government ಸರ್ಕಾರದ ಯೋಜನೆ ಸಮರ್ಪಕವಾಗಿ ಅನುಷ್ಠಾನಗೊಳಿಸಿ

ಮುಂಡರಗಿ ಪಟ್ಟಣದ ತಾಪಂ ಸಾಮರ್ಥ್ಯಸೌಧದಲ್ಲಿ ಮಂಗಳವಾರ ತಾಪಂ ಸಾಮಾನ್ಯ ಸಭೆ (meeting) ಜರುಗಿತು.
ಮುಂಡರಗಿ ಪಟ್ಟಣದ ತಾಪಂ ಸಾಮರ್ಥ್ಯಸೌಧದಲ್ಲಿ ಮಂಗಳವಾರ ತಾಪಂ ಸಾಮಾನ್ಯ ಸಭೆ (meeting) ಜರುಗಿತು.
Published on
ಮುಂಡರಗಿ: ಪಟ್ಟಣದ ತಾಲೂಕು ಪಂಚಾಯಿತಿ ಸಾಮರ್ಥ್ಯಸೌಧದಲ್ಲಿ ಮಂಗಳವಾರ ತಾಪಂ ಸಾಮಾನ್ಯ ಸಭೆ ಜರುಗಿತು.
ಎಲ್ಲ ಇಲಾಖೆ ಅಧಿಕಾರಿಗಳು ಹೊಂದಾಣಿಕೆಯಿಂದ ಕಾರ್ಯ ಮಾಡಬೇಕು. ಪರಸ್ಪರ ವಿಶ್ವಾಸದಿಂದ ಕೆಲಸ ಮಾಡಿದರೆ ಪ್ರಗತಿ ಸಾಧಿಸುವುದಕ್ಕೆ ಸಾಧ್ಯವಾಗುತ್ತದೆ. ಅಧಿಕಾರಿಗಳು ಸರ್ಕಾರದ government ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಶ್ರಮ ವಹಿಸಬೇಕು ಎಂದು ತಾಪಂ ಆಡಳಿತಾಧಿಕಾರಿ ಚೇತನಾ ಪಾಟೀಲ ಹೇಳಿದರು.
ಅಧಿಕಾರಿಗಳು ಸಭೆಗೆ ನೀಡುವ ಮಾಹಿತಿಯನ್ನು ಮೊದಲೇ ಪರಿಶೀಲಿಸಿ ಸೂಕ್ತ ಮಾಹಿತಿ ಒದಗಿಸಬೇಕು. ಹಾಗೆಯೇ ವರದಿ ಪ್ರಗತಿಯಲ್ಲಿದೆ, ಸಲ್ಲಿಸಿದೆ, ಪೂರ್ಣವಾಗಿದೆ ಎನ್ನುವುದರ ಜತೆಗೆ ಯಾವ ದಿನದಂದು, ಎಷ್ಟು ಪ್ರಮಾಣದ ಕೆಲಸ ಆಗಬೇಕಿದೆ ಎಂಬ ಪೂರ್ಣಪ್ರಮಾಣದ ಮಾಹಿತಿ ಒಳಗೊಂಡು ವರದಿ ಸಲ್ಲಿಸಬೇಕು ಎಂದು ಸೂಚಿಸಿದರು.
ಪಿಡಬ್ಲುೃಡಿ ಎಇಇ ಬಸವರಾಜ ಅವರು ತಮ್ಮ ಇಲಾಖೆ ವರದಿ ಸಲ್ಲಿಸುವಾಗ ಹಾರೋಗೇರಿ ಪಿಡಿಒ ಮಹೇಶ ಅವರು, ಹಾರೋಗೇರಿ ಗ್ರಾಮದಲ್ಲಿ ಪಿಡಬ್ಲುೃಡಿಗೆ ಸಂಬಂಧಿಸಿದ ಹಿರೇವಡ್ಡಟ್ಟಿ ಭಾಗಕ್ಕೆ ತೆರಳುವ ರಸ್ತೆ ಅಗಲೀಕರಣ ಮಾಡಿ ಚರಂಡಿ ನಿರ್ಮಾಣ ಮಾಡಿಕೊಡಬೇಕಿದೆ. ಅದರಿಂದ ಗ್ರಾಮಸ್ಥರಿಗೆ ತೊಂದರೆಯಾಗಿದೆ ಎಂದರು. ಈ ಬಗ್ಗೆ ಮೌಖಿಕವಾಗಿ ಹೇಳದೆ ಪತ್ರಗಳ ಮೂಲಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಆಡಳಿತಾಧಿಕಾರಿ ಚೇತನಾ ಪಿಡಿಒಗೆ ಸೂಚಿಸಿದರು.
