

ನರಗುಂದ: ಮನೆಯ ಛಾವಣಿಯ ಹೆಂಚುಗಳನ್ನು ತೆಗೆದು ಒಳನುಗ್ಗಿದ (
THEFT
) ಕಳ್ಳರು, ಟೇಬಲ್ ಡ್ರಾನಲ್ಲಿಟ್ಟಿದ್ದ ಬಂಗಾರದ ಆಭರಣ, ನಗದು ಕಳ್ಳತನ ಮಾಡಿದ ಘಟನೆ ಹಾಲಭಾವಿಕೇರಿ ಬಡಾವಣೆಯಲ್ಲಿ ಭಾನುವಾರ ನಡೆದಿದೆ. ಸುರೇಖಾ ರವಿ ದರಗ ಬಂಡಿವಡ್ಡರ ಅವರ ಮನೆಯಲ್ಲಿ ಕಳ್ಳತನ ನಡೆದಿದ್ದು, ಬಂಗಾರದ ಕಿವಿಯೋಲೆ, ಮೂಗುತಿ, ಬೆಳ್ಳಿಯ ಕಾಲುಚೈನ್ ಹಾಗೂ 50 ಸಾವಿರ ರೂ. ನಗದು ಕಳ್ಳತನವಾಗಿದೆ ಎಂದು ಸುರೇಖಾ ಅವರು ನರಗುಂದ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.