ಉದ್ಯೋಗ ಖಾತ್ರಿ ಯೋಜನೆಯಲ್ಲಿ ಗ್ರಾಮದ ಕೂಲಿ ಕಾರ್ಮಿಕರಿಗೆ ನೀಡಬೇಕಾದ ಕೆಲಸ, ಕಾಮಗಾರಿಗಳ ಪೂರ್ವ ನಿಯೋಜಿತವಾಗದೆ ಇರುವುದರಿಂದ ಕಾಮಗಾರಿಗಳು ಸರಿಯಾಗಿ ನಿರ್ವಹಣೆಯಾಗುತ್ತಿಲ್ಲ. ಮುಖ್ಯವಾಗಿ ಕೂಲಿಕಾರ್ಮಿಕರ ಫೇಸ್ ಲಾಕ್ ಓಪನ್ ಆಗುತ್ತಿಲ್ಲ ಎನ್ನುವ ನೆಪವೊಡ್ಡಿ ಎಲ್ಲರಿಗೂ ಕೆಲಸ ದೊರೆಯದಂತಾಗಿದೆ. ಅದಕ್ಕಾಗಿ ಗ್ರಾ.ಪಂ.ನವರು ಕಾಮಗಾರಿ ಆರಮಭಿಸುವ ಮೊದಲೇ ಕಾಮಗಾರಿ ವಿವರಗಳನ್ನು ನಿರ್ಧರಿಸಬೇಕು. ತಾಂತ್ರಿಕ ಸಮಸ್ಯೆಗಳನ್ನು ಕೂಡಲೇ ಪರಿಹರಿಸಿಕೊಳ್ಳಬೇಕು ಎಂದು ಆಗ್ರಹಿಸಿದರು. ಕಳೆದ ವರ್ಷ ಮಳೆ ಆರಂಭವಾದ ದಿನದಿಂದ ಕಾಮಗಾರಿ ಮಾಡಲು ಪ್ರಯತ್ನಿಸಿದ್ದರು, ಅಲ್ಲದೆ 20 ದಿನ ಕೆಲಸ ಮಾಡಿದರೂ ತಾಂತ್ರಿಕ ದೋಷದ ನೆಪವೊಡ್ಡಿ ಕೆಲವೇ ದಿನಗಳ ಅರ್ಧ ಕೂಲಿಯನ್ನು ಮಾತ್ರ ಹಾಕಿದರು ಎಂದು ಆರೋಪಿದರು.