ಗುದ್ದಲಿ ಹಿಡಿದು ಕಂಟಿ ಕಡಿದ ತಾಪಂ ಇಒ NAREGA

ಗಜೇಂದ್ರಗಡ ತಾಲೂಕಿನ ಶಾಂತಗೇರಿ ಗ್ರಾಮದಲ್ಲಿ ನರೇಗಾ ಕಾಮಗಾರಿ ಸ್ಥಳಕ್ಕೆ ತಾಪಂ ಇಒ ಚಂದ್ರಶೇಖರ ಕಂದಕೂರ ಭೇಟಿ ನೀಡಿ, ಕೂಲಿಕಾರರೊಂದಿಗೆ ಕೆಲ ಸಮಯ ಕೆಲಸ ಮಾಡಿದರು. ರಾಜೂರು ಪಿಡಿಒ ಎಸ್.ಎಸ್. ತೊಂಡಿಹಾಳ, ಶಾಂತಗೇರಿ ಪಿಡಿಒ ಎಸ್.ಕೆ. ಕವಡೆಲಿ, ಕೂಲಿಕಾರರು ಇದ್ದರು.
ಗಜೇಂದ್ರಗಡ ತಾಲೂಕಿನ ಶಾಂತಗೇರಿ ಗ್ರಾಮದಲ್ಲಿ ನರೇಗಾ ಕಾಮಗಾರಿ ಸ್ಥಳಕ್ಕೆ ತಾಪಂ ಇಒ ಚಂದ್ರಶೇಖರ ಕಂದಕೂರ ಭೇಟಿ ನೀಡಿ, ಕೂಲಿಕಾರರೊಂದಿಗೆ ಕೆಲ ಸಮಯ ಕೆಲಸ ಮಾಡಿದರು. ರಾಜೂರು ಪಿಡಿಒ ಎಸ್.ಎಸ್. ತೊಂಡಿಹಾಳ, ಶಾಂತಗೇರಿ ಪಿಡಿಒ ಎಸ್.ಕೆ. ಕವಡೆಲಿ, ಕೂಲಿಕಾರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಗಜೇಂದ್ರಗಡ ತಾಲೂಕಿನ ರಾಜೂರು, ಶಾಂತಗೇರಿಯಲ್ಲಿ ನರೇಗಾ ಕಾಮಗಾರಿ ಪರಿಶೀಲನೆ
  • ಕೂಲಿಕಾರರಿಗೆ ನಿತ್ಯ ಎರಡು ಬಾರಿ ಹಾಜರಾತಿ ಕಡ್ಡಾಯ
ಗಜೇಂದ್ರಗಡ: ಗಜೇಂದ್ರಗಡ: ಸಾಮೂಹಿಕ ಬದು ನಿರ್ಮಾಣ ಕಾಮಗಾರಿ ಸ್ಥಳದಲ್ಲಿ ಕೂಲಿಕಾರರು ಕಡ್ಡಾಯವಾಗಿ ಎರಡು ಬಾರಿ ಹಾಜರಾತಿ ಹಾಕಿಸಬೇಕು. ಹಾಜರಾತಿ ಹಾಕಿಸದಿದ್ದರೆ ಕೂಲಿ ಪಾವತಿಯಾಗುವುದಿಲ್ಲ ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಬಿ. ಕಂದಕೂರ ಹೇಳಿದರು.
ತಾಲೂಕಿನ ರಾಜೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ನಡೆಯುತ್ತಿರುವ ಮೊದಲನೇ ದಿನದ ಸಾಮೂಹಿಕ ಬದು ನಿರ್ಮಾಣ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಅವರು ಮಾತನಾಡಿದರು.
ಎನ್‌ಎಂಆರ್‌ನಲ್ಲಿ ಹೆಸರು ಇರುವ ಕೂಲಿಕಾರರು ಮಾತ್ರ ಕೆಲಸಕ್ಕೆ ಬರಬೇಕು. ಕೂಲಿಕಾರರು ಎರಡು ಬಾರಿ ಹಾಜರಾತಿ ಹಾಕುವವರೆಗೂ ಕೆಲಸದ ಸ್ಥಳದಲ್ಲಿಯೇ ಇರಬೇಕು. ತಮಗೆ ಕೊಟ್ಟಿರುವ ಅಳತೆಯಂತೆ ಕೆಲಸ ಮಾಡಿದರೆ ಮಾತ್ರ ಪೂರ್ಣ ಪ್ರಮಾಣದ ಕೆಲಸ ಸಿಗಲಿದೆ. ಆದ್ದರಿಂದ ಎಲ್ಲರೂ ಸರಿಯಾಗಿ ಕೆಲಸ ನಿರ್ವಹಿಸಿ 370 ರೂಪಾಯಿ ಕೂಲಿ ಮೊತ್ತ ಪಡೆಯಬೇಕು ಎಂದರು.
