ತಾಲೂಕಿನ 50 ಹಳ್ಳಿಗಳಲ್ಲಿ 39 ಕಡೆ ಕೆಲಸ ಪೂರ್ಣವಾಗಿದೆ ಎಂದರೂ ಛಬ್ಬಿ, ಮಾಗಡಿ, ಇಟಗಿ, ಸಾಸಲವಾಡ ಹಾಗೂ ಇತರ ಗ್ರಾಮಗಳಲ್ಲಿ ಕೆಲಸ ಪ್ರಗತಿಯ ಹಂತದಲ್ಲೇ ಇದೆ. ವರವಿ, ತಂಗೋಡ, ವಿವಿಧ ಗ್ರಾಮಗಳಲ್ಲಿ ಕೆಲಸ ಮುಗಿದಿದ್ದರೂ ಗ್ರಾಮ ಪಂಚಾಯಿತಿಗಳು ಅವುಗಳನ್ನು ವಶಕ್ಕೆ ಪಡೆಯಲು ಹಿಂದೇಟು ಹಾಕುತ್ತಿವೆ. ಗುಣಮಟ್ಟ ಇಲ್ಲದ ಕಾಮಗಾರಿಯನ್ನು ನಿರ್ವಹಿಸುವುದು ಹೇಗೆ? ಎಂಬುದು ಪಂಚಾಯಿತಿಗಳ ಪ್ರಶ್ನೆ.