RAIN ಡಿಸಿ ಬಂದು ಹೋದ ನಂತರ ಭರ್ಜರಿ ಮಳೆ

RAIN  : ರೋಣ ಪಟ್ಟಣದಲ್ಲಿ ಗುರುವಾರ ಸಂಜೆ ಸುರಿದ ಮಳೆಯಿಂದ ಚರಂಡಿಗಳು ತುಂಬಿ ರಸ್ತೆಯಲ್ಲಿ ಕೊಳಚೆ ನೀರು ಹರಿಯಿತು.
RAIN : ರೋಣ ಪಟ್ಟಣದಲ್ಲಿ ಗುರುವಾರ ಸಂಜೆ ಸುರಿದ ಮಳೆಯಿಂದ ಚರಂಡಿಗಳು ತುಂಬಿ ರಸ್ತೆಯಲ್ಲಿ ಕೊಳಚೆ ನೀರು ಹರಿಯಿತು.
Published on
ರೋಣ: ತಾಲೂಕಿನ ವಿವಿಧ ಭಾಗದ ಜಮೀನುಗಳಿಗೆ (RAIN ) ಜಿಲ್ಲಾಧಿಕಾರಿ ಸಿ.ಎಸ್. ಶ್ರೀಧರ ಭೇಟಿ ನೀಡಿ ಬೆಳೆ ಹಾನಿ ಪರಿಶೀಲನೆ ನಡೆಸಿದ ನಂತರ ತಾಲೂಕಿನ ವಿವಿಧ ಭಾಗಗಳಲ್ಲಿ ಭರ್ಜರಿ ಮಳೆ ಸುರಿಯಿತು. 2 ತಾಸಿಗೂ ಅಧಿಕ ಹೊತ್ತು ಸುರಿದ ಮಳೆಗೆ ಬಾಡುವ ಹಂತ ತಲುಪಿದ್ದ ಹೆಸರು ಬೆಳೆಗೆ ಮರುಜೀವ ಸಿಕ್ಕಂತಾಗಿದೆ. ರೋಣದಲ್ಲಿ ಮಳೆಯ ರಭಸಕ್ಕೆ ಚರಂಡಿಗಳು ತುಂಬಿ ರಸ್ತೆ ಮೇಲೆ ನೀರು ಹರಿಯಿತು. ಇದರಿಂದ ವಾಹನ ಸವಾರರು ಪರದಾಡಿದರು. ಟ್ರಾಫಿಕ್ ಜಾಮ್‌ನಿಂದ ಸಂಚಾರಕ್ಕೆ ತೊಂದರೆ ಉಂಟಾಯಿತು. ಗುರುವಾರ ಸಂತೆ ದಿನವಾದ್ದರಿಂದ ಗ್ರಾಮೀಣ ಭಾಗದಿಂದ ಸಂತೆಗೆ ಬಂದಿದ್ದ ಜನರು ಮಳೆಯ ರಭಸಕ್ಕೆ ಸಿಕ್ಕು ತೊಂದರೆ ಅನುಭವಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net