ಬೆಳೆ ಸಮೀಕ್ಷೆ ತಂತ್ರಾಂಶದಲ್ಲಿ ಬೆಳೆಗಳ ಫೋಟೋ ಕಡ್ಡಾಯವಾಗಿದೆ. ಯಾವುದೇ ಬೆಳೆಯ ಫೋಟೋ ಇಲ್ಲದಿದ್ದರೆ, ಸಮೀಕ್ಷೆಯಲ್ಲಿ ಪಾಳು ತಾಕು ಎಂದು ನಮೂದಾಗುತ್ತದೆ. ಹೆಸರು ಬಿತ್ತನೆ ಮಾಡಿ ಗೋವಿನಜೋಳ ಎಂದು ದಾಖಲಿಸಿದರೂ, ಫೋಟೋಕ್ಕೂ ಬೆಳೆಗೂ ವ್ಯತ್ಯಾಸವಿದೆ ಎಂದು ಬರುತ್ತದೆ. ಆದ್ದರಿಂದ, ಬೆಳೆ ನಾಶ ಪಡಿಸಿದ ರೈತರ ಸಮೀಕ್ಷೆಯಲ್ಲಿ ಪಾಳು ತಾಕು ಎಂದು ನಮೂದಾಗುತ್ತಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.