ಕಳೆದ 10 ವರ್ಷದಿಂದ ಸ್ಥಿಗಿತಗೊಂಡಿದ್ದ ಮರಳು ಗುತ್ತಿಗೆ ಪ್ರಕ್ರಿಯೆ ಪುನರಾರಂಭ

ಗದಗ ನಗರದ ಪ್ರವಾಸಿ ಮಂದಿರದಲ್ಲಿ ಮರಳು ಗುತ್ತಿಗೆ ನೀಡುವ ಪೂರ್ವಭಾವಿ ಸಭೆ ಜರುಗಿತು. ಗುತ್ತಿಗೆದಾರರು, ಇಲಾಖಾ ಅಧಿಕಾರಿಗಳು ಇದ್ದರು.
ಗದಗ ನಗರದ ಪ್ರವಾಸಿ ಮಂದಿರದಲ್ಲಿ ಮರಳು ಗುತ್ತಿಗೆ ನೀಡುವ ಪೂರ್ವಭಾವಿ ಸಭೆ ಜರುಗಿತು. ಗುತ್ತಿಗೆದಾರರು, ಇಲಾಖಾ ಅಧಿಕಾರಿಗಳು ಇದ್ದರು.
Published on
ನೂರಾರು ಕೋಟಿ ಮೊತ್ತದ ಮರಳು ಗುತ್ತಿಗೆ ಪೂರ್ವಸಭೆ
ತುಂಗಭದ್ರಾ ನದಿ ಪಾತ್ರದ 19 ಮರಳು ಪಾಯಿಂಟ್​ಗೆ ಗುತ್ತಿಗೆ
ಗೊಂದಲದ ಗೂಡಾದ ಮಹತ್ವದ ಸಭೆ
ಶಿವಾನಂದ ಹಿರೇಮಠ ಗದಗ
ಅಕ್ರಮ ಮರಳು ಸಾಗಾಟ ಮತ್ತು ಹತ್ತಾರು ಕೋಟಿ ದಂಡ ವಿಧಿಸಿದ್ದ ಕಾರಣದಿಂದ ಕಳೆದ ಹತ್ತು ವರ್ಷಗಳಿಂದ ಸ್ಥಗಿತಗೊಂಡಿದ್ದ ತುಂಗಭದ್ರ ನದಿ ತಟದ ಮರಳು ಸಾಗಾಟ ಗುತ್ತಿಗೆ ಪ್ರಕ್ರಿಯೆಗೆ ಜಿಲ್ಲೆಯಲ್ಲಿ ಚಾಲನೆ ಸಿಕ್ಕಿದೆ. ಜಿಲ್ಲೆಯ ಮುಂಡರಗಿ, ಭಾಗದಲ್ಲಿ ಹರಿದಿರುವ ತುಂಗಭದ್ರ ನದಿ ತಟದ 19 ಸ್ಥಳಗಳಲ್ಲಿ ಮರಳು ಗುತ್ತಿಗೆ ನಿಡಲಾಗುತ್ತಿದ್ದು, ಗುತ್ತಿಗೆ ಪೂರ್ವ ಸಭೆಯನ್ನು ಸೋಮವಾರ ಪ್ರವಾಸಿ ಮಂದಿರದಲ್ಲಿ ನಡೆಸಲಾಯಿತು. ಈ ವೇಳೆ ಅಧಿಕಾರಿ ಮತ್ತು ಗುತ್ತಿಗೆದಾರರ ನಡುವೆ ಸರ್ಕಾರಕ್ಕೆ ಭರಿಸುವ ರಾಯಲ್ಟಿ, ಸಾಗಾಟ ವೆಚ್ಚ ಕುರಿತು ಕೆಲ ಗೊಂದಲಗಳು ಏರ್ಪಟ್ಟು ಆಬಾಸ ಉಂಟಾಯಿತು.
ಕಳೆದ 2016ರಲ್ಲಿ ಕೊನೆಯ ಬಾರಿ ತುಂಗಭದ್ರ ನದಿ ತಟದ ಮರಳು ಗುತ್ತಿಗೆ ಪ್ರಕ್ರಿಯೆ ನಡೆಸಲಾಗಿತ್ತು. ತದನಂತರ ಮರಳು ಗುತ್ತಿಗೆದಾರರ ಅಕ್ರಮ ಸಾಗಾಟ, ಮತ್ತೀತರೆ ಕಾರಣದಿಂದ ಸರ್ಕಾರವು ಕೋಟ್ಯಮತರ ದಂಡ ವಿಧಿಸಿತ್ತು. ಈ ಪ್ರಕರಣಗಳು ನ್ಯಾಯಾಲಯದ ಮೆಟ್ಟಿಲೇರಿದ್ದವು. ಪ್ರಸ್ತುತ ಕೆಲ ತೋಡಕುಗಳು ನಿವಾರಣೆ ಆದ ಕಾರಣದಿಂದ 10 ವರ್ಷಗಳ ನಂತರ ಮತ್ತೇ ಪ್ರಕ್ರಿಯೆ ಆರಂಭಿಸಲಾಗಿದೆ. ಕಳೆದ ಬಾರಿ ಗುತ್ತಿಗೆಯಲ್ಲಿ ಭಾಗವಹಿಸಿ ದಂಡ ಕಟ್ಟಿದವರು ಈ ಬಾರಿ ಟೆಂಡರ್​ ಪ್ರಕ್ರಿಯೆಯಲ್ಲಿ ಭಾಗವಹಿಸುವಂತಿಲ್ಲ ಎಂದು ಇಲಾಖೆ ತಿಳಿಸಿದ್ದು, ಟೆಂಡರ್​ ಪ್ರಕ್ರಿಯೆಯಲ್ಲಿ ಭಾಗವಹಿಸಲು ಇಚ್ಚಿಸಿದ್ದೇ ಆದರೆ ಪರಿರ್ಪೂಣ ದಂಡ ಪಾವತಿಸಿದ ದಾಖಲೆ ಸಮೇತ ಭಾಗವಹಿಸಬಹುದು ಎಂದು ತಿಳಿಸಿದೆ.