ಯಾವುದೇ ಇಲಾಖೆಗಳು ತಮ್ಮ ಇಲಾಖೆ ವ್ಯಾಪ್ತಿಗೆ ಸಂಬಂಧಿಸಿದ ಏನೇ ತಾಂತ್ರಿಕ ಸಮಸ್ಯೆ ಇದ್ದರೂ ಸಂಬಂಧಿಸಿದವರಿಗೆ ಪತ್ರ ಬರೆದು ಅಧಿಕೃತ ಪಾರದರ್ಶಕತೆಯಿಂದ ಮಾಹಿತಿ ನೀಡಿ ಕೆಲಸ ಮಾಡಬೇಕು ಎಂದು ಸೂಚಿಸಿದರು.
ಪ್ರಧಾನಮಂತ್ರಿ ಕಿರು ಆಹಾರ ಸಂರಕ್ಷಣಾ ಉದ್ದಿಮೆಗಳ ನಿಯಮ ಬದ್ಧಗೊಳಿಸುವಿಕೆ ಯೋಜನೆ ಇದ್ದು, ಸ್ವಯಂ ಉದ್ಯೋಗ ಕೈಗೊಳ್ಳುವುದಕ್ಕೆ ಶೇ.50ರಷ್ಟು ಸಬ್ಸಿಡಿ ಸಾಲ ಸೌಲಭ್ಯವಿದೆ. ಆಸಕ್ತರು ಅರ್ಜಿ ಸಲ್ಲಿಸಿ ಯೋಜನೆ ಸದುಪಯೋಗ ಪಡೆಯಬಹುದು ಎಂದು ಸಹಾಯಕ ಕೃಷಿ ನಿರ್ದೇಶಕ ಪ್ರಾಣೇಶ ತಿಳಿಸಿದರು.
ಬೆಳೆ ವಿಮೆ, ಬೆಳೆ ಸಾಲ, ಕೃಷಿ ಸೌಲಭ್ಯ ಪಡೆಯುವುದಕ್ಕೆ ರೈತರಿಗೆ ಎಫ್‌ಐಡಿ ಸಂಖ್ಯೆ ಅವಶ್ಯ. ಆದ್ದರಿಂದ ರೈತರು ಎಫ್‌ಐಡಿ ಸಂಖ್ಯೆ ಹೊಂದಬೇಕು. ಈ ಕುರಿತು ಕೃಷಿ ಇಲಾಖೆಯಿಂದ ರೈತರಲ್ಲಿ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.
ಹಿಂಗಾರು ಬೆಳೆ ಸಮೀಕ್ಷೆ ಇನ್ನೂ ಆರಂಭವಾಗಿಲ್ಲ. ಈ ಬಗ್ಗೆ ಸಿದ್ಧತೆ ಮಾಡಿಕೊಳ್ಳಬೇಕು. ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಸಕಾಲದಲ್ಲಿ ಬೆಳೆ ಸಮೀಕ್ಷೆ ಮಾಡಿಕೊಳ್ಳುವುದಕ್ಕೆ ಮುಂದಾಗಬೇಕು ಎಂದು ಕೃಷಿ ಎಡಿ ಪ್ರಾಣೇಶ ಅವರಿಗೆ ಚೇತನಾ ಅವರು ಸೂಚಿಸಿದರು. ವಿವಿಧ ಇಲಾಖೆ ತಾಲೂಕು ಮಟ್ಟದ ಅಧಿಕಾರಿಗಳು ಮಾಹಿತಿ ನೀಡಿದರು.
ತಾಪಂ ಇಒ ವಿಶ್ವನಾಥ ಹೊಸಮನಿ, ತಾಲೂಕು ಮಟ್ಟದ ಅಧಿಕಾರಿಗಳು, ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net