honor: ಉನ್ನತ ಗುರಿ ಸಾಧನೆಗೆ ಸತತ ಪ್ರಯತ್ನ ಅಗತ್ಯ

ಮುಂಡರಗಿ ಪಟ್ಟಣದ ಕೋಟೆಭಾಗದ ಶ್ರೀ ಮಾರುತಿ ದೇವಸ್ಥಾನದಲ್ಲಿ ಸೋಮವಾರ ಪ್ರತಿಭಾವಂತ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ನಿವೃತ್ತ ಮುಖ್ಯ ಶಿಕ್ಷಕ ಸಂಜೀವ್ ರಿತ್ತಿ ಮಾತನಾಡಿದರು. ಶಿವಪ್ಪ ಚಿಕ್ಕಣ್ಣನವರ, ಮಂಜುನಾಥ ಇಟಗಿ, ಮುತ್ತಪ್ಪ ಆಗಸಿಮುಂದಿನ, ಯಂಕಪ್ಪ ಮಲ್ಲಾರ್ಜಿ, ಇತರರಿದ್ದರು.
ಮುಂಡರಗಿ ಪಟ್ಟಣದ ಕೋಟೆಭಾಗದ ಶ್ರೀ ಮಾರುತಿ ದೇವಸ್ಥಾನದಲ್ಲಿ ಸೋಮವಾರ ಪ್ರತಿಭಾವಂತ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ನಿವೃತ್ತ ಮುಖ್ಯ ಶಿಕ್ಷಕ ಸಂಜೀವ್ ರಿತ್ತಿ ಮಾತನಾಡಿದರು. ಶಿವಪ್ಪ ಚಿಕ್ಕಣ್ಣನವರ, ಮಂಜುನಾಥ ಇಟಗಿ, ಮುತ್ತಪ್ಪ ಆಗಸಿಮುಂದಿನ, ಯಂಕಪ್ಪ ಮಲ್ಲಾರ್ಜಿ, ಇತರರಿದ್ದರು.
Published on
ವಿಜಯವಾಣಿ ಸುದ್ದಿಜಾಲ ಮುಂಡರಗಿ
ಜೀವನದಲ್ಲಿ ಪ್ರತಿಯೊಬ್ಬರೂ ಸತತ ಪ್ರಯತ್ನದ ಮೂಲಕ ಸಾಧನೆಯ ಗುರಿ ತಲುಪಬೇಕು. ಪ್ರಯತ್ನಕ್ಕೆ ತಕ್ಕ ಪ್ರೋತ್ಸಾಹ ಸಿಕ್ಕರೆ ಪ್ರತಿ ವ್ಯಕ್ತಿ ಎತ್ತರಕ್ಕೆ ಬೆಳೆಯುತ್ತಾನೆ ಎಂದು ನಿವೃತ್ತ ಮುಖ್ಯಶಿಕ್ಷಕ ಸಂಜೀವ ರಿತ್ತಿ ಹೇಳಿದರು.
ಪಟ್ಟಣದ ಕೋಟೆ ಭಾಗದ ಶ್ರೀ ಮಾರುತಿ ದೇವಸ್ಥಾನ ಟ್ರಸ್ಟ್ ಕಮಿಟಿ ಹಾಗೂ ಜಾತ್ರಾ ಸಮಿತಿ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಪ್ರತಿಭಾವಂತ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಟ್ರಸ್ಟ್ ಕಮಿಟಿಯವರು ಅಧಿಕ ಮಾಸದಲ್ಲಿ ಇಂತಹ ಕಾರ್ಯಕ್ರಮ ಆಯೋಜಿಸಿರುವುದು ಉತ್ತಮ ಕಾರ್ಯ. ಈ ಅಧಿಕ ಮಾಸದಲ್ಲಿ ನಾವು ಮಾಡುವ ನಿರ್ಮಲ ಭಕ್ತಿಯ ದೇವರ ಪೂಜೆಗೆ ಭಗವಂತ ನಮ್ಮ ಇಷ್ಟಾರ್ಥವನ್ನು ಈಡೇರಿಸುತ್ತಾನೆ. ಅಧಿಕ ಮಾಸವನ್ನು ಪುರುಷೋತ್ತಮ ಮಾಸ ಎನ್ನುತ್ತಾರೆ. ಅಂದರೆ ಸರ್ವಶ್ರೇಷ್ಠ ಮಾಸವಾಗಿದೆ. ಸನಾತನ ಸಂಸ್ಕೃತಿಯಲ್ಲಿ ಅನೇಕ ಧಾರ್ಮಿಕ ಕಾರ್ಯಕ್ರಮಗಳನ್ನು ಬಹಳ ವಿಶಿಷ್ಟವಾಗಿ ಆಚರಣೆ ಮಾಡುತ್ತಾರೆ. ಸನ್ಮಾನಗೊಂಡವರ ಜವಾಬ್ದಾರಿ ಹೆಚ್ವುತ್ತದೆ. ಸಮಾಜಕ್ಕೂ ದೇಶಕ್ಕೂ ಕೀರ್ತಿ ತರಬೇಕು ಎಂದರು.
ದೇವಸ್ಥಾನ ಟ್ರಸ್ಟ್ ಕಮಿಟಿ ಅಧ್ಯಕ್ಷ ಶಿವಪ್ಪ ಚಿಕ್ಕಣ್ಣನವರ ಅಧ್ಯಕ್ಷತೆ ವಹಿಸಿದ್ದರು. ದೇವಸ್ಥಾನ ಅರ್ಚಕ ಮುತ್ತಪ್ಪ ಆಗಸಿಮುಂದಿನ, ಯಂಕಪ್ಪ ಮಲ್ಲಾರ್ಜಿ, ದುರಗಪ್ಪ ರಾಮೇನಹಳ್ಳಿ, ಅಂದಪ್ಪ ಹಂದ್ರಾಳ, ನಾಗೇಶ ಹುಬ್ಬಳ್ಳಿ, ಶೇಖಪ್ಪ ಬಳ್ಳಾರಿ, ಮುದಕಪ್ಪ ಕುಂಬಾರ ವಿರುಪಾಕ್ಷಪ್ಪ ಬಾರಕೇರ, ಭೀಮಣ್ಣ ಆರೇರ, ಮಂಜುನಾಥ ಮುಧೋಳ, ಪವನ ಲೇಂಡ್ವೆ, ಶಿವಾನಂದ ದಂಡಿನ, ನಿಂಗಪ್ಪ ಚೌಡಕ್ಕಿ, ಈಶಪ್ಪ ಉಳ್ಳಾಗಡ್ಡಿ, ಉಮೇಶ ಬಳ್ಳಾರಿ, ಅರುಣ ಬಾರಕೇರ, ನಾಗರಾಜ ಹೊಸಮನಿ, ಅವಿನಾಶ ಗೊಡಕ್ಕಿಂಡಿ ಉಪಸ್ಥಿತರಿದ್ದರು. ಮಂಜುನಾಥ ಇಟಗಿ ಕಾರ್ಯಕ್ರಮ ನಿರ್ವಹಿಸಿದರು.

