ಆ. 19 ರಿಂದ ಗದಗ ಜಿಲ್ಲಾ ಕಾನಿಪ ಕ್ರಿಕೆಟ್​ ಪಂದ್ಯಾವಳಿಗಳು

Gadag Journalist Association
Gadag Journalist Association
Published on

ಗದಗ:

ಜಿಲ್ಲಾ ಕಾರ್ಯನಿರತ ಪತ್ರಕರ್ತರಿಗಾಗಿ ಮಾಧ್ಯಮ ಕ್ರಿಕೆಟ್​ ಲೀಗ್​ ಆಯೋಜನೆ ಮಾಡಲಾಗಿದೆ. ನಗರದ ವಿಡಿಎಸ್​ಟಿಸಿ ಮೈದಾನದಲ್ಲಿ ಆ. 19 ರಿಂದ ಪಂದ್ಯಾವಳಿಗಳು ನಡೆಯಲಿವೆ. ಜಿಲ್ಲೆಯ ಒಟ್ಟು ನಾಲ್ಕು ತಂಡಗಳು ಭಾಗವಹಿಸಲಿವೆ ಎಂದು ಕಾನಿಪ ಜಿಲ್ಲಾಧ್ಯಕ್ಷ ರಾಜು ಹೆಬ್ಬಳ್ಳಿ ಸೋಮವಾರ ಜರುಗಿದ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಕ್ರೀಡಾಪಟುಗಳು ಕಡ್ಡಾಯವಾಗಿ ಕಾನಿಪ ಸಂದ ಸದಸ್ಯತ್ವ ಕಾರ್ಡ ಹೊಂದಿರಬೇಕು. ಈಗಾಗಲೇ ಒಂದು ತಂಡದಲ್ಲಿ 14 ಸದಸ್ಯರಿದ್ದು, ಹೆಚ್ಚುವರಿಯಾಗಿ ಓರ್ವ ಕಾನಿಪ ಸದಸ್ಯರನ್ನು ಸೇರ್ಪಡೆಗೊಳಿಸಲು ಅವಕಾಶ ಕಲ್ಪಿಸಲಾಗಿದೆ ಎಂದರು.

ವಿನ್ನರ್ಸ ತಂಡದ ಮಾಲಿಕ ಡಾ. ಅನಂತ ಕಾರ್ಕಳ, ರೂರಲ್ಸ್​ ತಂಡದ ಮಾಲೀಕ ಜಗದಿಶ ಪೂಜಾರ, ನೈಟ್​ ರೈಡರ್ಸ ತಂಡದ ಮಾಲೀಕ ಆನಂದಯ್ಯ ವಿರಕ್ತಮಠ ಮಾತನಾಡಿದರು. ರಾಜ್ಯ ಕಾರ್ಯಕಾರಣಿ ಸದಸ್ಯ ಅರುಣಕುಮಾರ ಹಿರೇಮಠ, ಜಿಲ್ಲಾ ಪ್ರಧಾನ ಕಾರ್ಯದಶಿರ್ ಶರಣು ದೊಡ್ಡೂರ, ವೆಂಕಟೇಶ ಇಮರಾಪೂರ, ಸಂತೋಷ ಕೊಣ್ಣೂರ ಸೇರಿದಂತೆ ಇತರರು ಇದ್ದರು.
ಪೋಟೋ 17ಜಿಡಿಜಿ03: ರಾಜು ಹೆಬ್ಬಳ್ಳಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net