

ಪ್ರಮುಖ ಮುಖ್ಯಾಂಶಗಳು
ಲಕ್ಷ್ಮೇಶ್ವರ:ಬರಗಾಲದನಡುವೆಯೂ ಹರಸಾಹಸಪಟ್ಟು ಉಳಿಸಿಕೊಂಡಿದ್ದಹೆಸರಿನ ಬೆಳೆ ಮೇಲೆ ಈಗ ವಿಪರೀತಕೀಟಬಾಧೆ ವಕ್ಕರಿಸಿದ್ದು,ಕೈಗೆಬಂದ ತುತ್ತು ಬಾಯಿಗೆ ಬರದಂತಾಗಿದೆ.ಅಸಮರ್ಪಕಮಳೆ,ಹವಾಮಾನವೈಪರೀತ್ಯ ಮತ್ತು ಮೋಡಕವಿದವಾತಾವರಣ,ಜಿನುಗುಮಳೆಯ ಪರಿಣಾಮ ಕೀಟಗಳ ಹಾವಳಿಮಿತಿಮೀರಿದೆ.ಫಲಭರಿತಹಾಗೂ ಕಟಾವು ಹಂತ ತಲುಪಿರುವ ಫಸಲುಸಂಪೂರ್ಣ ಹಾಳಾಗುತ್ತಿದೆ.
ತಾಲೂಕಿನರಾಮಗೇರಿ,ಯಳವತ್ತಿ,ಯತ್ನಳ್ಳಿ,ಶಿಗ್ಲಿ,ದೊಡ್ಡೂರ,ಸೂರಣಗಿ,ಬಾಲೆಹೊಸೂರ,ಅಕ್ಕಿಗುಂದ,ಬಡ್ನಿ,ಬಟ್ಟೂರ,ಹರದಗಟ್ಟಿ,ಅಡರಕಟ್ಟಿ,ಗೊಜನೂರಸೇರಿದಂತೆ ಒಟ್ಟು 5,100ಹೆಕ್ಟೇರ್ಪ್ರದೇಶದಲ್ಲಿ ಹೆಸರು ಬಿತ್ತನೆಯಾಗಿದೆ.ಕೀಟಗಳಹಾವಳಿ ಸಂಖ್ಯೆ ವಿಪರೀತವಾದಾಗಬೂಮ್ ಸ್ಪ್ರೇಯರ್ ಹಾಗೂ ಡ್ರೋನ್ಮೂಲಕ ಔಷಧ ಸಿಂಪಡಿಸಿದರೂಪ್ರಯೋಜನವಾಗಿಲ್ಲ.ಈಗಕಟಾವಿಗೆ ಕೆಲವೇ ವಾರಗಳು ಬಾಕಿಇರುವಾಗಲೇ ಬೆಳೆ ಹಾಳಾಗುತ್ತಿರುವುದುರೈತರಲ್ಲಿ ತೀವ್ರ ನಿರಾಸೆ ಮೂಡಿಸಿದೆ.
ಹಸಿರುಕೀಟ,ಕರಿಕೀಟ,ಕೊಂಬಿನಹುಳು,ಬೂದುರೋಗ ಹಾಗೂ ತಾಮ್ರರೋಗದ ಬಾಧೆಯಿಂದಹೆಸರು ಬೆಳೆಯ ಎಲೆ ಮಾತ್ರವಲ್ಲದೆಹೂಗೊಂಚಲು,ಹೀಚುಹಾಗೂ ಕಾಯಿಗಳನ್ನೂ ಕೀಟಗಳು ತಿಂದುಹಾಕುತ್ತಿವೆ.ಪರಿಣಾಮಬೆಳೆ ಬರಡಾಗುತ್ತಿದೆ.ಇಳುವರಿತೀವ್ರವಾಗಿ ಕುಸಿಯುವ ಭೀತಿಎದುರಾಗಿದೆ.
ಸಾಮಾನ್ಯವಾಗಿಎಕರೆಗೆ ಸರಾಸರಿ 5ಕ್ವಿಂಟಾಲ್ಇಳುವರಿ ನಿರೀಕ್ಷಿಸಲಾಗುತ್ತಿತ್ತು.ಆದರೆ,ಈಬಾರಿ ಹೆಚ್ಚೆಂದರೆ 2ಕ್ವಿಂಟಾಲ್ಪಡೆಯುವುದು ಕಷ್ಟ ಎನ್ನುವ ಸ್ಥಿತಿನಿರ್ಮಾಣವಾಗಿದೆ.ಮೊದಲೇಇಳುವರಿ ಕುಸಿದಿದೆ.ಆದರೆ,ಮಾರುಕಟ್ಟೆಯಲ್ಲಿಉತ್ತಮ ಬೆಲೆ ದೊರೆಯುತ್ತಿರುವುದರಿಂದಕನಿಷ್ಠ ಮಾಡಿದ ಖರ್ಚಾದರೂ ವಾಪಸ್ಬರಬಹುದು ಎಂಬ ನಿರೀಕ್ಷೆಯಲ್ಲಿದ್ದರೈತರಿಗೆ ಕೀಟಬಾಧೆ ದೊಡ್ಡ ಹೊಡೆತನೀಡಿದೆ.