ಸಾಧಕರಿಗೆ ಸನ್ಮಾನ

ಭಾರತೀಯ ಸೇನೆಗೆ (ಅಗ್ನಿವೀರ) ಆಯ್ಕೆಯಾಗಿದ ಸಂತೋಷ ಮೊರನಾಳ, ಡಿ.ಜಿ ಮತ್ತು ಐ.ಜಿ.ಪಿ ಪ್ರಶಂಸನಾ ಪ್ರಶಸ್ತಿ ಪುರಸ್ಕೃತ ಹೆಡ್‌ಕಾನ್‌ಸ್ಟೇಬಲ್ ಜಾಫರ್ ಬಚೇರಿ, ವಕೀಲ ಅಂದಪ್ಪ ಕುರಿ, ತಾಲೂಕು ಶ್ರೇಷ್ಠ ಕೃಷಿಕ ಪ್ರಶಸ್ತಿ ಪುರಸ್ಕೃತ ರಾಘವೇಂದ್ರ ಕುರಿಯವರ, ಎಸ್ಸೆಸ್ಸೆಲ್ಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿನಿ ಸೌಭಾಗ್ಯ ಬಾರಕೇರ, ಹಾಸ್ಯನಟ ಶರಣಪ್ಪ ಹೊಂಬಳಗಟ್ಟಿ ಅವರಿಗೆ ಸನ್ಮಾನಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net