ಗುರುವಿನಿಂದಲೇ ಮಕ್ಕಳ ಬಾಳಿಗೆ ಬೆಳಕು gurupurnime

ಲಕ್ಷ್ಮೇಶ್ವರದ ಸ್ಕೂಲ್ ಚಂದನದಲ್ಲಿ ಏರ್ಪಡಿಸಿದ್ದ ಗುರುಪೂರ್ಣಿಮೆ ಕಾರ್ಯಕ್ರಮದಲ್ಲಿ ಶ್ರೀಕೃಷ್ಣ ಗುರೂಜಿ ಅವರಿಗೆ ಚಂದನ ಸತ್ಕಾರ ನೀಡಿ ಗೌರವಿಸಲಾಯಿತು. ವಿ.ಐ. ಪಾಟೀಲ, ಪ್ರೀತಿ ಪಾಟೀಲ, ಎ.ಬಿ. ಉಪ್ಪಿನ, ಟಿ. ಈಶ್ವರ, ಚಂದನ ಐ., ಜಿ. ಭಾವನವರ, ಇದ್ದರು.
ಲಕ್ಷ್ಮೇಶ್ವರದ ಸ್ಕೂಲ್ ಚಂದನದಲ್ಲಿ ಏರ್ಪಡಿಸಿದ್ದ ಗುರುಪೂರ್ಣಿಮೆ ಕಾರ್ಯಕ್ರಮದಲ್ಲಿ ಶ್ರೀಕೃಷ್ಣ ಗುರೂಜಿ ಅವರಿಗೆ ಚಂದನ ಸತ್ಕಾರ ನೀಡಿ ಗೌರವಿಸಲಾಯಿತು. ವಿ.ಐ. ಪಾಟೀಲ, ಪ್ರೀತಿ ಪಾಟೀಲ, ಎ.ಬಿ. ಉಪ್ಪಿನ, ಟಿ. ಈಶ್ವರ, ಚಂದನ ಐ., ಜಿ. ಭಾವನವರ, ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ವಿಜಯಪುರ ಶಾಂತಿ ಕುಟೀರದ ಶ್ರೀಕೃಷ್ಣ ಗುರೂಜಿ ಆಶೀರ್ವಚನ
  • ಗುರುಪೂರ್ಣಿಮೆ ಕಾರ್ಯಕ್ರಮ

ಲಕ್ಷ್ಮೇಶ್ವರ: ಅಜ್ಞಾನವೆಂಬ ಕತ್ತಲೆಯನ್ನು ದೂರ ಮಾಡಿ ಜ್ಞಾನದ ಬೆಳಕು ಹರಡುವ ದಿವ್ಯಶಕ್ತಿ ಗುರುವಿಗಿದೆ. ಶ್ರದ್ಧೆ, ಭಕ್ತಿ, ಸಮರ್ಪಣಾ ಭಾವದಿಂದ ಗೌರವದಿಂದ ಗುರುವಿನ ಸೇವೆಗೈದರೆ ಜ್ಞಾನ, ಸಂಸ್ಕಾರ ಮತ್ತು ಬದುಕಿನ ಸಾರ್ಥಕತೆ ಲಭಿಸುತ್ತದೆ ಎಂದು ವಿಜಯಪುರ ಶಾಂತಿ ಕುಟೀರದ ಶ್ರೀ ಕೃಷ್ಣ ಗುರೂಜಿ ಸ್ವಾಮೀಜಿ ಹೇಳಿದರು.

