Hindu ಶಿರಹಟ್ಟಿಯಲ್ಲಿ ಹಿಂದೂ ಸಮ್ಮೇಳನ ಜ.31ರಂದು

 Hindu ಶಿರಹಟ್ಟಿಯಲ್ಲಿ ಹಿಂದೂ ಸಮ್ಮೇಳನ
Hindu ಶಿರಹಟ್ಟಿಯಲ್ಲಿ ಹಿಂದೂ ಸಮ್ಮೇಳನ
Published on
ಶಿರಹಟ್ಟಿ: ಹೋಬಳಿ ಮಟ್ಟದ ಹಿಂದೂ (Hindu) ಸಮ್ಮೇಳನ ಜ.31ರಂದು ಸಂಜೆ 5ಗಂಟೆಗೆ ಪಟ್ಟಣದ ಸಿಸಿಎನ್ ಆಂಗ್ಲ ಮಾಧ್ಯಮಿಕ ಶಾಲೆ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಮ್ಮೇಳನದ ಅಧ್ಯಕ್ಷ ತಿಪ್ಪಣ್ಣ ಕೊಂಚಿಗೇರಿ ಹೇಳಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರು. ಅಂದು ಮಧ್ಯಾಹ್ನ 3 ಗಂಟೆಗೆ ಶ್ರೀ ಅಂಬಾಭವಾನಿ ದೇವಸ್ಥಾನದಿಂದ ಶೋಭಾಯಾತ್ರೆ ಹೊರಟು ಮಟ್ಟಿಭಾವಿ, ಮ್ಯಾಗೇರಿ ಓಣಿ, ಬೀರೇಶ್ವರ ದೇವಸ್ಥಾನ, ಸಂಗೊಳ್ಳಿ ರಾಯಣ್ಣ ವೃತ್ತ, ವಾಲ್ಮೀಕಿ, ಗಾಂಧಿ ವೃತ್ತ, ಅಂಬೇಡ್ಕರ್ ವೃತ್ತ ಸೇರಿದಂತೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸಾರ್ವಜನಿಕ ಸಮಾರಂಭ ಸ್ಥಳವಾದ ಸಿಸಿಎನ್ ಆಂಗ್ಲ ಮಾಧ್ಯಮಿಕ ಶಾಲೆ ತಲುಪುವುದು.
ಕಾರ್ಯಕ್ರಮದಲ್ಲಿ 2,500 ಜನರು ಸೇರುವ ನಿರೀಕ್ಷೆಯಿದೆ. ಮೆರವಣಿಗೆಯಲ್ಲಿ ವಿವಿಧ ಕಲಾ ತಂಡಗಳು ಭಾಗವಹಿಸಲಿವೆ ಎಂದರು. ನಾಗರಾಜ ಲಕ್ಕುಂಡಿ, ನಟರಾಜ ರಾನಡೆ, ನೀಲಪ್ಪ ಚಕ್ರಸಾಲಿ, ಫಕೀರೇಶ ರಟ್ಟಿಹಳ್ಳಿ, ಯಲ್ಲಪ್ಪ ಇಂಗಳಗಿ, ಕುಮಾರಿ ಪುತುಳಾಬಾಯಿ ಪರಬತ್, ಶ್ರೀನಿವಾಸ ಬಾರ್ಬರ, ರಾಮಣ್ಣ ಕಮ್ಮಾರ, ಮಹಾದೇವಪ್ಪ ಹಡಪದ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net