌಡ್ರ, ಬಿ.ಎಸ್.ಹರ್ಲಾಪೂರ,ವಿಜುಕಿರೇಸೂರ, ಎಂ.ಎನ್.ಭರಮಗೌಡ್ರಇತರರು ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿಕಲಿಸಿದ ಗುರುಗಳಿಗೆ ಗುರುವಂದನೆಗೌರವ ಸಲ್ಲಿಸಲಾಯಿತು.ಪುಸ್ತಕಬಿಡುಗಡೆ ಮಾಡಲಾಯಿತು.ಪುಟಾಣಿಪ್ರತಿಭೆಗಳಾದ ಪ್ರೀತಂ ಕಬ್ಬೇರಹಳ್ಳಿ,ಜ್ಞಾನಾಗುರುರಾಜ,ಫಕೀರಪ್ಪದೊಡ್ಡಮನಿ,ಡಾ.ಎಚ್.ಸಿ.ದಿವುಶಂಕರಅವರಿಂದ ಸಾಂಸ್ಕೃತಿಕ ಕಾರ್ಯಕ್ರಮನೆರವೇರಿಸಲಾಯಿತು.ನಿವೃತ್ತಬಿಇಒ ಜಿ.ಎಂ.ಮುಂದಿನಮನಿಅವರ ಅಭಿಮಾನಿ ಬಳಗ ಮತ್ತು ಶಿಕ್ಷಕಬಳಗದಿಂದ ಮುಂದಿನಮನಿ ದಂಪತಿಯನ್ನು ಸಾರೋಟದಲ್ಲಿ ಮೆರವಣಿಗೆ ಮಾಡಿಬಳಿಕ ಸನ್ಮಾನಿಸಿದರು.ಶಿಕ್ಷಕರಾದಈಶ್ವರ ಮೆಡ್ಲೇರಿ,ಪೂರ್ಣಾಜಿಖರಾಟೆ,ಜೆ.ಎಸ್.ರಾಮಶೆಟ್ಟರನಿರೂಪಿಸಿದರು.