HEALTH: ಆರೋಗ್ಯ ಸಂಪತ್ತು ದೊಡ್ಡದು

ನರಗುಂದ ತಾಲೂಕಿನ ಹದ್ಲಿ ಗ್ರಾಮದಲ್ಲಿ 65 ಲಕ್ಷ ರೂ. ವೆಚ್ಚದ ಆಯುಷ್ಮಾನ್ ಆರೋಗ್ಯ ಕೇಂದ್ರದ ಕಟ್ಟಡ ನಿರ್ಮಾಣಕ್ಕೆ ಶಾಸಕ ಸಿ.ಸಿ.ಪಾಟೀಲ ಭೂಮಿಪೂಜೆ ನೆರವೇರಿಸಿದರು. ಬಿ.ಜಿ.ಸುಂಕದ, ರಾಜುಗೌಡ ಪಾಟೀಲ, ಭೀಮಸಿ ಯಾವಗಲ್‌ಲ್, ಡಾ. ರೇಣುಕಾ ಕೊರವನವರ, ಶ್ರೀಧರ ಚಿನಗುಂಡಿ, ಇತರರಿದ್ದರು.
ನರಗುಂದ ತಾಲೂಕಿನ ಹದ್ಲಿ ಗ್ರಾಮದಲ್ಲಿ 65 ಲಕ್ಷ ರೂ. ವೆಚ್ಚದ ಆಯುಷ್ಮಾನ್ ಆರೋಗ್ಯ ಕೇಂದ್ರದ ಕಟ್ಟಡ ನಿರ್ಮಾಣಕ್ಕೆ ಶಾಸಕ ಸಿ.ಸಿ.ಪಾಟೀಲ ಭೂಮಿಪೂಜೆ ನೆರವೇರಿಸಿದರು. ಬಿ.ಜಿ.ಸುಂಕದ, ರಾಜುಗೌಡ ಪಾಟೀಲ, ಭೀಮಸಿ ಯಾವಗಲ್‌ಲ್, ಡಾ. ರೇಣುಕಾ ಕೊರವನವರ, ಶ್ರೀಧರ ಚಿನಗುಂಡಿ, ಇತರರಿದ್ದರು.
Published on
ನರಗುಂದ: ಮನುಷ್ಯನಿಗೆ ಕೋಟಿ ಸಂಪತ್ತಿಗಿಂತ ವೈಯಕ್ತಿಕ ನೆಮ್ಮದಿ, ಸುಖಕರ ಜೀವನಕ್ಕೆ ಆರೋಗ್ಯ (HEALTH) ಸಂಪತ್ತು ಮುಖ್ಯ ಎಂದು ಶಾಸಕ ಸಿ.ಸಿ.ಪಾಟೀಲ ಹೇಳಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ತಾಲೂಕಿನ ಹದಲಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ 65 ಲಕ್ಷ ರೂ. ವೆಚ್ಚದ ಆಯುಷ್ಮಾನ್ ಆರೋಗ್ಯ ಕೇಂದ್ರದ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
40 ವರ್ಷದ ಬಳಿಕ ಮಾನವನ ನೆಮ್ಮದಿಯ ಜೀವನಕ್ಕೆ ನಿಯಮಿತ ಆಹಾರ ಸೇವನೆ, ವ್ಯಾಯಾಮ, ಸ್ವಚ್ಛತೆಗೆ ಪ್ರಾಮುಖ್ಯತೆ ನೀಡಬೇಕು. ಸರ್ಕಾರಕ್ಕಿಂತ ನಮ್ಮ ಹಕ್ಕು ಮತ್ತು ಕತರ್ರ್ವ್ಯವನ್ನು ಪಾಲಿಸಬೇಕು ಎಂದರು.
ಗ್ರಾಮದ ಹನುಮಂತ ದೇವರು, ಶ್ರೀವೀರಭದ್ರೇಶ್ವರ, ಶ್ರೀಶಿವಯೋಗೇಶ್ವರ ದೇವಸ್ಥಾನ ಸೇರಿದಂತೆ ವಿವಿಧ ದೇವಸ್ಥಾನಗಳ ಅಭಿವೃದ್ಧಿ, ಜೀರ್ಣೋದ್ಧಾರಕ್ಕೆ ತಲಾ 5 ಲಕ್ಷ ರೂ. ಅನುದಾನ ನೀಡಿದ್ದೇನೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಟ್ಟಡ ನಿರ್ಮಾಣಕ್ಕೂ 5 ಲಕ್ಷ ರೂ. ನೀಡುತ್ತೇನೆ. ರೈತರ ಜಮೀನಿಗೆ ತೆರಳುವ ಕಾಲುವೆ ರಸ್ತೆಗಳನ್ನು ವಿಬಿ ಜಿರಾಮ್ ಜಿ ಯೋಜನೆಯಡಿ ಅಭಿವೃದ್ದಿಪಡಿಸಲಾಗುತ್ತದೆ ಎಂದರು.
ಬಿ.ಜಿ. ಸುಂಕದ ಮಾತನಾಡಿದರು. ತಾಲೂಕು ಆರೋಗ್ಯಾಧಿಕಾರಿ ಡಾ. ರೇಣುಕಾ ಕೊರವನವರ, ತಾಪಂ ಇಒ ಶ್ರೀಧರ ಚಿನಗುಂಡಿ, ನಾಗನಗೌಡ ತಿಮ್ಮನಗೌಡ್ರ, ಪ್ರಕಾಶಗೌಡ ತಿರಕನಗೌಡ್ರ, ಸಿ.ಎಂ. ಬದ್ನಿಕಾಯಿ, ರಾಜುಗೌಡ ಪಾಟೀಲ, ಸುರೇಶಗೌಡ ತಮ್ಮನಗೌಡ್ರ, ಭೀಮಸಿ ಯಾವಗಲ್, ಅಜ್ಜಪ್ಪಗೌಡ ಅಲ್ಲಪ್ಪಗೌಡ್ರ, ಈಶ್ವರಯ್ಯ ಹಿರೇಮಠ, ಡಾ. ಪಂಕಜಾ ಮೈತ್ರಿ, ಬಸವರಾಜ ಹವಳಪ್ಪನವರ, ಮುತ್ತಪ್ಪ ನವಲಗುಂದ, ಭೀಮಪ್ಪ ಹಾದಿಮನಿ, ಸ್ವಪ್ನಾ ಅಂಗಡಿ, ಸೀಮಾ ತೆಗ್ಗಿ, ಶೋಭಾ ನಾಯಕ್, ಶಶಾಂಕ ನಂದರಗಿ, ಚಿದಾನಂದ ಕುಂಬಾರ, ಏಕನಾಥ ಇರಕಲ್, ಉಪಸ್ಥಿತರಿದ್ದರು. ಬಸವರಾಜ ಹುಡೇದಮನಿ ನಿರ್ವಹಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net