ಜಾಬ್ ಕಾರ್ಡ್ ಅಭಿಯಾನ ಸದುಪಯೋಗವಾಗಲಿ: Job Card Campaign

ಗಜೇಂದ್ರಗಡ ತಾಲೂಕಿನ ಗೋಗೇರಿ ಗ್ರಾಮದಲ್ಲಿ ಜಾಬ್ ಕಾರ್ಡ್ ಮೇಳ ಅಭಿಯಾನಕ್ಕೆ ತಾ.ಪಂ. ಇಒ ಚಂದ್ರಶೇಖರ ಬಿ ಕಂದಕೂರ ಚಾಲನೆ ನೀಡಿದರು. ಮಂಜುನಾಥ ಹಳ್ಳದ, ಎಂ.ಎಂ. ಗೋಡೆಕಾರ, ಎನ್.ಜಿ. ಭಾಗವಾನ, ಕೆ.ಬಿ. ಮಾದರ ಇತರರಿದ್ದರು.
ಗಜೇಂದ್ರಗಡ ತಾಲೂಕಿನ ಗೋಗೇರಿ ಗ್ರಾಮದಲ್ಲಿ ಜಾಬ್ ಕಾರ್ಡ್ ಮೇಳ ಅಭಿಯಾನಕ್ಕೆ ತಾ.ಪಂ. ಇಒ ಚಂದ್ರಶೇಖರ ಬಿ ಕಂದಕೂರ ಚಾಲನೆ ನೀಡಿದರು. ಮಂಜುನಾಥ ಹಳ್ಳದ, ಎಂ.ಎಂ. ಗೋಡೆಕಾರ, ಎನ್.ಜಿ. ಭಾಗವಾನ, ಕೆ.ಬಿ. ಮಾದರ ಇತರರಿದ್ದರು.
Published on
ವಿಜಯವಾಣಿ ಸುದ್ದಿಜಾಲ ಗಜೇಂದ್ರಗಡ
ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜಗಾರ ಆ್ಯಂಡ್ ಆಜೀವಿಕ ಮಿಷನ್ (ಗ್ರಾಮೀಣ) ಯೋಜನೆಯಡಿ ಜಾಬ್ ಕಾರ್ಡ್ ಅಭಿಯಾನ ಆರಂಭಗೊಂಡಿದ್ದು, ಸೆ.15ರವರೆಗೆ ನಡೆಯಲಿದೆ ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಬಿ ಕಂದಕೂರ ತಿಳಿಸಿದರು.
ತಾಲೂಕಿನ ಗೋಗೇರಿ ಗ್ರಾಮ ಪಂಚಾಯಿತಿ ಮುಂಭಾಗದಲ್ಲಿ ಬುಧವಾರ ಜಾಬ್ ಕಾರ್ಡ್ ಮೇಳ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ವಿಬಿ ಜಿ ರಾಮ್ ಜಿ ಯೋಜನೆಯಡಿ ಜಾಬ್ ಕಾರ್ಡ್ ಇಲ್ಲದವರು ಹೊಸ ಜಾಬ್ ಕಾರ್ಡ್ ಮಾಡಿಸಿಕೊಳ್ಳಬೇಕು. ತಿದ್ದುಪಡಿ, ಇ-ಕೆವೈಸಿ ನವೀಕರಣಕ್ಕೆ ಅವಕಾಶ ನೀಡಲಾಗಿದೆ. ಗ್ರಾಪಂ ಸಿಬ್ಬಂದಿ ಮನೆ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಎಲ್ಲ ಕೂಲಿಕಾರರು ಸಹಕಾರ ನೀಡಬೇಕು. ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ನಂತರ ಕಾಯಕ ಬಂಧು ಹಾಗೂ ಗ್ರಾಮಸ್ಥರು ಜತೆಗೆ ಸಂವಾದ ನಡೆಸಿದ ಅವರು, ಯೋಜನೆಯಡಿ ಕೈಗೊಳ್ಳಲಾಗುವ ವಿವಿಧ ಕಾಮಗಾರಿಗಳು, ಉದ್ಯೋಗಾವಕಾಶ ಹಾಗೂ ಯೋಜನೆಯ ಪ್ರಯೋಜನಗಳ ಕುರಿತು ವಿವರಿಸಿದರು.

ಕರ್ನಾಟಕ ಸರ್ಕಾರದ ಹೊಸ ಉಪಕ್ರಮವಾದ ಭಾರತ್ ಜೋಡೋ ಯುವ ಸಂಘದ ಮೂಲಕ ರಾಜ್ಯಾದ್ಯಂತ ಯುವಕರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿ ನಾಯಕತ್ವದ ಗುಣಗಳನ್ನು ಬೆಳೆಸುವ ಮತ್ತು ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರಲು ಯುವಕರನ್ನು ಸಬಲೀಕರಣ ಮಾಡುವ ಉದ್ದೇಶ ಹೊಂದಿದೆ ಎಂದರು.

ಭಾರತ್ ಜೋಡೋ ನೋಂದಣಿ ಮಾಡಿಸಲು 18 ವರ್ಷದಿಂದ 35 ವರ್ಷದವರಾಗಿರಬೇಕು. ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಕನಿಷ್ಠ 100 ಯುವಕರನ್ನು ನೋಂದಣಿ ಮಾಡಿಸಿದರೆ ಸಂಘ ರಚನೆಯಾಗುತ್ತದೆ. ಈ ಸಂಘದಲ್ಲಿ ಎಲ್ಲ ಸಮುದಾಯದ ಜನರು ಮಹಿಳೆಯರು ಇರಬೇಕು. ಆ ನಿಟ್ಟಿನಲ್ಲಿ ನೋಂದಣಿ ಮಾಡಬೇಕು. ಈ ಸಂಘಕ್ಕೆ ವರ್ಷ 10 ಲಕ್ಷ ರೂ. ಅನುದಾನ ಸರ್ಕಾರಿಂದ ನೀಡಲಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾರ್ಯದರ್ಶಿಗಳಾದ ಎಂ.ಎಂ. ಗೋಡೆಕಾರ, ಎನ್.ಜಿ. ಭಾಗವಾನ, ಕೆ.ಬಿ.ಮಾದ, ಐಇಸಿ ಸಂಯೋಜಕರಾದ ಮಂಜುನಾಥ ಹಳ್ಳದ, ಡಿ.ಕೆ. ವಾಲೀಕಾರ, ಯಲ್ಲವ್ವ ಗಾರಗಿ, ನಿಂಗಪ್ಪ ಸೋಂಪೂರ, ಕಾಯಕ ಬಂಧುಗಳು, ಗ್ರಾಮಸ್ಥರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net