ಲಕ್ಷ ದೀಪೋತ್ಸವ ಕಾರ್ಯಕ್ರಮ Deepotsava

ನರಗುಂದ ತಾಲೂಕಿನ ಹದ್ಲಿ ಗ್ರಾಮದ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಲಕ್ಷ ದೀಪೋತ್ಸವ Deepotsavaಕಾರ್ಯಕ್ರಮ ನೆರವೇರಿಸಲಾಯಿತು.
ನರಗುಂದ ತಾಲೂಕಿನ ಹದ್ಲಿ ಗ್ರಾಮದ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಲಕ್ಷ ದೀಪೋತ್ಸವ Deepotsavaಕಾರ್ಯಕ್ರಮ ನೆರವೇರಿಸಲಾಯಿತು.
Published on
ನರಗುಂದ: ಕಾರ್ತಿಕ ಮಾಸದಲ್ಲಿ ದೀಪಾರಾಧನೆ, Deepotsava ಧ್ಯಾನ ಮಾಡುವುದರಿಂದ ಪಾಪ ವಿನಾಶವಾಗಿ ದೈಹಿಕ ಮತ್ತು ಆಧ್ಯಾತ್ಮಿಕ ಪರಿಶುದ್ಧತೆಯ ಜತೆಗೆ ಐಶ್ವರ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದೆ ಎಂದು ಪುಣ್ಯಾರಣ್ಯ ಪತ್ರಿವನಮಠದ ಡಾ.ಗುರುಸಿದ್ಧವೀರ ಶಿವಯೋಗಿ ಶಿವಾಚಾರ್ಯರು ಹೇಳಿದರು.
ತಾಲೂಕಿನ ಹದ್ಲಿ ಗ್ರಾಮದ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಲಕ್ಷ ದೀಪೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಕಾರ್ತಿಕ ಮಾಸದಲ್ಲಿ ವಿಷ್ಣುವಿಗೆ ಅತ್ಯಂತ ಪ್ರಿಯವಾದ ತುಳಸಿಯನ್ನು ಅರ್ಪಿಸಿ ಪೂಜಿಸಲಾಗುತ್ತದೆ. ದೀಪವನ್ನು ಬೆಳಗುವುದರಿಂದ ನಮ್ಮಲ್ಲಿರುವ ಅಂಧಕಾರ, ಅಜ್ಞಾನ ದೂರವಾಗಿ ಸುಜ್ಞಾನದ ಬೆಳಕು ಹರಡುತ್ತದೆ ಎಂಬುವುದು ಭಾರತೀಯರ ಧಾರ್ಮಿಕ ನಂಬಿಕೆ ಎಂದು ತಿಳಿಸಿದರು.
ಭೈರನಹಟ್ಟಿ ಶಾಂತಲಿಂಗ ಸ್ವಾಮಿಗಳು ಮಾತನಾಡಿ, ಕಾರ್ತಿಕವೆಂದರೆ ಸಂಕಷ್ಟದಲ್ಲಿ ಸಿಲುಕಿರುವವರ ಕಾರ್ಗತ್ತಲದ ಜೀವನ ಹೊಡೆದೊಡಿಸಿ ಭಕ್ತರಿಗೆ ದಿವ್ಯ ಬೆಳಕನ್ನು ನೀಡುವುದಾಗಿದೆ. ಮಹಿಳೆಯರಿಂದ ನಮ್ಮ ಭಾರತೀಯರ ಸಂಸ್ಕೃತಿ, ಧಾರ್ಮಿಕ ಭಕ್ತಿ ಪರಂಪರೆ ನಿರಂತರ ಮುಂದುವರೆದಿವೆ ಎಂದರು.
ಕಾರ್ಯಕ್ರಮದಲ್ಲಿ ಗುರುನಾಥಸ್ವಾಮಿ ಮಠಪತಿ, ವಿಶ್ವನಾಥ ಹಿರೇಮಠ, ಬಿ.ಎಸ್. ಸುಂಕದ, ಬಸಪ್ಪ ಯಾವಗಲ್, ರಾಜುಗೌಡ ಪಾಟೀಲ, ಭೀಮಸಿ ಯಾವಗಲ್, ಬಸವರಡ್ಡಿ ಶೇಗಣಿ, ಸುರೇಶಗೌಡ ತಮ್ಮನಗೌಡ್ರ, ಕಾಳಪ್ಪ ಹದಗಲ್, ಕಲ್ಲಪ್ಪ ಪೇಠಪಾಟೀಲ, ಮಲ್ಲಿಕಾರ್ಜುನ ಪರ್ವತಗೌಡ್ರ, ಬಾಳನಗೌಡ ಪರ್ವತಗೌಡ್ರ, ರಾಜಬಾ ನರಗುಂದ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net