ತಾಪಂ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಸಹಾಯಕ ನಿರ್ದೇಶಕ ವಿಶ್ವನಾಥ ರಾಠೋಡ ಮಾತನಾಡಿ, ಕೂಲಿಕಾರರು 10/10/2 ಅಳತೆಗೆ ತಕ್ಕಂತೆ ಕೆಲಸ ಮಾಡಿದರೆ ಮಾತ್ರ ದಿನಕ್ಕೆ 370 ರೂಪಾಯಿ ತಮ್ಮ ಖಾತೆಗೆ ನೇರವಾಗಿ ಪಾವತಿ ಆಗಲಿದೆ. ಕೂಲಿಕಾರರು ಸರಿಯಾಗಿ ಕೆಲಸ ಮಾಡುವುದರ ಜತೆಗೆ ಪಂಚಾಯಿತಿ ಸಿಬ್ಬಂದಿಗೆ ಸಹಕಾರ ನೀಡಬೇಕು. ಕಾಯಕ ಬಂಧುಗಳು ಕೂಲಿಕಾರರಿಗೆ ಸರಿಯಾಗಿ ಅಳತೆ ಪ್ರಮಾಣ ಹಾಜರಾತಿ ಹಾಕಿಸಬೇಕು ಎಂದರು.
ನರೇಗಾ ಯೋಜನೆಯಡಿ ಕೂಲಿಕಾರರು ಬೇಸಿಗೆ ಅವಧಿಯಲ್ಲಿ ಕೂಲಿ ಕೆಲಸ ಪಡೆದುಕೊಂಡು ತಮ್ಮ ಜೀವನಮಟ್ಟ ಸುಧಾರಿಸಿಕೊಳ್ಳಬೇಕು. ಯೋಜನೆಯಡಿ ಪಡೆಯುವ ಹಣ ತಮ್ಮ ಮಕ್ಕಳ ವಿದ್ಯಾಭ್ಯಾಸ ಹಾಗೂ ಮಳೆ ಬಿದ್ದ ಬಳಿಕ ಕೃಷಿ ಚಟುವಟಿಕೆ, ಬೀಜ, ಗೊಬ್ಬರ ಖರೀದಿಗೆ ಸಹಾಯವಾಗುತ್ತದೆ. ಮಳೆ ಬಿದ್ದು ಕೃಷಿ ಚಟುವಟಿಕೆ ಆರಂಭವಾಗುವವರೆಗೂ ನರೇಗಾ ಯೋಜನೆಯಡಿ ಕೆಲಸ ಕೊಡಲಾಗುವುದು ಎಂದರು.
ರಾಜೂರು ಪಿಡಿಒ ಎಸ್.ಎಸ್. ತೊಂಡಿಹಾಳ, ಶಾಂತಗೇರಿ ಪಿಡಿಒ ಎಸ್.ಕೆ. ಕವಡೆಲಿ, ಕಾರ್ಯದರ್ಶಿ ರಾಜು ಗಾರಗಿ, ತಾಂತ್ರಿಕ ಸಂಯೋಜಕ ಪ್ರಕಾಶ ಮ್ಯಾಕಲ್, ಪಂಚಾಯಿತಿ ಸಿಬ್ಬಂದಿ, ಕಾಯಕ ಬಂಧುಗಳು, ಕೂಲಿಕಾರರು ಇದ್ದರು.

ಗುದ್ಲಿ ಹಿಡಿದು ಕಂಟಿ ಕಡಿದ ತಾಪಂ ಇಒ
ರಾಜೂರು ಗ್ರಾಮದಲ್ಲಿ ನಡೆದ ಸಾಮೂಹಿಕ ಬದು ನಿರ್ಮಾಣ ಕಾಮಗಾರಿ ಸ್ಥಳದಲ್ಲಿ ತಾಪಂ ಇಒ ಚಂದ್ರಶೇಖರ ಕಂದಕೂರ ಅವರು, ಕೂಲಿಕಾರರ ಜತೆಗೆ ಗುದ್ಲಿ ಹಿಡಿದು ಕಂಟಿ ಕಡಿದು ಕೂಲಿಕಾರರ ಗಮನ ಸೆಳೆದರು. ಕೂಲಿಕಾರರ ಜತೆಗೆ ಸಂವಾದ ನಡೆಸಿ, ಸರಿಯಾಗಿ ಕೆಲಸ ಮಾಡಿದರೆ ನಿರಂತರ ಕೆಲಸ ಕೊಡುವುದಾಗಿ ಭರವಸೆ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net