ಪಟ್ಟಣದ ಸ್ಕೂಲ್ ಚಂದನದಲ್ಲಿ ಏರ್ಪಡಿಸಿದ್ದ ಗುರುಪೂರ್ಣಿಮೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಂಕ ಗಳಿಕೆಗಿಂತ ಕೌಶಲವೇ ಮುಖ್ಯ. ‘ನಾನು ಏನನ್ನಾದರೂ ಸಾಧಿಸಬಲ್ಲೆ’ ಎಂಬ ಆತ್ಮಸ್ಥೈರ್ಯ ಪ್ರತಿಯೊಬ್ಬರಲ್ಲೂ ಇರಬೇಕು. ದೊಡ್ಡ ಗುರಿ ಹೊಂದಿ ಶ್ರದ್ಧೆ, ಪರಿಶ್ರಮ, ತ್ಯಾಗ ಮತ್ತು ಏಕಾಗ್ರತೆಯಿಂದ ಮುನ್ನಡೆದರೆ ಯಶಸ್ಸು ಖಚಿತ. ವಿದ್ಯಾರ್ಥಿಗಳು ಸಮಯಪಾಲನೆ, ಶಿಸ್ತು, ಶ್ರದ್ಧೆ, ನಿರಂತರ ಅಭ್ಯಾಸ ಯಶಸ್ಸಿನ ಭದ್ರ ಬುನಾದಿಯಾಗಿವೆ ಎಂದರು.
ತಂದೆ-ತಾಯಿ ಮತ್ತು ಗುರುಗಳು ಮಕ್ಕಳ ಮೊದಲ ಆದರ್ಶ, ಅವರ ಮಾರ್ಗದರ್ಶನದಲ್ಲಿ ರೂಪುಗೊಳ್ಳುವ ಸಂಸ್ಕಾರವೇ ಜೀವನದ ನಿಜವಾದ ಸಂಪತ್ತು. ಉತ್ತಮ ನಾಗರಿಕರನ್ನು ರೂಪಿಸುವಲ್ಲಿ ಗುರುಗಳ ಪಾತ್ರ ಅಪಾರ. ಈ ನಿಟ್ಟಿನಲ್ಲಿ ಸ್ಕೂಲ್ ಚಂದನ ಮಕ್ಕಳಿಗೆ ಪಠ್ಯ ಶಿಕ್ಷಣದ ಜತೆಗೆ ಪರಿಪೂರ್ಣ ವ್ಯಕ್ತಿಯನ್ನಾಗಿಸುವ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯ ಎಂದರು.
ಮಾಜಿ ಶಾಸಕ, ಕೆಎಲ್‌ಇ ನಿರ್ದೇಶಕ ವಿ.ಐ. ಪಾಟೀಲ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಸಮಯ, ಶಿಸ್ತು, ಶ್ರದ್ಧೆ, ಸತತ ಅಭ್ಯಾಸ ರೂಢಿಸಿಕೊಂಡಾಗ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ. ಯುವಜನತೆ ದುಶ್ಚಟಗಳಿಗೆ ಬಲಿಯಾಗುತ್ತಿರುವುದಕ್ಕೆ ಬಾಲ್ಯದಲ್ಲಿಯೇ ಅವರಿಗೆ ಉತ್ತಮ ಶಿಕ್ಷಣ, ಸಂಸ್ಕಾರದ ಕೊರತೆಯೂ ಕಾರಣ ಎಂದ ಅವರು, ಮಕ್ಕಳಲ್ಲಿ ಉತ್ತಮ ಮೌಲ್ಯಗಳನ್ನು ಬಿತ್ತುವ ಹೊಣೆಗಾರಿಕೆ ಪಾಲಕರು ಮತ್ತು ಗುರುಗಳ ಮೇಲಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥಾಪಕ ಟಿ. ಈಶ್ವರ ಮಾತನಾಡಿ, ಸ್ಕೂಲ್ ಚಂದನದಲ್ಲಿ ಪಠ್ಯ ಶಿಕ್ಷಣಕ್ಕೆ ಸೀಮಿತವಾಗದೆ ಸಂಸ್ಕಾರ, ನೈತಿಕ ಮೌಲ್ಯಗಳು, ಆತ್ಮವಿಶ್ವಾಸ, ನಾಯಕತ್ವ ಗುಣ, ಸೃಜನಶೀಲತೆ ಹಾಗೂ ಜೀವನ ಕೌಶಲ ಬೆಳೆಸುವ ಶಿಕ್ಷಣಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂದರು.
ಶಾಲೆಯ ವೈಶಿಷ್ಟೃಗಳಲ್ಲೊಂದಾದ ಚಂದನ-ಸ್ಪಂದನ ಕಾರ್ಯಕ್ರಮವನ್ನು ಕು. ಅಶ್ವಿನಿ ಸಿ. ನಿರ್ವಹಿಸಿದರು. ಗುರೂಜಿ ಮತ್ತು ವಿ.ಐ. ಪಾಟೀಲ ಅವರೊಂದಿಗೆ ವಿದ್ಯಾರ್ಥಿಗಳು ಸಂವಾದ ನಡೆಸಿದರು. ಬಳಿಕ ಗುರೂಜಿ ಮತ್ತು ಎ.ಐ. ಪಾಟೀಲ ಅವರಿಗೆ ಚಂದನ ಸತ್ಕಾರ ಮಾಡಲಾಯಿತು.
ಪ್ರೀತಿ ಪಾಟೀಲ, ಎ.ಬಿ. ಉಪ್ಪಿನ, ಗಿರಿಜಾ ಟಿ. ಈಶ್ವರ, ಚಂದನ ಐ., ಪ್ರಾಚಾರ್ಯ ಆರ್.ಜಿ. ಭಾವನವರ, ಶಿಕ್ಷಕರು, ಪಾಲಕರು ಇದ್ದರು. ಕಾರ್ಯಕ್ರಮದ ಮೊದಲು ಸ್ಕೂಲ್ ಚಂದನ ವಿದ್ಯಾರ್ಥಿಗಳ ಬ್ಯಾಂಡ್ ಮ್ಯೂಸಿಕ್‌ನಿಂದ ಅತಿಥಿಗಳನ್ನು ಗೌರವದಿಂದ ಬರಮಾಡಿಕೊಂಡಿದ್ದು ವಿಶೇಷವಾಗಿತ್ತು. ಚಂದನ ಸಂಗೀತ ಆಸ್ಥಾನದ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ವಿದ್ಯಾರ್ಥಿಗಳಾದ ಪೂಜಾ, ಪ್ರವೀಣ, ವಚನಾ, ಸಮರ್ಥ, ಸೃಷ್ಟಿ, ಸದಾಶಿವ, ಲಕ್ಷ್ಮೀ ನಿರ್ವಹಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net