ಸುಸಜ್ಜಿತ ಸ್ವಾತಂತ್ರೃ ದಿನಾಚರಣೆ ಸಿದ್ಧತೆಯಾಗಲಿ: Independence Day

ಗಜೇಂದ್ರಗಡ ಪುರಸಭೆಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಪೂರ್ವಭಾವಿ ಸಭೆ ನಡೆಯಿತು. ತಹಸೀಲ್ದಾರ್ ಕಿರಣಕುಮಾರ ಕುಲಕರ್ಣಿ, ರೋಣ  ತಹಸೀಲ್ದಾರ್ ನಾಗರಾಜ ಕೆ, ಸಿಪಿಐ ವಿಜಯಕುಮಾರ ನಾಯಕ, ಬಸವರಾಜ ಬಳಗಾನೂರ ಇದ್ದರು.
ಗಜೇಂದ್ರಗಡ ಪುರಸಭೆಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಪೂರ್ವಭಾವಿ ಸಭೆ ನಡೆಯಿತು. ತಹಸೀಲ್ದಾರ್ ಕಿರಣಕುಮಾರ ಕುಲಕರ್ಣಿ, ರೋಣ ತಹಸೀಲ್ದಾರ್ ನಾಗರಾಜ ಕೆ, ಸಿಪಿಐ ವಿಜಯಕುಮಾರ ನಾಯಕ, ಬಸವರಾಜ ಬಳಗಾನೂರ ಇದ್ದರು.
Published on

ವಿಜಯವಾಣಿ ಸುದ್ದಿಜಾಲ ಗಜೇಂದ್ರಗಡ

ಆ.15ರಂದು ಜರುಗುವ ಸ್ವಾತಂತ್ರ್ಯ ದಿವನ್ನು ಸರ್ಕಾರದ ಮಾರ್ಗಸೂಚಿಯಂತೆ ಅತ್ಯಂತ ವಿಜೃಂಭಣೆ ಹಾಗೂ ಸುಸಜ್ಜಿತವಾಗಿ ಆಯೋಜಿಸುವಂತೆ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ತಹಸೀಲ್ದಾರ್ ಕಿರಣಕುಮಾರ ಕುಲಕರ್ಣಿ ಸೂಚಿಸಿದರು.
ನಗರದ ಪುರಸಭೆ ಸಭಾಭವನದಲ್ಲಿ ಬುಧವಾರ ಸ್ವಾತಂತ್ರೊೃೀತ್ಸವ ದಿನಾಚರಣೆ ಹಿನ್ನಲೆಯಲ್ಲಿ ರೋಣ ಹಾಗೂ ಗಜೇಂದ್ರಗಡ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಧ್ವಜಾರೋಹಣ, ಗೌರವ ವಂದನೆ, ಸಾಂಸ್ಕೃತಿಕ ಕಾರ್ಯಕ್ರಮ, ಶಾಲಾ-ಕಾಲೇಜು ವಿದ್ಯಾರ್ಥಿಗಳ ಭಾಗವಹಿಸುವಿಕೆ, ಸಾರ್ವಜನಿಕರಿಗೆ ಅಗತ್ಯ ಮೂಲಸೌಕರ್ಯ, ಕುಡಿಯುವ ನೀರು, ಆಸನ ವ್ಯವಸ್ಥೆ, ಸ್ವಚ್ಛತೆ, ವಿದ್ಯುತ್, ಆರೋಗ್ಯ ಹಾಗೂ ಪೊಲೀಸ್ ಬಂದೋಬಸ್ತ್ ಸೇರಿದಂತೆ ಎಲ್ಲ ಅಗತ್ಯ ಸಿದ್ಧತೆ ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ರೋಣ ತಾಲೂಕು ತಹಸೀಲ್ದಾರ್ ನಾಗರಾಜ ಕೆ. ಮಾತನಾಡಿ, ತಾಲೂಕಿನ ವಿವಿಧ ಇಲಾಖೆಗಳ ನಡುವೆ ಸಮನ್ವಯ ಸಾಧಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಸಭೆಯಲ್ಲಿ ಸೇರಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಗಜೇಂದ್ರಗಡ ತಾಲೂಕಿನಲ್ಲಿನ ಎಸ್.ಎಂ. ಭೂಮರೆಡ್ಡಿ ಕಾಲೇಜು ಆವರಣದಲ್ಲಿ ಧ್ವಜಾರೋಹಣ ನಡೆಯಲಿದೆ. ಈ ಬಾರಿ ಗಜೇಂದ್ರಗಡ ತಾಲೂಕಿನಲ್ಲಿನ ಕಾಲೇಜುಗಳ ಪೈಕಿ 5 ಕಾಲೇಜುಗಳಿಂದ ಪಥ ಸಂಚಲನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ, ಶಿಕ್ಷಣ ಇಲಾಖೆಯಿಂದ ನಿರೂಪಣೆ, ರಾಷ್ಟ್ರಗೀತೆ, ನಾಡಗೀತೆ, ರೈತ ಗೀತೆ, ಅಬಕಾರಿ ಇಲಾಖೆಯಿಂದ ಆಗಮಿಸಿದ ಗಣ್ಯರಿಗೆ ಸನ್ಮಾನಕ್ಕೆ ಬೇಕಾಗುವ ಸಾಮಾಗ್ರಿಗಳು, ಸಿ.ಡಿ.ಪಿ.ಒ ಹಾಗೂ ಉಪನೊಂದಣಿ ಇಲಾಖೆಗೆ ಆಗಮಿಸಿದ ಮಕ್ಕಳಿಗೆ ಉಪಾಹಾರ ವ್ಯವಸ್ಥೆ ಇತರ ಜವಾಬ್ದಾರಿಗಳನ್ನು ಹಂಚಲಾಯಿತು.
ಸಭೆಯಲ್ಲಿ ಸಿ.ಪಿ.ಐ. ವಿಜಯಕುಮಾರ, ರೋಣ ಕ್ಷೇತ್ರ ಶಿಕ್ಷಣಾಧಿಕಾರಿ ದಯಾನಂದ ಯಾವಗಲ್ಲ, ಉಪ ನೋಂದಣಿ ಅಧಿಕಾರಿ ವಿರೂಪಾಕ್ಷಯ್ಯ ಚೌಕಿಮಠ, ಮುಖ್ಯಾಧಿಕಾರಿ ಬಸವರಾಜ ಬಳಗಾನೂರ, ತಾಪಂ ಅಧಿಕಾರಿ ಬಸವರಾಜ ಬಡಿಗೇರ, ರೋಣ ಸಿಡಿಪಿಒ ಲಲಿತಾ ಅಳವಂಡಿ, ವಿ.ಆರ್.ಭಜಂತ್ರಿ, ಕೃಷಿ ಇಲಾಖೆಯ ಎ.ಡಿ.ಎ. ಬಸವರಾಜ ಮಾಳೇದ, ಹೆಸ್ಕಾಂ ಇಲಾಖೆಯ ಹೀನಾ ಕವಜಲಗಿ, ಕೃಷಿ ಇಲಾಖೆಯ ಎ.ಒ. ಬಸವರಾಜ ಗದಗಿನ, ಎಸ್.ಎಸ್.ನರೇಗಲ್ ಬಿ.ಪಿ. ವಾಲ್ಮೀಕಿ, ವಿ.ಆರ್. ಗಾರಗಿ, ಆರ್.ಎಸ್.ಮರಾಠಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net