ನಗರದ ಹುಡ್ಕೋ ಕಾಲನಿಯ ನಿವಾಸಿ ವಿರೇಶ ಪೂಜಾರ ಬುಧವಾರ ದೂರು ಸಲ್ಲಿಸಿದ್ದರು. ವಿರೇಶ ಅವರ ತಾಯಿಯ ಹೆಸರಿನಲ್ಲಿ ಅರ್ಜಿಯೊಂದ ಪೊಲೀಸ್ ಠಾಣೆಗೆ ಸಲ್ಲಿಸಲಾಗಿತ್ತು. ಈ ಅಜಿರ್ಯನ್ನು ವಜಾ ಮಾಡಬೇಕು ಎಂದು ವಿರೇಶ ಮನವಿ ಮಾಡಿದ್ದರು. ವಜಾ ಮಾಡಲು ಎಎಸ್ಐ ಇಂಗಳಹಳ್ಳಿ ಅವರು 13 ಸಾವಿರ ರೂ. ಬೇಡಿಕೆ ಇಟ್ಟಿದ್ದರು. ಕೊನೆಗೆ 10 ಸಾವಿರ ರೂ. ಲಂಚದ ವ್ಯವಹಾರ ಕುದರಿತ್ತು ಎಂದು ತಿಳಿದು ಬಂದಿದೆ. ಈ ಬಗ್ಗೆ ವಿರೇಶ ಗದಗ ಲೋಕಾಯುಕ್ತ ಕಚೇರಿಗೆ ದೂರು ಸಲ್ಲಿಸಿದ್ದರು. 10 ಸಾವಿರ ರೂ. ಲಂಚ ನೀಡುವ ವೇಳೆ ಎಎಸ್ಐ ಇಂಗಳಹಳ್ಳಿ ಲೋಕಾ ಬಲೆಗೆ ಬಿದ್ದಿದ್ದಾರೆ. ಕಾರ್ಯಾಚರಣೆಯಲ್ಲಿ ಲೋಕಾ ಅಧಿಕಾರಿಗಳಾದ ವಿಜಯ ಬಿರಾದಾರ, ಪರಮೇಶ ಕವಟಗಿ, ಎಸ್.ಎಸ್. ತೇಲಿ, ಎಂ. ಎಂ. ಅಯ್ಯನಗೌಡ್ರ ಇತರರು ಇದ್ದರು.