ದುಬಾರಿಕ್ರಿಮಿನಾಶಕವೂ ಫಲ ನೀಡ್ತಿಲ್ಲ
ಉತ್ತಮ ಮಳೆಯ ನಿರೀಕ್ಷೆಯಿಂದ ದುಬಾರಿ ಬೀಜ ಖರೀದಿಸಿ, ಪ್ರತಿ ಎಕರೆಗೆ 30 ಸಾವಿರ ರೂ.ಗಿಂತ ಹೆಚ್ಚು ಖರ್ಚು ಮಾಡಿದ್ದೇವೆ. ಬರಗಾಲದ ನಡುವೆ ಉಳಿದ ಬೆಳೆಯೂ ಕೀಟಗಳಿಗೆ ಆಹಾರವಾಗಿದೆ. ಕೃಷಿ ಇಲಾಖೆ ಮೂಲಕ ಗುಣಮಟ್ಟದ ಕ್ರಿಮಿನಾಶಕ ಲಭ್ಯವಾಗಬೇಕು. ಬೆಳೆವಿಮೆ ಹಾಗೂ ಬೆಳೆಹಾನಿ ಪರಿಹಾರವನ್ನು ಶೀಘ್ರ ನೀಡಬೇಕು. ಮಾರುಕಟ್ಟೆ ಬೆಲೆ ಕುಸಿದರೆ ಬೆಂಬಲ ಬೆಲೆಯಡಿ ಖರೀದಿ ಆರಂಭಿಸಬೇಕು.
ರಾಜಕುಮಾರ ಕಿತ್ಲಿ, ದೇವಣ್ಣ ಬಳಿಗಾರ, ರಾಜು ಅಂದಲಗಿ, ಈರಣ್ಣ ಮಾಗಡಿರೈತರು
ಬಹುತೇಕ ಬೆಳೆ ಕಾಯಿ ಮಾಗುವ ಹಂತದಲ್ಲಿರುವುದರಿಂದ ನಿಯಂತ್ರಣ ಕಷ್ಟಸಾಧ್ಯ. ತಡವಾಗಿ ಬಿತ್ತನೆ ಮಾಡಿದ ಹೊಲಗಳಲ್ಲಿ ಹೂವು ಮತ್ತು ಹೀಚು ಇರುವ ಬೆಳೆಗೆ ಕ್ಲೋರಾಂಟ್ರನಿಲಿಪ್ರೋಲ್ ಹಾಗೂ ಲ್ಯಾಂಬ್ಡಾ ಸೈಲೋಥ್ರಿನ್ ಕೀಟನಾಶಕವನ್ನು ಶಿಫಾರಸು ಮಾಡಿದ ಪ್ರಮಾಣದಲ್ಲಿ ಸಿಂಪಡಿಸಬೇಕು. ಪ್ರತಿ ವರ್ಷ ಕಾಣಿಸಿಕೊಳ್ಳುವ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಂಶೋಧನೆ ನಡೆಯುತ್ತಿದೆ.
ಡಾ. ಸಿ.ಎಂ. ರಫಿ, ಕೀಟ ತಜ್ಞರು
ಕೀಟಬಾಧೆ ಹೆಚ್ಚುವ ಮೊದಲೇ ರೈತರು ಬೆಳೆಗಳನ್ನು ನಿರಂತರವಾಗಿ ಪರಿಶೀಲಿಸಿ ಅಗತ್ಯ ಔಷಧೋಪಚಾರ ಕೈಗೊಳ್ಳಬೇಕು. ಬೆಳೆ ದೃಢೀಕರಣ ಮಾಡಿಸಿಕೊಳ್ಳುವುದು ಕಡ್ಡಾಯ. ಬೆಳೆ ಸಮೀಕ್ಷೆ ಪ್ರಕ್ರಿಯೆ ನಡೆಯುತ್ತಿದ್ದು, ಬರಗಾಲ ಘೋಷಣೆ, ಬೆಳೆಹಾನಿ ಪರಿಹಾರ ಹಾಗೂ ಬೆಳೆವಿಮೆ ಕುರಿತು ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ.
ಚಂದ್ರಶೇಖರ ನರಸಮ್ಮನವರ, ಕೃಷಿ ಅಧಿಕಾರಿ