ಏನಿದು ಸಭೆ.
ಜಿಲ್ಲೆಯ ಶಿರಹಟ್ಟಿ, ಮತ್ತು ಮುಂಡರಗಿ ತಾಲೂಕಿನಲ್ಲಿ ಹರಿಯುವ ತುಂಗಭದ್ರಾ ನದಿಯಲ್ಲಿ ಲಭ್ಯವಿರುವ ಹೇರಳವಾದ ಮರಳನ್ನು ಹರಾಜು ಮಾಡಲಾಗುತ್ತಿದೆ. ಗದಗ ಜಿಲ್ಲೆಯಲ್ಲಿ ಒಟ್ಟು 19 ಮರಳು ಬ್ಲಾಕ್​ ಗಳನ್ನು ಗುರುತಿಸಲಾಗಿದ್ದು ಅವುಗಳನ್ನು ಹರಾಜು ಮಾಡಲು ಕ್ರಮ ತೆಗೆದುಕೊಂಡಿದೆ. ಸಭೆಯಲ್ಲಿ ಒಂದು ಟನ್​ ಮರಳಿಗೆ ಅಮದಾಜು 550 ರೂ. ಸರ್ಕಾರಕ್ಕೆ ರಾಯಲ್ಟಿ ಭರಿಸುವ ಕುರಿತು ಚರ್ಚೆ ಆಯಿತು. ಜತೆಗೆ ಒಂಟು ಟನ್​ ಮರಳನ್ನು ನದಿ ತಟದಿಂದ ಸ್ಟಾಕ್​ ಯಾರ್ಡ ಗೆ ವರ್ಗಾಯಿಸಲು ಕನಿಷ್ಠ 255 ರೂ.ಗಳನ್ನು ಗುತ್ತಿಗೆದಾರರಿ ನೀಡುವ ಕುರಿತು ಸಭೆಯಲ್ಲಿ ಚರ್ಚೆ ನಡೆದವು. ಈ ವೇಳೆ ಕೆಲ ಗೊಂದಲ ಏರ್ಪಟ್ಟು, ಲಾಂತರ ರೂ. ಠೇವಣಿ ಕಟ್ಟಿ, ಗುತ್ತಿಗೆಯಲ್ಲಿ ಭಾಗವಹಿಸಿದ ನಂತರವೂ ಕೆಲ ಸಂಗಟನೆಗಳು ಕೊರ್ಟಮೆಟ್ಟಿಲೇರಿ ಗುತ್ತಿಗೆ ಪ್ರಕ್ರಿಯೆ ಸ್ಥಗಿತಗೊಳಿಸುತ್ತವೆ. ಈ ಸಂದರ್ಭದಲ್ಲಿ ನಮ್ಮ ಠೇವಣಿ ಮೊತ್ತದ ಗತಿ ಏನು ಎಂದು ಪ್ರಶ್ನಿಸಿದರು. ಇದಕ್ಕೆ ಇಲಾಖೆ ಬಳಿ ಉತ್ತರ ಇರಲಿಲ್ಲ.
ಈ ವರ್ಷ ಅನುಮಾನ:
ಗುತ್ತಿಗೆ ಪ್ರಕ್ರಿಯೆ ಆರಂಭಿಸಿದರೂ ಕೂಡ ಮಳೆಗಾಲದ ಪೂರ್ವದಲ್ಲಿ ಮರಳು ಸಾಗಾಟ ಪ್ರಕ್ರಿಯೆ ಆರಂಭ ಆಗುವುದು ಅಸಾಧ್ಯವಾಗಿದೆ. ಮೆ ಮತ್ತು ಜೂನ್​ ತಿಂಗಳಲ್ಲಿ ಮಳೆ ಆರಂಭವಾಗುವ ಹಿನ್ನೆಲೆ ಗುತ್ತಿಗೆ ಪ್ರಕ್ರಿಯೆ ಸಂರ್ಪೂಣ ಮುಗಿಯುವುದು ಅಸಂಭವ. ಮುಂಬರುವ ಡಿಸೆಂಬರ್​ ನಿಮದ ಏಪ್ರಿಲ್​ ವರೆಗೆ ಈ ಪ್ರಕ್ರಿಯೆ ಜರುಗಬಹುದು ಎನ್ನಲಾಗಿದೆ.
