ಗ್ರಾಮದ ಡಂಬಳ ರಸ್ತೆಯ ಸರ್ಕಲ್‌ನಲ್ಲಿರುವ ದಲ್ಲೇಪ್ಪ ಕಟ್ಟಿಮನಿ ಎಂಬುವವರ ಕಿರಾಣಿ ಅಂಗಡಿಯಲ್ಲಿ ಆಕಸ್ಮಿಕವಾಗಿ ಬೆಂಕಿ ಬಿದ್ದಿದೆ. ಅಂಗಡಿಯಲ್ಲಿದ್ದ ಅಕ್ಕಿ, ರವೆ, ಮಂಡಕ್ಕಿ, ಸಕ್ಕರೆ, ಬೇಳೆ, ಅವಲಕ್ಕಿ, ಅಡುಗೆ ಎಣ್ಣೆ, ಕೋಲ್ಡ್ ಡ್ರಿಂಕ್ಸ್, ಕುಡಿಯುವ ನೀರಿನ ಬಾಟಲ್ ಮತ್ತಿತರ ಸಾಮಗ್ರಿ ಸೇರಿ ಅಂದಾಜು 2.5ಲಕ್ಷ ರೂ.ಮೌಲ್ಯದ ದಿನಸಿ ಸಾಮಗ್ರಿಗಳು ಮತ್ತು ಸುಮಾರು 35ರಿಂದ 40 ಸಾವಿರ ನಗದು ಸುಟ್ಟು ಹೋಗಿವೆ.