Hindu ಹಿಂದೂ ಸಮ್ಮೇಳನ ಶನಿವಾರ

ಹಿಂದೂ ಸಮ್ಮೇಳನ
ಹಿಂದೂ ಸಮ್ಮೇಳನ
Published on
ನರೇಗಲ್ಲ: ಹೋಬಳಿ ಮಟ್ಟದ ಹಿಂದೂ ಸಮ್ಮೇಳನ 24ರಂದು ಹಿರೇಮಠದ ಸಭಾಭವನದಲ್ಲಿ ಜರುಗಲಿದೆ (Hindu) ಎಂದು ಸಮ್ಮೇಳನ ಸಮೀತಿ ಅಧ್ಯಕ್ಷ ಬಸವರಾಜ ವಂಕಲಕುಂಟಿ ಹೇಳಿದರು.
ಪಟ್ಟಣದಲ್ಲ್ಲಿ ಸೋಮವಾರ ಸಂಜೆ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿ, ಹಿಂದೂ ಸಮ್ಮೇಳನ ಬಹಳ ಅದ್ಧೂರಿಯಾಗಿ ಜರುಗಲಿದೆ. ನರೇಗಲ್ಲ ಸೇರಿದಂತೆ ಸುತ್ತಲಿನ 21 ಹಳ್ಳಿಗಳನ್ನು ನಮ್ಮೆಲ್ಲ ಕಾರ್ಯಕರ್ತರೊಂದಿಗೆ ಸಂಪರ್ಕಿಸಿ ಸಮ್ಮೇಳನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಕೋರಿದ್ದೇವೆ. ಸಮ್ಮೇಳನ ಜಾತಿ, ಪಕ್ಷ, ಪಂಗಡಕ್ಕೆ ಸೀಮಿತವಾಗದೆ ಪ್ರತಿಯೊಬ್ಬ ವ್ಯಕ್ತಿ ಭಾರತೀಯ ಪ್ರಜೆಯಾಗಿ ಸಮ್ಮೇಳನದಲ್ಲಿ ಸಂತೋಷದಿಂದ ಪಾಲ್ಗೊಳ್ಳಲು ವಿನಂತಿಸಲಾಗಿದೆ ಎಂದರು.
23ರಂದು ಶುಕ್ರವಾರ ಬೈಕ್‌ರ‌್ಯಾಲಿ ನಡೆಯಲಿದ್ದು ನರೇಗಲ್ಲ, ಕೋಡಿಕೊಪ್ಪ, ಕೋಚಲಾಪುರ, ಅಬ್ಬಿಗೇರಿ, ಜಕ್ಕಲಿ, ಮಾರನಬಸರಿ, ಬೂದಿಹಾಳ, ಮಲ್ಲಾಪೂರ ಗ್ರಾಮಗಳಲ್ಲಿ ಸಂಚರಿಸಿ ಮರಳಿ ನರೇಗಲ್ಲ ತಲುಪಲಿದೆ ಎಂದರು.
ಸಮಿತಿ ಉಪಾಧ್ಯಕ್ಷ ಡಾ. ಆರ್.ಕೆ. ಗಚ್ಚಿನಮಠ ಮಾತನಾಡಿ, ಶೋಭಾ ಯಾತ್ರೆ ಸಾಗಲಿರುವ ರಾಜ ಬೀದಿಗಳನ್ನು ಹಸಿರು ತೋರಣ, ಕೇಸರಿ ಪರಪರಿಗಳೊಂದಿಗೆ ಜನತೆ ಸಿಂಗರಿಸಲಿದ್ದಾರೆ. ವಿವಿಧ ವಾದ್ಯಗಳೊಂದಿಗೆ ಮೆರವಣಿಗೆ ಸಾಗಲಿದೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net