ಚಿಟಿ ಎತ್ತುವ ಹೊಸ ನಿಯಮ:
ಈ ಮೊದಲು ಪ್ರತಿ ಟನ್​ ಮರಳಿಗೆ ಕಡಿಮೆ ಮೊತ್ತದ ಬಿಡ್​ ಮಾಡಿದ ವ್ಯಕ್ತಿಗೆ ಗುತ್ತಿಗೆ ನೀಡಲಾಗುತ್ತಿತ್ತು. ಈಗ ಒಂದೇ ಮೊತ್ತವನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಿಗದಿ ಪಡಿಸುತ್ತದೆ. ಆದರೆ, ಗುತ್ತಿಗೆದಾರರ ಹೆಸರನ್ನು ಚೀಟಿಯಲ್ಲಿ ಬರೆದು ಡಬ್ಬದಲ್ಲಿ ಹಾಕಲಾಗುತ್ತದೆ. ಚೀಟಿ ಎತ್ತುವ ಮೂಲಕ ಮರಳು ಗುತ್ತಿಗೆಯನ್ನು ನೀಡಲಾಗುತ್ತದೆ. ಯಾರ ಹೆಸರು ಚೀಟಿಯಲ್ಲಿ ಬರುತ್ತದೋ ಅವರು ಗುತ್ತಿಗೆ ಪಡೆಯಬಹುದು. ಆದರೆ, ಪಡೆದ ಗುತ್ತಿಗೆಯನ್ನೂ ವರ್ಗಾಯಿಸುವಂತಿಲ್ಲ.
ಮಾಹಿತಿಯೇ ಇಲ್ಲ:
ಬಿಡ್ಡಿಂಗ್​ ನಲ್ಲಿ ಮರಳು ಗುತ್ತಿಗೆದಾರರಿಗೆ ಇರಬೇಕಾದ ತಿಳವಳಿಕೆ ನೀಡುವ ನಿಟ್ಟಿನಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಪ್ರೀ ಬಿಡ್ಡಿಂಗ್​ ಹೆಸರಿನಲ್ಲಿ ಸಭೆ ಕರೆದಿದ್ದಾರೆ, ಆದರೆ ಸಭೆಗೆ ಕೇವಲ ಬೆರಳೆಣಿಕೆಯಷ್ಟು ಜನರಿಗೆ ಮಾತ್ರ ಮಾಹಿತಿ ನೀಡಿದ್ದಾರೆ. ಮುಖ್ಯವಾಗಿ ಜಿಲ್ಲೆಯ ಪ್ರಮುಖ ರಾಜಕೀಯ ನಾಯಕರ ಒತ್ತಾಸೆಯಂತೆ ಸಭೆ ನಡೆಸಲಾಗಿದೆ. ಸಭೆಗೆ ಬೇಕಾದವರಿಗಷ್ಟೇ ಮಾಹಿತಿ ನೀಡಲಾಗಿದೆ ಎನ್ನುವ ಗಂಭೀರ ಆರೋಪಗಳು ಕೂಡಾ ಸಭೆ ಪ್ರಾರಂಭ ಪೂರ್ವದಲ್ಲಿಯೇ ಕೇಳಿ ಬಂದವು.
ಪೊಲೀಸ್​ ಠಾಣೆಯನ್ನೇ ಸುಟ್ಟಿದ್ದರು:
ಮರಳು ಸಾಗಾಟ ಪ್ರಕ್ರಿಯೆಯಲ್ಲಿ ಪೊಲೀಸರು ಪ್ರಭಾವ ಬೀರುತ್ತಿದ್ದಾರೆ ಎಂದು ಆರೋಪಿಸಿದ್ದ ಸ್ಥಳಿಯ ಜನರು ಈ ಹಿಂದೆ ಲೆ$್ಮಶ್ವರ ಪೊಲೀಸ್​ ಠಾಣೆಗೆ ಬೆಂಕಿ ಹಚ್ಚಿದ್ದರು. ಮರಳು ದಂಧೆ ಮೇಲೆ ಪೊಲೀಸರ ಮಾಫಿಯಾದ ಕರಿ ನೆರೆಳು ಇತ್ತು ಎನ್ನುವುದು ಕೂಡಾ ಜಗಜ್ಜಾಹಿರಾಗಿತ್ತು. ಮತ್ತೆ ಮರಳು ದಂಧೆ ಪ್ರಾರಂಭವಾದಲ್ಲಿ ಈಗ ಯಾವ ಸ್ವರೂಪ ಪಡೆದುಕೊಳ್ಳುತ್ತದೆ ಎನ್ನುವ ಆತಂಕ ಜಿಲ್ಲೆಯ ಶಿರಹಟ್ಟಿ, ಲೆ$್ಮಶ್ವರ ಮತ್ತು ಮುಂಡರಗಿ ತಾಲೂಕು ಜನರಲ್ಲಿ ಕಾಡುತ್ತಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net