Hindu ಹಿಂದೂ ಸಮಾಜ ಸುಂದರ ತೋಟವಿದ್ದಂತೆ

ಮುಂಡರಗಿ ಪಟ್ಟಣದಲ್ಲಿ ಹಿಂದೂ (Hindu) ಸಮ್ಮೇಳನ ಪ್ರಯುಕ್ತ ಶನಿವಾರ ಹಮ್ಮಿಕೊಂಡಿದ್ದ ಭವ್ಯ ಶೋಭಾಯಾತ್ರೆಗೆ ಡಾ.ಅನ್ನದಾನೀಶ್ವರ ಶಿವಯೋಗಿಗಳು ಚಾಲನೆ ನೀಡಿದರು.
ಮುಂಡರಗಿ ಪಟ್ಟಣದಲ್ಲಿ ಹಿಂದೂ (Hindu) ಸಮ್ಮೇಳನ ಪ್ರಯುಕ್ತ ಶನಿವಾರ ಹಮ್ಮಿಕೊಂಡಿದ್ದ ಭವ್ಯ ಶೋಭಾಯಾತ್ರೆಗೆ ಡಾ.ಅನ್ನದಾನೀಶ್ವರ ಶಿವಯೋಗಿಗಳು ಚಾಲನೆ ನೀಡಿದರು.
Published on
ಮುಂಡರಗಿ: ಭಾರತ ದೇಶ ಸರ್ವರನ್ನೂ ಸಮಾನತೆಯಿಂದ ಕಾಣುವ ದೇಶವಾಗಿದೆ. ಇಂತಹ ಸಮ್ಮೇಳನದಲ್ಲಿ ಸಮಾನತೆ ಕಾಣುತ್ತದೆ. ಹಿಂದೂ Hindu ಸಮಾಜ ಸುಂದರ ತೋಟವಿದ್ದಂತೆ. ವಿವಿಧ ಸಮುದಾಯಗಳು ತೋಟದಲ್ಲಿನ ಹೂಗಳಂತೆ. ಹಿಂದೂ ಸಮ್ಮೇಳನ ಎಲ್ಲ ಸಮುದಾಯದ ಐಕ್ಯತೆಗೆ ಸಾಕ್ಷಿಯಾಗಬೇಕು ಎಂದು ನಾಡೋಜ ಡಾ.ಅನ್ನದಾನೀಶ್ವರ ಶಿವಯೋಗಿಗಳವರು ಹೇಳಿದರು.
ಪಟ್ಟಣದ ಕೋಟೆ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದಿಂದ ಹಿಂದೂ ಸಮ್ಮೇಳನ ಸಮಿತಿ ವತಿಯಿಂದ ಹಿಂದೂ ಸಮ್ಮೇಳನ ಪ್ರಯುಕ್ತ ಶನಿವಾರ ಹಮ್ಮಿಕೊಂಡಿದ್ದ ಭಾರತಮಾತೆಯ ಭಾವಚಿತ್ರ ಹಾಗೂ ಸ್ತಬ್ಧ ಚಿತ್ರಗಳ ಭವ್ಯ ಶೋಭಾಯಾತ್ರೆಗೆ ಚಾಲನೆ ನೀಡಿ ಅವರು ಆಶೀರ್ವಚನ ನೀಡಿದರು. ಎಲ್ಲರೂ ಸಮುದಾಯದವರು ಶಾಂತಿಯುತ ಹಾಗೂ ಸಂವಿಧಾನ ಬದ್ಧವಾಗಿ ಒಟ್ಟಾಗಿ ಬಾಳಬೇಕು ಎಂದರು.
ಮೆರವಣಿಗೆಯಲ್ಲಿ ವಿವಿಧ ಛದ್ಮವೇಷಧಾರಿಗಳು, ಮಹಿಳೆಯರ ಕುಂಭಮೇಳ, ಡೊಳ್ಳು ಕುಣಿತ, ನಂದಿಕೊಲು, ಸಮ್ಮಾಳ, ವೀರಗಾಸೆ, ಭಜನೆ, ಲಂಬಾಣಿ ನೃತ್ಯ, ಕಂಸಾಳೆ, ತಮಟೆ ಕುಣಿತ, ಚಂಡಿ ಮೇಳ ಸೇರಿ ವಿವಿಧ ದೇಶಿ ಜನಪದ ಮೇಳಗಳು ನೆರೆದಿದ್ದ ಜನರ ಗಮನ ಸೆಳೆದವು.
ಶಾಸಕ ಡಾ. ಚಂದ್ರು ಲಮಾಣಿ, ಹಿಂದೂ ಸಮ್ಮೇಳನ ಸಮಿತಿ ಅಧ್ಯಕ್ಷ ಶ್ರೀನಿವಾಸ ಉಪ್ಪಿನಬೆಟಗೇರಿ, ಎಸ್.ಆರ್. ರಿತ್ತಿ, ವೈ.ಎನ್ . ಗೌಡರ, ಈಶ್ವರಪ್ಪ ಹಂಚಿನಾಳ, ಕರಬಸಪ್ಪ ಹಂಚಿನಾಳ, ಲಿಂಗರಾಜಗೌಡ ಪಾಟೀಲ, ಆನಂದಗೌಡ ಪಾಟೀಲ, ಹೇಮಗಿರೀಶ ಹಾವಿನಾಳ, ರವೀಂದ್ರ ಉಪ್ಪಿನಬೆಟಗೇರಿ, ಎಸ್.ವಿ. ಪಾಟೀಲ, ಹೇಮಂತಗೌಡ ಪಾಟೀಲ, ಭೀಮಸಿಂಗ್ ರಾಠೋಡ, ಕುಮಾರಸ್ವಾಮಿ ಹಿರೇಮಠ, ಡಾ.ಪ್ರಕಾಶ ಹೊಸಮನಿ, ಕೊಟ್ರೇಶ ಅಂಗಡಿ, ವಿ.ಜೆ. ಹಿರೇಮಠ, ಶಿವಪ್ಪ ಚಿಕ್ಕಣ್ಣನವರ, ಮಂಜುನಾಥ ಇಟಗಿ, ಶ್ರೀನಿವಾಸ ಕಟ್ಟಿಮನಿ, ನಾಗೇಶ ಹುಬ್ಬಳ್ಳಿ, ಯಲ್ಲಪ್ಪ ಅರ್ಕಸಾಲಿ, ಅನಂತ ಚಿತ್ರಗಾರ, ಅವಿನಾಶ ಗೋಟಕಿಂಡಿ, ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net