JUDGE ಶಿಥಲ ಕೊಠಡಿಗಳ ದುರಸ್ತಿಗೆ ವರದಿ ಸಲ್ಲಿಸಲು ನ್ಯಾಯಾಧೀಶರ ನಿರ್ದೇಶನ

JUDGE ನರಗುಂದ ತಾಲೂಕಿನ ಭೈರನಹಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಜೆಎಂಎಫ್‌ಸಿ ದಿವಾಣಿ ನ್ಯಾಯಾಧೀಶ ಜಿನ್ನಪ್ಪ ಚೌಗಲಾ ಬುಧವಾರ ಭೇಟಿ ನೀಡಿ ಪರಿಶೀಲಿಸಿದರು.
JUDGE ನರಗುಂದ ತಾಲೂಕಿನ ಭೈರನಹಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಜೆಎಂಎಫ್‌ಸಿ ದಿವಾಣಿ ನ್ಯಾಯಾಧೀಶ ಜಿನ್ನಪ್ಪ ಚೌಗಲಾ ಬುಧವಾರ ಭೇಟಿ ನೀಡಿ ಪರಿಶೀಲಿಸಿದರು.
Published on
ನರಗುಂದ: ಮರದ ಕೆಳಗಡೆ ವಿದ್ಯಾರ್ಥಿಗಳನ್ನು ಕೂರಿಸಿ ಪಾಠ ಮಾಡುತ್ತಿದ್ದ ತಾಲೂಕಿನ ಭೈರನಹಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಜೆಎಂಎಫ್‌ಸಿ ನ್ಯಾಯಾಲಯದ (JUDGE ) ದಿವಾಣಿ ನ್ಯಾಯಾಧೀಶ ಜಿನ್ನಪ್ಪ ಚೌಗಲಾ ಬುಧವಾರ ಭೇಟಿ ನೀಡಿದರು. ಅಧಿಕಾರಿಗಳೊಂದಿಗೆ ಶಿಥಿಲಗೊಂಡಿರುವ ಕೊಠಡಿ ವೀಕ್ಷಿಸಿ, ಸೌಕರ್ಯಗಳನ್ನು ಪರಿಶೀಲನೆ ನಡೆಸಿದರು.
ಕೊಠಡಿಗಳ ಸಮಸ್ಯೆ ಎದುರಾಗಿದ್ದರಿಂದ ವಿದ್ಯಾರ್ಥಿಗಳನ್ನು ಮರದ ಕೆಳಗಡೆ ಕೂರಿಸಿ ಪಾಠ ಮಾಡಲಾಗುತ್ತಿತ್ತು. ಈ ಕುರಿತು ಕನ್ನಡದ ನಂ.1 ಪತ್ರಿಕೆ ವಿಜಯವಾಣಿಯಲ್ಲಿ ‘ಮರದ ಕೆಳಗೆ ಮಕ್ಕಳಿಗೆ ಪಾಠ’ ಶೀರ್ಷಿಕೆಯಡಿ ಜೂ. 15ರಂದು ವಿಶೇಷ ವರದಿ ಪ್ರಕಟಿಸಲಾಗಿತ್ತು. ವರದಿಗೆ ಸ್ಪಂದಿಸಿದ ನ್ಯಾಯಾಧೀಶರು ಎಸ್‌ಡಿಎಂಸಿ, ಶಿಕ್ಷಣ, ಪಿಡಿಒ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೊಠಡಿಗಳ ಛಾವಣಿ ಸೋರುತ್ತಿವೆ. ಮಕ್ಕಳಿಗೆ ಸುಸಜ್ಜಿತ ಗಾಳಿ, ಬೆಳಕು, ಸುಂದರ ಪರಿಸರ ನಿರ್ಮಿಸಿ ಗುಣಮಟ್ಟದ ಶಿಕ್ಷಣಕ್ಕೆ ಪ್ರಥಮ ಆದ್ಯತೆ ನೀಡಬೇಕು. 7ನೇ ತರಗತಿ ಮಕ್ಕಳಿಗೆ ಹೊಸದಾಗಿ ಫ್ಯಾನ್ ಅಳವಡಿಸಬೇಕು. ಶಾಲಾ ಮುಂಭಾಗದಲ್ಲಿರುವ ಚರಂಡಿ ವೈಜ್ಞಾನಿಕವಾಗಿ ನಿರ್ಮಿಸಿ, ಮಳೆ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಬೇಕು. ಶಾಲಾ ನಿರ್ವಹಣೆ ವೆಚ್ಚದಲ್ಲಿ ತಕ್ಷಣವೇ ಕೊಠಡಿಗಳ ಸಣ್ಣಪುಟ್ಟ ದುರಸ್ತಿ ಕಾರ್ಯ ಕೈಗೊಳ್ಳಬೇಕು. ಸಂಪೂರ್ಣ ಶಿಥಿಲಗೊಂಡಿರುವ 3 ಕೊಠಡಿಗಳ ದುರಸ್ತಿಗೆ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್ .ಕಂಬಳಿ ಅವರಿಗೆ ನಿರ್ದೇಶಿಸಿದರು.
ಮಕ್ಕಳ ಮಧ್ಯಾಹ್ನದ ಬಿಸಿಯೂಟ ಪರಿಶೀಲಿಸಿದ ನ್ಯಾಯಾಧೀಶರು ಇನ್ಮುಂದೆ ಯಾವುದೇ ಕಾರಣಕ್ಕೂ ಮಕ್ಕಳನ್ನು ಮರದ ಕೆಳಗಡೆ ಕೂಡಿಸಿ ಪಾಠ ಮಾಡಬಾರದು ಎಂದು ಮುಖ್ಯಶಿಕ್ಷಕ ವಿ.ಎಸ್. ಭೋಗಾರ ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಮೌಖಿಕ ಸೂಚನೆ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net