ಮುಂಡರಗಿ: ಪಟ್ಟಣ ಸೇರಿದಂತೆ ತಾಲೂಕಿನ ಹಲವೆಡೆ (rain)ಬುಧವಾರ ಗುಡುಗು, ಸಿಡಿಲು ಸಹಿತ ಜೋರು ಮಳೆ ಸುರಿಯಿತು. ಜೋರಾದ ಗಾಳಿಯೊಂದಿಗೆ ಆರಂಭದಲ್ಲಿ ಆಲಿಕಲ್ಲು ಮಳೆ ಸುರಿಯಿತು. ಗುಡುಗು, ಸಿಡಿಲಿಗೆ ಜನ ಆತಂಕಗೊಂಡರು. ಹಿರೇವಡ್ಡಟ್ಟಿ ಗ್ರಾಮದಲ್ಲಿ ಸಿಡಿಲಿಗೆ ತೆಂಗಿನ ಗಿಡವೊಂದರ ಮೇಲ್ಭಾಗಕ್ಕೆ ಬೆಂಕಿ ಬಿದ್ದು ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿತು. ಗಾಳಿ, ಮಳೆಯಿಂದ ಬಾಳೆ, ಇನ್ನಿತರ ತೋಟಗಾರಿಕೆ ಬೆಳೆಗಳು ಹಾನಿಯಾಗಿವೆ.