heart attack: ಹೃದಯಾಘಾತದಿಂದ ಅತಿಥಿ ಶಿಕ್ಷಕಿ ಸಾವು

ಜ್ಯೋತಿ ಕೋಡ್ಲಿವಾಡ
ಜ್ಯೋತಿ ಕೋಡ್ಲಿವಾಡ
Published on
ನರಗುಂದ: ಶಾಲೆಗೆ ತೆರಳುವಾಗ ಹೃದಯಾಘಾತ ಸಂಭವಿಸಿ ಅತಿಥಿ ಶಿಕ್ಷಕಿ ಶಾಲೆ ಗೇಟ್ ಬಳಿ ಕುಸಿದು ಬಿದ್ದು ಮೃತಪಟ್ಟ ಘಟನೆ ತಾಲೂಕಿನ ಬನಹಟ್ಟಿ ಗ್ರಾಮದಲ್ಲಿ ಶುಕ್ರವಾರ ಜರುಗಿದೆ.
ಬನಹಟ್ಟಿ ಕೆಪಿಎಸ್ ಶಾಲೆ ಶಿಕ್ಷಕಿ ಜ್ಯೋತಿ ಬಸವರಾಜ ಕೋಡ್ಲಿವಾಡ (34) ಮೃತ ಶಿಕ್ಷಕಿ. ಬನಹಟ್ಟಿ ಕೆಪಿಎಸ್ ಶಾಲೆಯಲ್ಲಿ ಏಳು ವರ್ಷಗಳಿಂದ ಎಲ್‌ಕೆಜಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದ ಜ್ಯೋತಿ ಎಂದಿನಂತೆ ಶುಕ್ರವಾರ ಬೆಳಗ್ಗೆ ತಮ್ಮ ಮನೆಯಿಂದ ಶಾಲೆಗೆ ಆಗಮಿಸುತ್ತಿದ್ದರು. ಶಾಲೆ ಪ್ರವೇಶದ್ವಾರದ ಬಳಿ ಆಗಮಿಸುತ್ತಿದ್ದಾಗ ಶಿಕ್ಷಕಿಗೆ ಏಕಾಏಕಿ ಹೃದಯಾಘಾತ ಸಂಭವಿ ನಡುರಸ್ತೆಯಲ್ಲಿ ಕುಸಿದು ಬಿದ್ದಿದ್ದಾರೆ. ಶಿಕ್ಷಕಿಯನ್ನು ಗ್ರಾಮಸ್ಥರು ಮನೆಗೆ ಕರೆದುಕೊಂಡು ಹೋಗುವಷ್ಟರಲ್ಲಿ ಶಿಕ್ಷಕಿ ಕೊನೆಯುಸಿರೆಳೆದರು.
ಮೃತರಿಗೆ ಪತಿ, ಓರ್ವ ಪುತ್ರಿ, ಒಬ್ಬ ಪುತ್ರ ಇದ್ದಾನೆ. ಶಿಕ್ಷಕಿಯ ಸಾವಿನ ಸುದ್ದಿ ತಿಳಿದು ಇವರ ಗೌರವಾರ್ಥ ಶಾಲೆಗೆ ಶುಕ್ರವಾರ ರಜೆ ನೀಡಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net